ಬಾಲಕನ ಲಿವರ್ ಕಸಿಗೆ ಬೇಕಿದೆ 15 ಲಕ್ಷ ರೂಪಾಯಿ

ತುಮಕೂರು: ಗುಬ್ಬಿ ತಾಲೂಕಿನ ಸೋಮಲಾಪುರದ 7 ವರ್ಷದ ತೇಜಸ್ ನಾಲ್ಕು ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ. ತೇಜಸ್​ಗೆ ಲಿವರ್ (ಯಕೃತ್) ಕಸಿ ಮಾಡಿದರಷ್ಟೇ ಆರೋಗ್ಯ ಸುಧಾರಿಸಲು ಸಾಧ್ಯ. ಬೆಂಗಳೂರಿನ ಆಸ್ಟೆರ್ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೇಜಸ್ ಲಿವರ್ ಕಸಿಗೆ 15 ಲಕ್ಷ ರೂ., ವೆಚ್ಚ ತಗುಲಲಿದ್ದು, ಅವರ ಕುಟುಂಬ ವೈದ್ಯಕೀಯ ಹೊರೆ ಭರಿಸುವ ಸ್ಥಿತಿಯಲ್ಲಿಲ್ಲ. ತೇಜಸ್ ತಂದೆ ಅಶೋಕ್ ಟೈಲರ್ ಆಗಿದ್ದು, ನಿತ್ಯ ದುಡಿಯುವ 250 ರೂ. ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಮಗನನ್ನು ಉಳಿಸಿಕೊಳ್ಳಲು ಆರ್ಥಿಕ ನೆರವಿಗೆ ಮನವಿ ಮಾಡಿದ್ದಾರೆ. ಅಕೌಂಟ್ ನಂಬರ್: ಎಸ್.ಎನ್. ಅಶೋಕ್ , ಎಸ್​ಬಿ: 3554101004194, ಐಎಫ್​ಎಸ್​ಸಿ: ಸಿಎನ್​ಆರ್​ಬಿ0003554, ಕೆನರಾ ಬ್ಯಾಂಕ್, ಚೇಳೂರು ಶಾಖೆ, ಗುಬ್ಬಿ ತಾಲೂಕು