ಕಾಮಗಾರಿ ತಡೆದು ಪ್ರತಿಭಟನೆ

ಬೀರೂರು: ಹೊಸ ಅಜ್ಜಂಪುರ ರಸ್ತೆಯಲ್ಲಿ ನಿರ್ವಣವಾಗುತ್ತಿರುವ ದಾವಣಗೆರೆ- ಬೀರೂರು ರಾಜ್ಯ ಹೆದ್ದಾರಿ ರಸ್ತೆ ಬದಿಯ ಶಿಥಿಲಗೊಂಡಿರುವ ಚರಂಡಿ ಮೇಲೆಯೇ ಸಿಮೆಂಟು ಹಾಸುಗಲ್ಲುಗಳನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸರಸ್ವತಿಪುರಂ ಬಡಾವಾಣೆ 5ನೇ ವಾರ್ಡ್ ನಿವಾಸಿ ಪುಟ್ಟಪ್ಪ ಮಾತನಾಡಿ, ಇಲ್ಲಿ ನಿರ್ವಣವಾಗುತ್ತಿರುವ ರಸ್ತೆ ತೀರಾ ಕಿರಿದಾಗಿದೆ. ಕೇವಲ 9ಮೀಟರ್​ನಷ್ಟು ಮಾತ್ರ ರಸ್ತೆ ನಿರ್ವಿುಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಒಡೆದು ಮನಬಂದಂತೆ ರಸ್ತೆ ನಿರ್ವಿುಸಲಾಗುತ್ತಿದೆ. 15 ವರ್ಷದ ಹಿಂದೆ ನಿರ್ವಿುಸಿದ ಬಾಕ್ಸ್ ಚರಂಡಿಗೆ ಸಿಮೆಂಟ್ ಹಾಸುಗಲ್ಲು ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಬಡಾವಣೆ ನಿವಾಸಿ ಜಯಣ್ಣ ಮಾತನಾಡಿ, ಹೆದ್ದಾರಿ ಬದಿ ನಿರ್ವಿುಸುತ್ತಿರುವ ಚರಂಡಿ ಕಾಮಗಾರಿಯನ್ನು ತ್ವರಿತಗೊಳಿಸಲಾಗಿದೆ. ಸರಿಯಾದ ರೀತಿ ಕ್ಯೂರಿಂಗ್ ಕೂಡ ಮಾಡುತ್ತಿಲ್ಲ. ಅಂಕುಡೊಂಕಾಗಿ ಚರಂಡಿ ನಿರ್ವಿುಸಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಮನಕ್ಕೆ ತಂದರೂ ಕ್ರಮ ಕೈಗೊಡಿಲ್ಲ ಎಂದು ದೂರಿದರು.

ಗುತ್ತಿಗೆ ನಡೆಸುತ್ತಿರುವ ಸಂಸ್ಥೆ ಕೂಡಲೇ ಈ ಕಾಮಗಾರಿ ನಿಲ್ಲಿಸಿ ಹೊಸದಾಗಿ ಚರಂಡಿ ನಿರ್ವಿುಸಿ ಹಾಸುಗಲ್ಲನ್ನು ಹಾಕಿಸಬೇಕು. ಇಲ್ಲವಾದಲ್ಲಿ ಇಂಜಿನಿಯರ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.