ಬೊಜ್ಜು ಕರಗಿಸಿ ಐದೇ ವರ್ಷದಲ್ಲಿ ಬಾಡಿ ಬಿಲ್ಡರ್​ ಆಗಿದ್ದ 19 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ!

Brazil Bodybuilder

ಬ್ರಾಸಿಲಿಯಾ: ಬೊಜ್ಜನ್ನು ಮೆಟ್ಟಿನಿಂತು ಕೆಲವೇ ವರ್ಷಗಳಲ್ಲಿ ಬಾಡಿ ಬಿಲ್ಡರ್​ ಆಗಿ ಪರಿವರ್ತನೆಗೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ 19 ವರ್ಷದ ಯುವಕ ಹೃದಯಾಘಾತದಿಂದ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ.

ಮೃತ ಬಾಡಿ ಬಿಲ್ಡರ್​ ಅನ್ನು ಮ್ಯಾಥೀವ್ಸ್​ ಪಾವ್ಲಕ್​ ಎಂದು ಗುರುತಿಸಲಾಗಿದೆ. ಬೊಜ್ಜಿನಿಂದ ಹೊರಬರುವ ಸಲುವಾಗಿ ಪಾವ್ಲಕ್​ ಬಾಡಿ ಬಿಲ್ಡಿಂಗ್​ ಮಾಡಲು ಆರಂಭಿಸಿದ್ದರು. ಬಲೂನ್​ನಂತೆ ಇದ್ದ ದೇಹವನ್ನು ಕೇವಲ ಐದೇ ವರ್ಷದಲ್ಲಿ ಕರಗಿಸಿ, ಸಂಪೂರ್ಣ ಬದಲಾಗಿದ್ದರು.

ಪಾವ್ಲಕ್​ ಅನೇಕ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಗೆದ್ದಿದ್ದಾರೆ. ದಕ್ಷಿಣ ಬ್ರೆಜಿಲಿಯನ್ ಸಾಂಟಾ ಕ್ಯಾಟರಿನಾದಲ್ಲಿ ನಡೆದ ಪ್ರಾದೇಶಿಕ ಸ್ಪರ್ಧೆಗಳಲ್ಲಿ 4 ಮತ್ತು 6ನೇ ಸ್ಥಾನ ಗಳಿಸಿದ್ದರು. 2023ರಲ್ಲಿ ಅಂಡರ 23 ಸ್ಪರ್ಧೆಯನ್ನು ಗೆದ್ದಿದ್ದರು. ಆದುದರಿಂದಲೇ ಅವರ ಊರಿನಲ್ಲಿ ಎಲ್ಲರೂ ಪ್ರೀತಿಯಿಂದ ಪಾವ್ಲಕ್ ಅವರನ್ನು “ಮಿಸ್ಟರ್ ಬ್ಲೂಮೆನೌ” ಎಂದು ಕರೆಯುತ್ತಿದ್ದರು.

ಪಾವ್ಲಕ್ ಅವರು ಅಕಾಲಿಕ ಮರಣ ಹೊಂದಿದ್ದು, ಸಾವಿನ ಸುತ್ತ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಆರೋಗ್ಯ ಸಮಸ್ಯೆಗಳಿಂದ ಅಕಾಲಿಕ ಮರಣ ಹೊಂದಿದ್ದಾರೆ ಮತ್ತು ಮಿತಿಮೀರಿದ ಸ್ಟಿರಾಯ್ಡ್​ಗಳಿಂದ ಮೃತಪಟ್ಟಿದ್ದಾರೆಂದು ಊಹಾಪೋಹಗಳು ಹರಿದಾಡುತ್ತಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಕರ್ಷಕ ಮೈಕಟ್ಟು ಬದಲಾಯಿಸುವುದು ಸುಲಭದ ಕೆಲಸವಲ್ಲ ಎಂದು ಅನೇಕ ತಜ್ಞರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಔಷಧಿಗಳ ಮಿತಿಮೀರಿದ ಸೇವನೆಯು ಹೃದಯಾಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಆದರೆ, ಪಾವ್ಲಾಕ್ ಅವರ ಆಪ್ತ ಸ್ನೇಹಿತ ಈ ಊಹಾಪೋಹಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ಬೊಜ್ಜನ್ನು ಹೋಗಲಾಡಿಸಲು ಪಾವ್ಲಾಕ್ ಅವರು ಈ ಹಿಂದೆ ಎಷ್ಟು ಶ್ರಮಪಟ್ಟರು ಮತ್ತು ಹೇಗೆ ಬಾಡಿಬಿಲ್ಡರ್ ಆದರು ಎಂಬುದಕ್ಕೆ ಸಾಕ್ಷಿಯಾಗಿ ಸಾಕಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಇನ್ನು ಪಾವ್ಲಾಕ್‌ನ ಮಾಜಿ ತರಬೇತುದಾರ ಲೂಕಾಸ್ ಚೆಗಟ್ಟಿ ಕೂಡ ತನ್ನ ಸ್ನೇಹಿತನನ್ನು ಕಳೆದುಕೊಂಡಿರುವ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು ಇಂದು ಓರ್ವ ಉತ್ತಮ ಸ್ನೇಹಿತನನ್ನು ಕಳೆದುಕೊಂಡ ದುಃಖದ ದಿನ. ಪಾವ್ಲಕ್​ ಬೇಗನೆ ನಮ್ಮನ್ನು ಅಗಲಿದರು. ಪಾವ್ಲಕ್ 2022 ರಲ್ಲಿ ನನ್ನನ್ನು ಭೇಟಿಯಾದರು. ಅವರಿಗೆ ಉಜ್ವಲ ಭವಿಷ್ಯವಿತ್ತು. ಆತ ಅತ್ಯಂತ ಗೌರವಾನ್ವಿತ ಕ್ರೀಡಾಪಟು. ಆದರೆ, ಹಿಂತಿರುಗದ ಲೋಕಕ್ಕೆ ಹೋಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ನಿಮ್ಮ ಅಂಗೈನಲ್ಲಿ M ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಟೀಮ್​ ಇಂಡಿಯಾಗಿಂತ IPL​ ತಂಡಕ್ಕೆ ಕೋಚ್​ ಆಗುವುದೇ ಬೆಸ್ಟ್​! ವೀರೂ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…