ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಮುನ್ನಾ ದಿನವಾದ ಇಂದು ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್ನಲ್ಲಿ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರು ಸಂವಾದ ನಡೆಸುತ್ತಿದ್ದು, ವರಮಹಾಲಕ್ಷ್ಮೀ ಹಬ್ಬದ ಕುರಿತು ಸಮಗ್ರ ಮಾಹಿತಿ ನೀಡುತ್ತಿದ್ದಾರೆ.
ಕಾಂಚಾಣಂ ಕಾರ್ಯಸಿದ್ಧಿ ಎನ್ನುತ್ತ ಎಲ್ಲದಕ್ಕೂ ಧನವೇ ಮುಖ್ಯ ಎಂಬುದರೊಂದಿಗೆ ಹಬ್ಬದ ಕುರಿತು ಮಾಹಿತಿ ನೀಡಲು ಆರಂಭಿಸಿರುವ ನರೇಂದ್ರ ಬಾಬು ಶರ್ಮಾ ಅವರು, ವರಮಹಾಲಕ್ಷ್ಮೀ ಪೂಜೆಯೇ ಬೇರೆ, ವ್ರತವೇ ಬೇರೆ ಎಂಬುದನ್ನು ವಿವರಿಸಿದ್ದಾರೆ.
ವ್ರತಕ್ಕೆ ಮಡಿ ಅನುಷ್ಠಾನ ಮುಖ್ಯ, ಮಡಿ ಎಂದರೆ ಆತ್ಮಶುದ್ಧಿ. ವ್ರತ ಮಾಡುವವರು ತೆಂಗಿನಕಾಯಿ ಕಲಶ ಇಟ್ಟು ಮಾಡಬೇಕಾಗುತ್ತದೆ. ಆದರೆ ಪೂಜೆ ಮಾಡುವವರು ಲಕ್ಷ್ಮೀಯ ಫೋಟೋ ಇಟ್ಟು ಮಾಡಿದರೆ ಸಾಕು ಎಂದಿರುವ ಅವರು ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕು. ಪಕ್ಕದ ಮನೆಯವ ಮೇಲೆ ಸ್ಪರ್ಧೆಗೆ ಬಿದ್ದು ಮಾಡದೆ ಭಕ್ತಿ-ಶ್ರದ್ಧೆಯಿಂದ ಮಾಡಬೇಕು ಎಂದು ಹೇಳಿದ್ದಾರೆ.