Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಬಿಟ್ಟೂ ಬಿಡದೆ ನಡೆಯುತ್ತಿದೆ ಬಿಟ್ ಕಾಯಿನ್ ದಂಧೆ

Saturday, 23.06.2018, 3:03 AM       No Comments

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ಡಿಜಿಟಲ್ ಕರೆನ್ಸಿ ‘ಬಿಟ್ ಕಾಯಿನ್’ ದಂಧೆ ಸದ್ದಿಲ್ಲದೆ ನಡೆಯುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನಿಂದ ಅಧಿಕೃತ ಮುದ್ರೆ ಸಿಗದಿದ್ದರೂ ಪ್ರತಿದಿನ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆಯುತ್ತಿದೆ. ದುಬಾರಿ ಬಡ್ಡಿ ಸಿಗುತ್ತದೆಂಬ ಆಸೆಯಿಂದ ಸಾರ್ವಜನಿಕರು ಹಣ ಹೂಡಿ ವಂಚನೆಗೊಳಗಾಗಿ ಬೀದಿಗೆ ಬೀಳುತ್ತಿರುವ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಬಿಟ್ ಕಾಯಿನ್ ದಂಧೆ ಬಗ್ಗೆ ಬೆಂಗಳೂರಿನಲ್ಲಿ ಏ.19ರಂದು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಬಳಿಕ ಜೂ. 6ರಂದು ಸದಾಶಿವನಗರ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಸದಾಶಿವನಗರ ಕೇಸಲ್ಲಿ ದೂರುದಾರರ ಪ್ರಕಾರ ದೇಶಾದ್ಯಂತ ಅಂದಾಜು 1 ಸಾವಿರ ಕೋಟಿ ರೂ. ವಂಚನೆ ನಡೆದಿದೆ. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೆಲವರು ಕೋಟ್ಯಂತರ ರೂ. ಕಳೆದುಕೊಂಡರೂ ಆದಾಯ ತೆರಿಗೆ ಅಧಿಕಾರಿಗಳ ಭಯದಿಂದ ದೂರು ನೀಡುತ್ತಿಲ್ಲ. ಅಂಥವರು ದೂರು ಕೊಟ್ಟರೆ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಠಿ; 4.5 ಕೋಟಿ ಮೋಸ: ಸಹಕಾರನಗರದ ಉದ್ಯಮಿ ರಾಜಶೇಖರ್ ಮತ್ತು ಅವರ ಸ್ನೇಹಿತರಿಂದ ಹಣ ಕಟ್ಟಿಸಿಕೊಂಡ ಗುಜರಾತ್ ಮೂಲದ ಬಿಟ್ ಕನೆಕ್ಟ್ ಮತ್ತು ಡೆಕಡೊ ಕಂಪನಿ ಬರೋಬ್ಬರಿ -ಠಿ; 4.5 ಕೋಟಿ ವಂಚಿಸಿದೆ. ಈ ಸಂಬಂಧ ಉದ್ಯಮಿ ಕೊಟ್ಟ ದೂರಿನ ಮೇರೆಗೆ ಕಂಪನಿಯ ಬೆಂಗಳೂರಿನ ಡಾಲರ್ಸ್ ಕಾಲನಿ ಶಾಖೆಯಲ್ಲಿನ ರಾಕೇಶ್ ಮತ್ತು ಅಂಡ್ರೋಲ್ ಪಾಲ್​ನನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜನಸಾಮಾನ್ಯರು ಬಿಟ್ ಕಾಯಿನ್ ನಿಯಮ ತಿಳಿಯುವುದು ಕಷ್ಟ. ಒಮ್ಮೆ ಹಣ ಸಂದಾಯವಾದರೆ ಮರಳಿ ಪಡೆಯಲು ಅಸಾಧ್ಯ. ಬಿಟ್ ಕಾಯಿನ್ ವರ್ಗಾವಣೆ ಯಾರು ಯಾರಿಗೆ ರವಾನಿಸಿದ್ದಾರೆ ಎಂಬುದು ತಿಳಿಯದು. ಬಿಟ್ ಕಾಯಿನ್ ಬೆಲೆ ಕ್ಷಣ ಕ್ಷಣಕ್ಕೂ ಏರಿಳಿತಕ್ಕೆ ಒಳಗಾಗುತ್ತದೆ.

ಏನಿದು ಬಿಟ್ ಕಾಯಿನ್?

