ಮೂರು ಭಾಗಗಳಲ್ಲಿ ಬರಲಿದೆ ಬ್ರಹ್ಮಾಸ್ತ್ರ; 2022ರ ಸೆ.9ಕ್ಕೆ ಮೊದಲ ಭಾಗ ಬಿಡುಗಡೆ

ಒಂದು ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದು ಹೊಸ ವಿಷಯವೇನಲ್ಲ. ‘ಬಾಹುಬಲಿ’, ‘ಕೆಜಿಎಫ್’, ಪುಪ್ಪ’, ‘ಎನ್.ಟಿ.ಆರ್’, ‘ಅವತಾರ್ ಪುರುಷ’, ‘ತೋತಾಪುರಿ’ ಸೇರಿ ಹಲವು ಚಿತ್ರಗಳನ್ನು ಉದಾಹರಿಸಬಹುದು. ಈಗ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರವನ್ನು ಮೂರು ಭಾಗಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. 2018ರಲ್ಲಿ ಪ್ರಾರಂಭವಾಯ್ತು ‘ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣ. ಬಲ್ಗೇರಿಯಾ, ಲಂಡನ್, ಎಡಿನ್​ಬರ್ಗ್, ನ್ಯೂಯಾರ್ಕ್, ವಾರಾಣಸಿ ಮುಂತಾದ ಕಡೆ ಚಿತ್ರೀಕರಣ ನಡೆಯಿತು. ಇದೀಗ ಚಿತ್ರೀಕರಣ ಸಂಪೂರ್ಣವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು … Continue reading ಮೂರು ಭಾಗಗಳಲ್ಲಿ ಬರಲಿದೆ ಬ್ರಹ್ಮಾಸ್ತ್ರ; 2022ರ ಸೆ.9ಕ್ಕೆ ಮೊದಲ ಭಾಗ ಬಿಡುಗಡೆ