ತಿರುವಲ್ಲೂರ್: ಪ್ರಿಯತಮನೊಂದಿಗೆ ಮನೆಬಿಟ್ಟು ಹೊರಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಅಮ್ಮನನ್ನು ಮಗಳು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ನಡೆದಿದೆ.
ಕಾಲೇಜು ವಿದ್ಯಾರ್ಥಿನಿ ದೇವಿ ಪ್ರಿಯಾ ಈ ಹೀನಕೃತ್ಯ ಎಸಗಿದ್ದಾಳೆ. ಈಕೆಗೆ ಫೇಸ್ಬುಕ್ ಮೂಲಕ ವಿವೇಕ್ ಎಂಬುವನೊಂದಿಗೆ ಪ್ರೀತಿ ಮೂಡಿತ್ತು. ಬಟ್ಟೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆತ ದೇವಿಪ್ರಿಯಾಳನ್ನು ತನ್ನ ಊರಿಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದ. ಮನೇಗೇ ಬಂದು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದ.
ಆದರೆ ಅನಿವಾರ್ಯ ಕಾರಣಗಳಿಂದ ಆತನಿಗೆ ಪ್ರಿಯಾ ಮನೆಗೆ ಹೋಗಲು ಸಾಧ್ಯವಾಗದೆ, ಅವಳನ್ನು ಕರೆದುಕೊಂಡು ಬರುವಂತೆ ತನ್ನಿಬ್ಬರನ್ನು ಗೆಳೆಯರನ್ನು ಕಳಿಸಿದ್ದ. ಅದಾಗಲೇ ಬ್ಯಾಗ್ಗಳನ್ನೆಲ್ಲ ಪ್ಯಾಕ್ ಮಾಡಿಟ್ಟಿದ್ದ ಯುವತಿ ಅವರೊಂದಿಗೆ ಹೊರಡಲು ಸಿದ್ಧಳಾದಾಗ ಆಕೆಯ ಅಮ್ಮ ತಡೆದರು. ಕೋಪಗೊಂಡ ಪ್ರಿಯಾ ಅಲ್ಲಿಯೇ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತಾಯಿಯನ್ನು ಇರಿದು ಹತ್ಯೆ ಮಾಡಿದ್ದಾಳೆ. ಇದಕ್ಕೆ ಆ ಯುವಕರೂ ಸಹಾಯ ಮಾಡಿದ್ದರು.
ಘಟನೆ ಬಳಿಕ ಆ ಇಬ್ಬರೂ ಯುವಕರು ಅಲ್ಲಿಂದ ಪಾರಾಗಲು ಯತ್ನಿಸಿದ್ದಾರೆ. ಆದರೆ ಅವರ ಬಟ್ಟೆ ಮೇಲೆ ರಕ್ತದ ಕಲೆಯನ್ನು ಕಂಡ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಆ ಯುವತಿಯನ್ನೂ ಪೊಲೀಸರು ಬಂಧಿಸಿದ್ದಾರೆ.
BoyfriendMurderPoliceಪೊಲೀಸ್ಪ್ರಿಯತಮಫೇಸ್ಬುಕ್ಹತ್ಯೆ