ಬೆಂಗಳೂರು: ಕರೊನಾ ಸೋಂಕು ಇದೀಗ ನಟಿ ಸಂಜನಾ ಗಲ್ರಾಣಿ ಅವರಿಗೂ ತಗುಲಿದೆ. ಮಾತ್ರವಲ್ಲ, ಎರಡೆರಡು ಸಲ ಲಸಿಕೆ ಪಡೆದಿದ್ದ ಅವರ ಪತಿಗೂ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದೀಗ ಇಬ್ಬರೂ ಹೋಮ್ ಕ್ಯಾರಂಟೈನ್ ಆಗಿದ್ದಾರೆ. ಸಂಜನಾ ಗಲ್ರಾಣಿಯೇ ಈ ವಿಷಯವನ್ನು ಹೇಳಿಕೊಂಡಿದ್ದು, ನಾನು ಪಾಸಿಟಿವ್ ಆಗಿದ್ದೇನೆ, ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅದಾಗ್ಯೂ ಕರೊನಾ ಬಂದಿರುವುದು ತಮಗೇನೂ ಶಾಕ್ ಆಗಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ. ಯಾವಾಗಲೂ ವೈದ್ಯರ ಕುಟುಂಬ ಹೆಚ್ಚು ರಿಸ್ಕ್ನಲ್ಲಿ ಇರುತ್ತದೆ. ನಮ್ಮ ಕುಟುಂಬದಲ್ಲಿ ವೈದ್ಯರಿದ್ದರೂ ನನಗೆ ಮೊದಲ ಅಲೆಯಲ್ಲಿ ಸೋಂಕು ತಾಕಿಲ್ಲ. ಈಗ ಎರಡನೇ ಅಲೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಅಲ್ಲದೆ ದೀರ್ಘಕಾಲದಿಂದ ತಮಗೆ ಉಬ್ಬಸದ ಸಮಸ್ಯೆ ಇರುವುದನ್ನೂ ಅವರು ತಿಳಿಸಿದ್ದಾರೆ. ನಾನು ಏಳನೇ ತರಗತಿಯಲ್ಲಿ ಇದ್ದಾಗಲೇ ಉಬ್ಬಸ ಕಂಡುಬಂದಿದ್ದು, ವರ್ಷವಿಡೀ ವೀಜಿಂಗ್ ಪಂಪ್ ಬಳಸುತ್ತಿರುತ್ತೇನೆ ಎಂಬುದನ್ನು ಹೇಳಿಕೊಂಡಿದ್ದಾರೆ. ಇನ್ನು ಈ ಕ್ವಾರಂಟೈನ್ ಪೂರ್ತಿ ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುವುದಾಗಿ ಹೇಳಿರುವ ಅವರು, ಇತರರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಜತೆಗೆ ಒಂದಷ್ಟು ಉಸಿರಾಟದ ವ್ಯಾಯಾಮಗಳನ್ನೂ ತಿಳಿಸಿದ್ದಾರೆ.
ಸಂಜನಾ ಮಾತಿನ ಪೂರ್ತಿ ವಿವರ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://youtu.be/u_aNm5jhwI0 .