ಮಧ್ಯಾಹ್ನ ಬಿಕೋ ಎಂದ ಮತಗಟ್ಟೆಗಳು

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಾದ್ಯಂತ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿ ಮಧ್ಯಾಹ್ನದವರೆಗೂ ಬಿರುಸಾಗಿಯೇ ನಡೆಯಿತು.

ಪುರಸಭೆ ವ್ಯಾಪ್ತಿಯ ಪಟ್ಟಣ, ಗಂಜಾಂ ಸೇರಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಬೆಳಗ್ಗೆ ಉತ್ತಮ ಆರಂಭ ಕಂಡಿದ್ದು, ಭಾಗಶಃ ವೃದ್ಧರೇ ಮತದಾನಕ್ಕೆ ಹೆಚ್ಚು ಒಲವು ತೋರಿದರು. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ತಾಪಕ್ಕೆ ಮತಗಟ್ಟೆಗೆ ಜನ ಬಾರದ ಹಿನ್ನೆಲೆಯಲ್ಲಿ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು.

ಕೈಕೊಟ್ಟ ಮತಯಂತ್ರ: ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಮತಗಟ್ಟೆ ಸಂಖ್ಯೆ 131ರಲ್ಲಿ ಮತಯಂತ್ರದಲ್ಲಿ ತಾಂತ್ರಿ ದೋಷ ಕಾಣಿಸಿಕೊಂಡು 40 ನಿಮಿಷಗಳ ಕಾಲ ಮತದಾನ ತಡವಾಗಿ ಆರಂಭವಾಯಿತು. ಬಳಿಕ ಅಧಿಕಾರಿಗಳು ಮತಯಂತ್ರ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ಪ್ರಮುಖರ ಮತದಾನ: ತಾಲೂಕಿನ ಅರಕೆರೆ ಗ್ರಾಮದ ಮತಗಟ್ಟೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಮ್ಮ ತಾಯಿ ಹಾಗೂ ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ ಹಾಗೂ ಪತ್ನಿ ಗೀತಾ ರವೀಂದ್ರ ಅವರೊಂದಿಗೆ ಮತದಾನ ಮಾಡಿದರು.

ಮಾಜಿ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ ಅರಕೆರೆ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಡತನಾಳು ಗ್ರಾಮದಲ್ಲಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

Leave a Reply

Your email address will not be published. Required fields are marked *