ಹಾಸನ ಲೋಕ ಸಭಾ ಅಖಾಡಕ್ಕೆ ಕಡೂರು ಸಕಲ ಸಜ್ಜು

ಕಡೂರು: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಉಮೇಶ್ ಹೇಳಿದರು.

ಪಟ್ಟಣದ ಸರ್ಕರಿ ಪದವಿಪೂರ್ವ ಕಾಲೇಜು ಆವರಣದ ಕೊಠಡಿಯಲ್ಲಿ 250 ಮತಗಟ್ಟೆಗಳ ಇವಿಎಂ ಮತ್ತು ವಿವಿ ಪ್ಯಾಡ್ ಯಂತ್ರಗಳನ್ನು ಇಡಲಾಗಿದೆ. ಕೊಠಡಿಯ ಕಿಟಕಿ ಬಾಗಿಲುಗಳನ್ನೂ ಇಟ್ಟಿಗೆಯಿಂದ ಪ್ಲಾಸ್ಟರ್ ಮಾಡಿ ಮುಚ್ಚಲಾಗಿದೆ. ಬುಧವಾರ ಬೆಳಗ್ಗೆ 10 ಗಂಟೆಗೆ ಈ ಕೊಠಡಿಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರೆದು ಮತಯಂತ್ರಗಳನ್ನು ಸಿಬ್ಬಂದಿಗೆ ವಿತರಿಸಲಾಗುವುದು.

ಮತಯಂತ್ರಗಳ ದೋಷ ಉಂಟಾದಲ್ಲಿ ಪರ್ಯಾಯ ವ್ಯವಸ್ಥೆಗಾಗಿ 41 ಇವಿಎಂ ಮತ್ತು ವಿವಿಪ್ಯಾಡ್ ಯಂತ್ರಗಳನ್ನು ಹೆಚ್ಚುವರಿಯಾಗಿ ಸಿದ್ದಪಡಿಸಲಾಗಿದ್ದು, ಸಮಸ್ಯೆಯಾದ ಮತಗಟ್ಟೆಗೆ ಕೂಡಲೇ ತಲುಪಿಸುವ ವ್ಯವಸ್ಥೆಗೆ ಮಾಡಲಾಗಿದೆ. ಚುನಾವಣೆಗೆ 1,100 ವಿವಿಧ ಹಂತದ ಸಿಬ್ಬಂದಿ, 250 ಬೂತ್ ಮೇಲುಸ್ತುವಾರಿಗೆ ತಲಾ ಓರ್ವ ಪೊಲೀಸ್ ಪೇದೆ, 26 ಸೆಕ್ಟರಲ್ ಅಕಾಧಿರಿಗಳು, 37 ಸಾರಿಗೆ ಬಸ್​ಗಳು ಹಾಗೂ 16 ಜೀಪ್​ಗಳನ್ನು ಸಿಬ್ಬಂದಿನ್ನು ನೇಮಿಸಲಾಗಿದೆ ಎಂದರು.

ಅಂಗವಿಕಲರಿಗಾಗಿ ಚುನಾವಣಾ ಆಯೋಗ 7 ಆಟೋಗಳ ವ್ಯವಸ್ಥೆ ಮಾಡಿದ್ದು, ಅಂಗವಿಲಕರು ನೇರವಾಗಿ ಆಟೋಗಳಲ್ಲಿ ಮತಘಟ್ಟೆಗೆ ಬಂದು ಮತ ಚಲಾಯಿಸಬಹುದು. ನಂತರ ಅವರನ್ನು ಅದೇ ಆಟೋದಲ್ಲಿ ಮನೆಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.

ಪಟ್ಟಣದ ಕೆ.ಹೊಸಳ್ಳಿ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಮತಗಟ್ಟೆ ಸಖಿ ಮತಗಟ್ಟೆಗಳನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಾರೆ. ಮತದಾನದ ನಂತರ ಇವಿಎಂ ಮತ್ತು ವಿವಿ ಪ್ಯಾಡ್ ಯಂತ್ರಗಳನ್ನು ಕಡೂರು ಪಟ್ಟಣದ ಪದವಿಪೂರ್ವ ಕಾಲೇಜು ಆವರಣಕ್ಕೆ ಸಿಬ್ಬಂದಿ ತಂದುಕೊಟ್ಟ ಬಳಿಕ ಆಡಳಿತಾತ್ಮಕ ಪರಿಶೀಲನೆ ಬಳಿಕ ಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ 70 ಕಿ.ಮೀ ದೂರದ ಹಾಸನದ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜು ಆವರಣಕ್ಕೆ ತಲುಪಿಸಲಾಗುವುದು. ಮೇ.23ರವರೆಗೆ ಭದ್ರತೆಯಲ್ಲಿ ಇಡಲಾಗುವುದು ಎಂದರು.

Leave a Reply

Your email address will not be published. Required fields are marked *