ಉಡುಪಿ ಗಣರಾಜ್ಯೋತ್ಸವದಲ್ಲಿ ‘ಸುಲ್ತಾನ್’ ರಾಯಲ್ ಎಂಟ್ರಿ

ಉಡುಪಿ: ಜಿಲ್ಲೆಯ ಮಹಾತ್ಮಗಾಂಧಿ ರಂಗ ಮಂದಿರದಲ್ಲಿ ಆಯೋಜನೆಗೊಂಡಿದ್ದ ಗಣರೋಜ್ಯೋತ್ಸವ ಕಾರ್ಯಕ್ರಮದಲ್ಲಿ ಸುಲ್ತಾನ್… ವಿಶೇಷ ಆಕರ್ಷಣೆಯಾಗಿದ್ದ! ಹೌದು, ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ರಾಷ್ಟ್ರಧ್ವಜದೊಂದಿಗೆ ಮೈದಾನದಲ್ಲಿ ಗಾಂಭೀರ್ಯದಿಂದ ಹೆಜ್ಜೆಯ ಮೇಲೆ ಹೆಜ್ಜೆಯನ್ನಿರಿಸಿಕೊಂಡು ಬರುತಿದ್ದ ಸುಲ್ತಾನ್​ನನ್ನು ಎಲ್ಲರು ಬೆರಗುಗಣ್ಣಿನಿಂದ ನೋಡಿ, ಅಚ್ಚರಿ ವ್ಯಕ್ತಪಡಿಸಿದರು.

ಬ್ರಹ್ಮಾವರ ಉಪ್ಪಿನಕೋಟೆಯಲ್ಲಿ ಹೈನುಗಾರಿಕೆ, ಕೃಷಿ ಕಸುಬು ವೃತ್ತಿ ಕೈಗೊಂಡಿರುವ ಯುವಕ ಮಹಮ್ಮದ್ ಇರ್ಷಾದ್​ ಅಬಿಧಿನ್ ಅವರ ನೆಚ್ಚಿನ ಓಂಗುಲ್ ತಳಿಯ ಎತ್ತು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು, ಇತರೆ ಸರ್ಕಾರಿ ಅಧಿಕಾರಿಗಳು, ಶಾಲೆಯ ಮಕ್ಕಳು ಸುಲ್ತಾನ್ ಜತೆಗೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು.

ಅಂದಾಜು 1,462 ಕೆ.ಜಿ. ತೂಕ 6.2 ಅಡಿ ಎತ್ತರದ ಸುಲ್ತಾನ್​, ರಾಯಚೂರು, ಸಿಂಧನೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ದೇಶೀಯ ತಳಿ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅಬಿಧಿನ್ ಗೋಸಾಕಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ.