ಕೋಲಾರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50ರ ಸುಸಂದರ್ಭದಲ್ಲಿ ಜ.18 ಮತ್ತು 19ರಂದು ಬೆಂಗಳೂರಿನ ಅರಮನೆ ಮೈದನದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಮತ್ತು ವಿಶ್ವ ವಿಪ್ರತ್ರಯಿ ಪರಿಷತ್ ಅಧ್ಯಕ್ಷ ಎಸ್.ರಘುನಾಥ್ ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಾಹ ತಡವೇಕೆ, ಪರಿಹಾರಗಳೇನು ವಿಚಾರಗೋಷ್ಠಿಯಲ್ಲಿ ಮಾತನಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವದಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಜನಾಂಗದಲ್ಲಿ ಮದುವೆಗಳ ಸಮಸ್ಯೆಯ ಮೂಲ ಕಾರಣ ನಾವೇ ಅಳವಡಿಕೊಂಡಿರುವ ಕುಟುಂಬ ಯೋಜನೆಯಾಗಿದೆ. ಹಿಂದೆ ಮನೆಗೆ ನಾಲ್ಕೆ$ದ್ದಕ್ಕೂ ಹೆಚ್ಚಿನ ಮಕ್ಕಳಿರುತ್ತಿದ್ದರೂ ಆದರೆ ಇಂದು ಒಂದೇ ಮಗುವಿಗೆ ಸೀಮಿತರಾಗಿದ್ದೇವೆ. ಜತೆಗೆ ಮನೆತನದ ಮಕ್ಕಳಿಗೆ ಸಂಸ್ಕಾರ ಕಲಿಸದೆ ಕೇವಲ ಪಶ್ಚಾತ್ಯ ಅನುಕರಣೆಯ ದಾರಿ ತೋರುತ್ತಿದ್ದೇವೆ. ಸಮಾಜದ ಯುವಜನತೆಗೆ ಇಂದಿನ ಮತ್ತು ಭವಿಷ್ಯದ ದೃಷ್ಟಿಯಿಂದ ಜನಾಂಗಕ್ಕಿರುವ ಅವಶ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ವಧು&-ವರರ ಸಮಸ್ಯೆ ಬಗೆಹರೆಯಬಹುದು ಎಂದರು.
ಸಮಾಜದಲ್ಲಿ ವಿವಾಹ ತಡವೇಕೆ ವಿಷಯವಾಗಿ ಮೈಸೂರಿನ ವಿದ್ವಾನ್ ಶ್ರೀಕೃಷ್ಣ ಭಟ್ ಮಾತಾಡಿದರು.
ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣ, ಸದಸ್ಯರಾದ ಎಚ್.ಉದಯ ಕುಮಾರ್, ಜಿ.ಎಸ್ ಜಯತೀರ್ಥ, ವೈ.ಆರ್.ರವಿಶಂಕರ್, ಎಂ.ಎಸ್.ಆನಂದ್, ಡಾ.ಎಂ.ವಿ.ಜಯರಾಂ, ಅಮರನಾಥ, ಮುರಳಿಸುಂದರ್, ಶಿವಶಂಕರ್ ಇದ್ದರು.
ಬ್ರಾಹ್ಮಣ ಮಹಾಸಭಾಗೆ 50ರ ಸಂಭ್ರಮ

You Might Also Like
ಹೋಟೆಲ್ ಸ್ಟೈಲ್ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe
ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…
ಚಿನ್ನದ ಮೇಲೆ ಲೋನ್ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan
Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…
ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips
ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…