ಹೊನ್ನಾಳಿ: ತಾಲೂಕಿನ ಮಲೆಕುಂಬಳೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಸಾವಿರಾರು ಭಕ್ತಾದಿಗಳ ನಡುವೆ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.

ಭವ್ಯವಾಗಿ ಅಲಂಕೃತಗೊಂಡಿದ್ದ ರಥಕ್ಕೆ ಅರ್ಚಕರು ಪೂಜೆ ಮಾಡಿ ಬಲಿ ಅನ್ನ ನೈವೇದ್ಯ ಮಾಡಿದರು. ಗ್ರಾಮದ ಮಹಿಳೆಯರು ರಥಕ್ಕೆ ಮಂತ್ರಾಕ್ಷತೆ ಹಾಕಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೂರಾರು ಭಕ್ತರು ರಥವನ್ನು ಮೂರು ಬಾರಿ ಮುಂದಕ್ಕೆ ಮತ್ತು ಹಿಂದಕ್ಕೆ ಎಳೆದು ಮುಕ್ತಾಯಗೊಳಿಸಿದರು.
ನಂತರ ನೆರೆದಿದ್ದ ಸಾವಿರಾರು ಭಕ್ತರು ಮಂಡಕ್ಕಿ, ಮೆಣಸಿನಕಾಳು, ಉತ್ತುತ್ತಿ ಹಾಗೂ ಬಾಳೆಹಣ್ಣುಗಳನ್ನು ರಥಕ್ಕೆ ಅರ್ಪಿಸಿದರು. ಕೆಲವರು ರಥದ ಗಾಲಿಗೆ ಹಣ್ಣು ಕಾಯಿ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು.
ಫೆ. 19 ರಂದು ಮಹಾ ಅಭಿಷೇಕ, ಸಂಜೆ 7.30ಕ್ಕೆ ಕಂಕಣಧಾರಣೆ, ಧ್ವಜಾರೋಹಣ ನೆರವೇರಿತ್ತು. ಭಾನುವಾರ ಗಜೋತ್ಸವ ನಂತರ ಬ್ರಹ್ಮರಥೋತ್ಸವ ನಡೆಯಿತು.
ಶಾಸಕ ಡಿ.ಜಿ.ಶಾಂತನಗೌಡ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಗ್ರಾಮದ ಹಿರಿಯ ಮುಖಂಡರಾದ ಕೆ.ಆರ್.ವರದರಾಜ್, ಕೆ.ಬಿ.ರಾಜಶೇಖರ್, ಎನ್.ಎಚ್. ಕೃಷ್ಣಪ್ಪ, ಬಿ.ಎಚ್. ವಾಗೀಶ್, ಜಿ.ಆರ್.ಪ್ರಕಾಶ್, ಎನ್.ಎಚ್.ಕೃಷ್ಣಪ್ಪ, ಎಚ್.ಬಿ.ಸೋಮಶೇಖರ್, ಸುಧಾಕರ್,ಅಣ್ಣಪ್ಪ, ಟಿ.ಎಸ್.ಕೃಷ್ಣಪ್ಪ, ಟಿ.ಲಕ್ಷೀಪತಿ, ರಂಗನಾಥ್ ಇತರರು ಹಾಜರಿದ್ದರು.
ಇಂದು ಮಹಾ ರಥೋತ್ಸವ : ಫೆ. 24 ರಂದು ಬೆಳಗ್ಗೆ 5 ಗಂಟೆಗೆ ಶ್ರೀ ಆಂಜನೇಯಸ್ವಾಮಿಯ ಮಹಾರಥೋತ್ಸವ ಜರುಗಲಿದೆ. ನಂತರ 10.40 ರಿಂದ ಸಾಮೂಹಿಕ ವಿವಾಹ ನಡೆಯಲಿದೆ. ಸಂಜೆ 4 ಗಂಟೆಗೆ ಮುಳ್ಳೋತ್ಸವ, ಕಾರ್ಣಿಕ ಹಾಗೂ ಫೆ. 25 ರಂದು ಅವಭೃಥ ಸ್ವಾನ, ಭೂತನಸೇವೆ ನಡೆಯಲಿದೆ.