ಬಿಟ್ ಕಾಯಿನ್ ಎಂದರೆ ಕಾಗದರಹಿತ ಡಿಜಿಟಲ್ ಕರೆನ್ಸಿ. ರೂಪಾಯಿ, ಡಾಲರ್, ಯುರೊ ಅಥವಾ ಇನ್ಯಾವುದೋ ದೇಶದ ಅಧಿಕೃತ ಕರೆನ್ಸಿ ಮಾದರಿಯಲ್ಲಿ ಇರುವುದಿಲ್ಲ. ಎಲ್ಲ ವ್ಯವಹಾರ ಇಂಟರ್​ನೆಟ್​ನಲ್ಲಿ ನಡೆಯುತ್ತದೆ. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಬಳಸುತ್ತಾರೆ. ಬಿಟ್ ಕಾಯಿನ್ ಬೆಲೆ 5 ಲಕ್ಷದಿಂದ 6 ಲಕ್ಷ ರೂ. ವರೆಗಿದೆ. ಬೆಂಗಳೂರು, ತುಮಕೂರಿನಲ್ಲಿ ಬಿಟ್ ಕಾಯಿನ್ ಸಂಸ್ಥೆಗಳು ತಲೆಎತ್ತಿವೆ.

ದಂಧೆ ಹೇಗೆ?

ಹೂಡಿಕೆದಾರರಿಗೆ ಶೇ.10ರಿಂದ 30 ಬಡ್ಡಿ ನೀಡುವುದಾಗಿ ಆಮಿಷವೊಡ್ಡಲಾಗುತ್ತದೆ. ಮೊದಲ ತಿಂಗಳು ಬ್ಯಾಂಕ್ ಖಾತೆಗೆ ಲಾಭಾಂಶ ಜಮೆ ಮಾಡಿ ನಂಬಿಸಲಾಗುತ್ತದೆ. ಆ ನಂತರ ತಮ್ಮ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರಿಂದ ಹಣ ಹೂಡಿಕೆ ಮಾಡಿದರೆ ಕಮಿಷನ್ ನೀಡುವ ಆಮಿಷವೊಡ್ಡುತ್ತಾರೆ. ಅವರ ಮೂಲಕವೂ ಹಣ ಪಡೆದ ಬಳಿಕ ಲಾಭವಿರಲಿ, ಅಸಲೂ ಕೊಡದೆ ವಂಚಿಸುತ್ತಾರೆ.

3.7 ಕೋಟಿ ರೂಪಾಯಿ ದೋಖಾ

2016 ಅಕ್ಟೋಬರ್​ನಲ್ಲಿ ಕುಮಾರಸ್ವಾಮಿ ಲೇಔಟ್​ನ 9 ಮಂದಿ ಬಿಟ್ ಕಾಯಿನ್ ವ್ಯವಹಾರದಲ್ಲಿ ತೊಡಗಿದ್ದರು. ಬಿಟ್ ಕಾಯಿನ್ ಸಿಬ್ಬಂದಿ ತಿಂಗಳಿಗೆ ಶೇ.10 ಬಡ್ಡಿಯ ಆಮಿಷವೊಡ್ಡಿ ಯುವಕರಿಂದ 3.7 ಕೋಟಿ ರೂ. ಮೌಲ್ಯದ 74 ಬಿಟ್ ಕಾಯಿನ್ ಪಡೆದಿದ್ದರು. ಆದರೆ, ಇವರಿಗೆ ಬಡ್ಡಿ ಹಣವೂ ಕೊಡದೆ ಅಸಲೂ ಕೊಡದೆ ಏ. 3ರಂದು ವೆಬ್​ಸೈಟ್ ರದ್ದು ಮಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದಾರೆ. ನೊಂದ ಯುವಕರು ಸೈಬರ್ ಕ್ರೖೆಂ ಠಾಣೆ ಮೆಟ್ಟಿಲೇರಿದ್ದಾರೆ.

ಅಂತರ್ಜಾಲದ ಬ್ಲಾ್ಯಕ್ ಮಾರ್ಕೆಟ್

ಅಂತರ್ಜಾಲದಲ್ಲಿ ನಡೆಯುವ ಬ್ಲಾ್ಯಕ್ ಮಾರ್ಕೆಟ್ ಡ್ರಗ್ಸ್ ದಂಧೆಗೆ ಬಿಟ್ ಕಾಯಿನ್ ಕಾಲಿಟ್ಟಿದ್ದು, ಡ್ರಗ್ಸ್ ಜಾಲದ ಮೇಲೆ ಹಿಡಿತ ಸಾಧಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಅಕ್ರಮ ವ್ಯವಹಾರಕ್ಕೆ ಚಲಾವಣೆಗೆ ಬಂದಿದೆ. ಭಾರತ ಸೇರಿ ಹಲವು ದೇಶಗಳ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಅಮೆರಿಕದಲ್ಲಿ ಕಡಿವಾಣ ಬಿದ್ದಿದ್ದು, ಭಾರತದಲ್ಲೂ ಮಾನ್ಯತೆ ಇಲ್ಲ. ವಂಚನೆ ಅಥವಾ ನಷ್ಟವಾದರೆ ನಡೆಸುವವರೇ ಸಂಪೂರ್ಣ ಜವಾಬ್ದಾರರು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದರ ಮೇಲೆ ಆದಾಯ ತೆರಿಗೆ ಮತ್ತು ಆರ್​ಬಿಐ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

Leave a Reply

Your email address will not be published. Required fields are marked *

Back To Top