ನವದೆಹಲಿ: ಉಡುಗೊರೆಗಳು ಎಲ್ಲರ ಮುಖದಲ್ಲಿ ನಗೆ ಅರಳಿಸುತ್ತವೆ. ಜನ್ಮದಿನ, ಹಬ್ಬ, ಮದುವೆ, ವಾರ್ಷಿಕೋತ್ಸವ… ಹೀಗೆ ನಾನಾ ಸಂಭ್ರಮಗಳಲ್ಲಿ ಉಡುಗೊರೆ ವಿನಿಮಯವಾಗುತ್ತವೆ.
ಇತ್ತಿಚೆಗಷ್ಟೆ ಮುಗಿದ ಕ್ರಿಸ್ಮಸ್ನಲ್ಲಿ ಈ ಬಾಲಕನಿಗೆ ಕೊಟ್ಟ ಉಡುಗೊರೆ ಮಾತ್ರ ನಗು ಅರಳಿಸಲಿಲ್ಲ. ಕಾರಣ ಏನು ಮುಂದೆ ಓದಿ….
ಜಾರ್ಜಿಯಾದ 7 ವರ್ಷದ ಬಾಲಕನಿಗೆ ಕ್ರಿಸ್ಮಸ್ನಂದು ದೊರೆತ ಉಡುಗೊರೆ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಅವನಿಗೆ ಸಿಕ್ಕಿದ್ದು ಆ್ಯಪಲ್ನ ಇಯರ್ಫೊನ್.
ಆಟವಾಡುತ್ತ ತನಗೆ ತಿಳಿದೋ, ತಿಳಿಯದೆಯೋ ಅವನು ಅದನ್ನು ನುಂಗಿಬಿಟ್ಟಿದ್ದಾನೆ. ಹೀಗೆ ತನಗೆ ಸಿಕ್ಕ ಇಯರ್ಫೊನ್ನಲ್ಲಿ ಒಂದನ್ನು ನುಂಗಿದ ಅವನಿಗೆ ಕೆಲ ಸಮಯದಲ್ಲೆ ಉಸಿರುಗಟ್ಟಿದಂತಾಗಿದೆ.
ಆಗ ಮನೆಯಲ್ಲಿದ್ದವರು ಅವನ ಅಜ್ಜಿ ಮಾತ್ರ. ತಕ್ಷಣ ಅಜ್ಜಿ ಬಾಲಕನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಇಬ್ಬರು ಸೇರಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲ್ಲಿನ ವೈದ್ಯರು ಎಕ್ಸ್ರೇ ತೆಗೆಸಿ ನೋಡಿದಾಗ ಬಾಲಕನ ಪಕ್ಕೆಲುಬುವಿನಲ್ಲಿ ಇಯರ್ಪೋನ್ ಇರುವುದು ತಿಳಿದಿದೆ. ಬಾಲಕನ ತಾಯಿಯನ್ನು ಕರೆದ ವೈದ್ಯರು “ಇಯರ್ಫೊನ್ ತಾನೇ ಹೊರಬರುವುದನ್ನು ಕಾಯುವುದು ಬೇಡ. ಆಪರೇಷನ್ ಮೂಲಕ ಹೊರತೆಗೆಯೋಣ” ಎಂದು ಸಲಹೆ ನೀಡಿದ್ದಾರೆ.
ಆದರೆ ಬಾಲಕನ ತಾಯಿ, ಬೇಡ, ಇನ್ನು ಸ್ವಲ್ಪ ದಿನದಲ್ಲೇ ಅದು ತಾನಾಗೇ ಹೋಗುತ್ತದೆ ಎಂದಿದ್ದಾರೆ.
ನಂತರ ಬಾಲಕ ಇಯರ್ಪೋನ್ ಬಳಸಲು ಭಯ ಪಡುತ್ತಿದ್ದಾನೆ. ತನ್ನ ಹೊಟ್ಟೆಯಲ್ಲಿರುವ ಇಯರ್ಫೊನ್ಗೆ ಕನೆಕ್ಟ್ ಆಗಿ ಯಾವುದಾದರು ಸಂಗೀತ ಕೇಳಿಸಿ ಬಿಟ್ಟರೆ ಎಂಬ ಭಯ ಇರಬೇಕು. ಆತನ ತಾಯಿ ಇವನಿಗೆ ಇನ್ನು ಈ ತರಹ ಸಣ್ಣ ವಸ್ತುಗಳನ್ನು ಉಡುಗೊರೆ ನೀಡದಿರಲು ನಿರ್ಧರಿಸಿದ್ದಾರೆ.
ಮಕ್ಕಳಿಗೆ ಈ ತರಹದ ಸಣ್ಣ ವಸ್ತುಗಳನ್ನು ಕೊಡುವ ಮೊದಲು ಎಚ್ಚರ ವಹಿಸುವುದು ಒಳಿತು. ಇಂತಹ ಘಟನೆಗಳ ನಮಗೆಲ್ಲ ಪಾಠವಾಗಬೇಕು ಅಲ್ಲವೇ..? (ಏಜೆನ್ಸೀಸ್)