ಫ್ಯಾಷನ್‌ ಶೋನಲ್ಲಿ ಕ್ಯಾಟ್‌ವಾಕ್‌ ಮಾಡುವಾಗಲೇ ಕುಸಿದುಬಿದ್ದ ಪ್ರಾಣ ಬಿಟ್ಟ ರೂಪದರ್ಶಿ

ಸಾವ್ ಪಾಲೊ: ಸಾವ್ ಪಾಲೊ ಫ್ಯಾಶನ್‌ ವೀಕ್‌ ಕೊನೆಯ ದಿನದ ಫ್ಯಾಷನ್‌ ಶೋ ನಡೆಯುತ್ತಿದ್ದ ವೇಳೆ ಕ್ಯಾಟ್‌ ವಾಕ್‌ ಮಾಡುವಾಗಲೇ ರೂಪದರ್ಶಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಬ್ರೆಜಿಲ್‌ನಿಂದ ವರದಿಯಾಗಿದೆ.

ಓಕ್ಸಾ ಪ್ರದರ್ಶನದ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದು ಮಾಡೆಲ್‌ ಟೇಲ್ಸ್ ಸೋರೆಸ್‌ ಅವರು ಮೃತಪಟ್ಟಿರುವ ಸುದ್ದಿಯು ಈಗತಾನೆ ತಲುಪಿದೆ ಎಂದು ಮಾಡೆಲ್‌ ಸಾವಿಗೆ ಕಾರಣವನ್ನು ಹೇಳದೆಯೇ ಸಂಘಟನೆಯು ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

26 ವರ್ಷದ ರೂಪದರ್ಶಿಯು ವೇದಿಕೆ ಮೇಲೆ ವಾಕ್‌ ಮಾಡುತ್ತಿರುವಾಗ ಹಿಂತಿರುಗುವ ವೇಳೆ ಅಕಸ್ಮಾತ್‌ ಆಗಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಎಸ್‌ಪಿಎಫ್‌ಡಬ್ಲು ಪ್ರಕಾರ, ಕುಸಿದುಬಿದ್ದ ಮಾಡೆಲ್‌ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಟೇಲ್ಸ್‌ ಸಾವಿಗೆ ಸಂತಾಪ ಸೂಚಿಸುತ್ತೇವೆ. ಟೇಲ್ಸ್‌ ಅವರ ಸಾವಿಗೆ ಇಡೀ ತಂಡವೇ ಆಘಾತಕ್ಕೊಳಗಾಗಿದೆ ಎಂದು ತಿಳಿಸಿದೆ. (ಏಜೆನ್ಸೀಸ್)