ಸಂಡೂರು: ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಲು ಹೇಳಿರುವುದನ್ನು ಖಂಡಿಸಿ ಬ್ರಾಹ್ಮಣ ಸಮಾಜದ ತಾಲೂಕು ಘಟಕದಿಂದ ಗುರುವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ವಿಜಯೇಂದ್ರರಾವ್ ಮಾತನಾಡಿ, ಜನಿವಾರ ತೆಗೆಯಲು ಹೇಳಿರುವುದು ಸನಾತನ ಹಿಂದು ಧರ್ಮದ ಭಾವನೆಗಳಿಗೆ ಮಾಡಿದ ಅಪಮಾನವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ಪಿ.ರವಿ.ಕೃಷ್ಣರಾವ್ ಕುಲಕರ್ಣಿ, ಕೆ.ಎನ್.ಸುರೇಶ್ ಆಚಾರ್, ಆರ್.ಪಾಂಡುರಂಗ ಭಟ್, ಶಿವಾಜಿ ಭಟ್, ಕೆ.ವೆಂಕೋಬರಾವ್, ಕೆ.ಬದ್ರಿನಾರಾಯಣಾಚಾರ್, ಎನ್.ಪ್ರಭಾಕರ ರಾವ್, ವಿಷ್ಣುತೀರ್ಥಚಾರ್, ಗುರುರಾಜ್, ಔದುಂಬರ ಭಟ್, ಭಾಗ್ಯಲಕ್ಷ್ಮೀ, ವಿಜಯಲಕ್ಷ್ಮೀ, ಉಷಾ, ವೀಣಾ, ಸೌಭಾಗ್ಯ, ರೂಪಾ ಮುಂತಾದವರಿದ್ದರು.