
ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಧರಿಸಿದ್ದ ಪವಿತ್ರ ಯಜ್ಞೋಪವಿತ ಜನಿವಾರ ತೆಗೆಯುವಂತೆ ಒತ್ತಾಯ ಮಾಡಿದ್ದು, ಕೆಲ ವಿದ್ಯಾರ್ಥಿಗಳ ಕೈಗೆ ಧರಿಸಿದ ಪವಿತ್ರ ಕಾಶಿದಾರ ಸಹ ತೆಗೆಯಲು ಹೇಳಿರುವುದು ಖಂಡನಾರ್ಹ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಲಕ್ಷ್ಮಣ ಕುಲಕರ್ಣಿ ಹೇಳಿದ್ದಾರೆ.
ವಿದ್ಯಾರ್ಥಿಗಳು ಜನಿವಾರ ತೆಗೆಯದೆ ಇದ್ದಾಗ ಅದನ್ನು ಕತ್ತರಿಸಿದ್ದು ಸನಾತನ ಹಿಂದೂ ಧರ್ಮದ ಭಾಗವಾದ ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅವಮಾನ, ಉದ್ದೇಶಪೂರ್ವಕವಾಗಿ ಮಾಡಲಾದ ಈ ಕೃತ್ಯವನ್ನು ಸನಾತನ ಹಿಂದೂ ಧರ್ಮ ಮತ್ತು ಬ್ರಾಹ್ಮಣ ಸಮಾಜ ಬಲವಾಗಿ ಖಂಡಿಸುತ್ತದೆ.
ಪದೇಪದೆ ಬ್ರಾಹ್ಮಣ ಸಮಾಜದ ಮೇಲೆ ಮತ್ತು ಸನಾತನ ಹಿಂದೂ ಧರ್ಮದ ಆಚರಣೆ ಪದ್ಧತಿ ನಿಯಮ ಸಂಸ್ಕಾರದ ಮೇಲೆ ಆಗುತ್ತಿರುವ ಗಧಾ ಪ್ರಹಾರವನ್ನು ಸಮಾಜ ಸಹಿಸುವುದಿಲ್ಲ. ಈ ಕುರಿತು ರಾಜ್ಯ ಸರ್ಕಾರ ಸೂಕ್ತ ತನಿಖೆಯನ್ನು ನಡೆಸಿ ತಪ್ಪಿತಸ್ತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಲಕರ್ಣಿ ಅಗ್ರಹಿಸಿದ್ದಾರೆ.