ಹುಬ್ಬಳ್ಳಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಸಂಭ್ರಮ ಹಾಗೂ ಮಹಾಸಮ್ಮಿಳನ ಅಂಗವಾಗಿ ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಭವ್ಯ ಶೋಭಾಯಾತ್ರೆಯಲ್ಲಿ ಹುಬ್ಬಳ್ಳಿ ವಿಪ್ರ ಬಾಂಧವರು ಪಾಲ್ಗೊಂಡರು.
ಭಜನೆ, ಕೋಲಾಟ, ನೃತ್ಯ, ವಾದ್ಯ, ವೇದ ಮಂತ್ರಗಳ ಪಠಣ ಹಾಗೂ ಜಯಘೋಷಗಳೊಂದಿಗೆ ಸಮಾಜದವರು ಭಾಗವಹಿಸಿದ್ದರು.
ಮುಖಂಡರಾದ ವಾದಿರಾಜ ಕುಲಕರ್ಣಿ, ರಾಮಚಂದ್ರ ಕುಲಕರ್ಣಿ, ರಾಘವೇಂದ್ರ ತಡಸ, ನರಸಿಂಹ ಕೋತವಾಲ್, ಕೇಶವ ಬಾದನಟ್ಟಿ, ಸಂಜೀವ್ ಕುಲಕರ್ಣಿ, ಶಂಕರ ಪಾಟೀಲ್, ಆನಂದ ಬಂದಿಸ್ಟಿ, ಪ್ರಾಣೇಶ ಕುಲಕರ್ಣಿ, ಉಮಾ ಬಾರಲೋಣಿ, ವೈಶಾಲಿ ಪಾಠಕ ಮುಂತಾದವರು ಇದ್ದರು.