ಫೊನಿ ಚಂಡಮಾರುತದ ಪ್ರಭಾವ: ಬ್ರಹ್ಮೋಸ್​ ಕ್ಷಿಪಣಿಯ ಪರೀಕ್ಷೆಯನ್ನು ಮುಂದೂಡಿದ ಭಾರತೀಯ ವಾಯುಪಡೆ

ನವದೆಹಲಿ: ಫೊನಿ ಚಂಡಮಾರುತದ ಪ್ರಭಾವದಿಂದಾಗಿ ಭಾರತೀಯ ವಾಯುಪಡೆ ಗಗನದಿಂದ ನೆಲಕ್ಕೆ ಚಿಮ್ಮುವ ಬ್ರಹ್ಮೋಸ್​ ಕ್ಷಿಪಣಿಯ ಪರೀಕ್ಷೆಯನ್ನು ಮುಂದೂಡಿದೆ. ಸುಖೋಯ್​ ಯುದ್ಧವಿಮಾನಕ್ಕೆ ಜೋಡಿಸಲ್ಪಟ್ಟಿರುವ ಸೂಪರ್​ಸೋನಿಕ್​ ಕ್ರೂಸ್​ ಮಿಸೈಲ್​ನ ಪರೀಕ್ಷೆ ಈ ವಾರ ನಡೆಯುವುದಿತ್ತು.

ದಕ್ಷಿಣ ಭಾರತದ ಪ್ರದೇಶದಲ್ಲಿ ಬ್ರಹ್ಮೋಸ್​ ಕ್ಷಿಪಣಿಯ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಫೊನಿ ಚಂಡಮಾರುತ ಇದಕ್ಕೆ ಅಡ್ಡಿಯನ್ನುಂಟು ಮಾಡಿದೆ. ಆದಷ್ಟು ಬೇಗ ಮತ್ತೆ ಈ ಪರೀಕ್ಷೆಯನ್ನು ಮರುನಿಗದಿಗೊಳಿಸಲಾಗುವುದು ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

ಬಾಲಾಕೋಟ್​ ವೈಮಾನಿಕ ದಾಳಿಯಲ್ಲಿ ಭಾರತೀಯ ವಾಯುಪಡೆ ಮಿರಾಜ್​ ಯುದ್ಧವಿಮಾನಗಳ ಮೂಲಕ ಸ್ಪೈಸ್​ 2000 ಬಾಂಬ್​ಗಳನ್ನು ಬಳಸಿಕೊಂಡಿತ್ತು. ಇದೀಗ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಬ್ರಹ್ಮೋಸ್​ ಕ್ಷಿಪಣಿಗಳನ್ನು ಬಳಸಿಕೊಂಡು ಭಾರತದ ಗಡಿಭಾಗದಲ್ಲಿ 150 ಕಿ.ಮೀ. ದೂರದಿಂದಲೇ ಬಾಲಾಕೋಟ್​ನಂಥ ದಾಳಿ ಮಾಡಲು ಅನುಕೂಲವಾಗಲಿದೆ. (ಏಜೆನ್ಸೀಸ್​)