ಪೆಟ್ಟಿಗೆ ಅಂಗಡಿ ತೆರವು

blank

ಬೇಲೂರು: ಪಟ್ಟಣದ ಜೂನಿಯರ್ ಕಾಲೇಜು ಹಾಗೂ ಪ್ರೌಢಶಾಲೆ ಮತ್ತು ಮೈದಾನಕ್ಕೆ ಮುಖ್ಯರಸ್ತೆ ಮೂಲಕ ತೆರಳಲು ಅಡ್ಡವಾಗಿದ್ದ ಪೆಟ್ಟಿಗೆ ಅಂಗಡಿ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು.
ಮಂಗಳವಾರ ಬೆಳಗ್ಗೆ ಜೂನಿಯರ್ ಕಾಲೇಜು ಮತ್ತು ಪ್ರೌಢಶಾಲೆಗೆ ಬಸ್ ನಿಲ್ದಾಣದಿಂದ ಮುಖ್ಯರಸ್ತೆ ಮೂಲಕ ನೇರವಾಗಿ ತೆರಳುವ ಮೈದಾನದ ಸುತ್ತಲೂ ಕಾಂಪೌಂಡ್‌ಗೆ ಗ್ರಿಲ್ಸ್ ಅಳವಡಿಸಿ ಗೇಟ್ ನಿರ್ಮಿಸಿ ಲಾಕ್ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಮನಗಂಡ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮತ್ತು ಸಿಬ್ಬಂದಿ ಗೇಟ್‌ಗೆ ಹಾಕಿದ್ದ ಕಬ್ಬಿಣದ ರಾಡ್ ತೆಗೆದು ಓಡಾಡಲು ಅವಕಾಶ ಮಾಡಿದ್ದರು. ಜತೆಗೆ ಬಸ್ ನಿಲ್ದಾಣದಿಂದ ವಿದ್ಯಾರ್ಥಿಗಳು ನೇರವಾಗಿ ಮೈದಾನದ ಮೂಲಕ ಶಾಲಾ, ಕಾಲೇಜಿಗೆ ತೆರಳುವುದಕ್ಕೆ ಅಡ್ಡ ಇದ್ದ ಪೆಟ್ಟಿಗೆ ಅಂಗಡಿಯನ್ನು ಪಕ್ಕಕ್ಕೆ ಸರಿಸಿ ಸಾರ್ವಜನಿಕರು, ವಿದ್ಯಾರ್ಥಿಗಳ ಓಡಾಟಕ್ಕೆ ಅವಕಶ ಕಲ್ಪಿಸಲಾಗಿತ್ತು. ಆದರೆ ಪುರಸಭೆ ಅಧ್ಯಕ್ಷರು ಮತ್ತು ಸಿಬ್ಬಂದಿ ಕಚೇರಿಗೆ ಬರುವಷ್ಟರಲ್ಲೆ ಪೆಟ್ಟಿಗೆ ಅಂಗಡಿಯವರು ಪುನಃ ರಸ್ತೆಗೆ ಅಡ್ಡಲಾಗಿ ಇಟ್ಟುಕೊಂಡಿದ್ದರು. ಇದನ್ನು ಗಮನಿಸಿದ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಸಿಬ್ಬಂದಿಯೊಂದಿಗೆ ತೆರಳಿ ಪೆಟ್ಟಿಗೆ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿದರು. ಇದರಿಂದ ಅಧ್ಯಕ್ಷರ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತಿದ್ದರು.
ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಸಿಬ್ಬಂದಿ ಉಮೇಶ್ ಸೇರಿದಂತೆ ಇತರರಿದ್ದರು.

Share This Article

ಹೆಲ್ಮೆಟ್​ ಬಳಸುವುದರಿಂದ ಕೂದಲು ಉದುರುತ್ತಿದೆಯೇ? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​…! Hair Loss

Hair Loss : ಅತಿಯಾಗಿ ಹೆಲ್ಮೆಟ್​ ಬಳಸುವ ಸವಾರರಲ್ಲಿ ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿನ ಸಮಸ್ಯೆ…

1 ತಿಂಗಳಲ್ಲಿ 1000 ಮೊಟ್ಟೆ ತಿಂದ ಯುವಕ! ದೇಹದಲ್ಲಿ ಏನೆಲ್ಲ ಬದಲಾವಣೆ ಆಯ್ತು ಗೊತ್ತಾ? ಇಲ್ಲಿದೆ ಅಚ್ಚರಿ ಸಂಗತಿ… Eggs

Eggs : ಮೊಟ್ಟೆಯು ಅನೇಕ ಮಂದಿಯ ನೆಚ್ಚಿನ ಆಹಾರವಾಗಿದೆ. ದಿನಕ್ಕೆ ಕನಿಷ್ಠ ಒಂದು ಮೊಟ್ಟೆಯನ್ನಾದರೂ ತಿನ್ನುವವರಿದ್ದಾರೆ.…

ಫೆಬ್ರವರಿ ಕೊನೆಯ ವಾರದಲ್ಲಿ ಈ 3 ರಾಶಿಯವರು ಎಚ್ಚರದಿಂದಿರಿ… ಇಲ್ಲವಾದಲ್ಲಿ ಸಂಕಷ್ಟ ತಪ್ಪಿದ್ದಲ್ಲ! Zodiac Signs

Zodiac Signs : ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ…