ಯಾದಗಿರಿ : 2024ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿಗಳ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ತಿಳಿಸಿದ್ದಾರೆ.
ಕರ್ನಾಟಕ ಜಾನಪದ ಅಕಾಡಿಮಿಯು 2024ನೇ ಸಾಲಿನ 2024ರ ಜನವರಿ 1 ರಿಂದ ಡಿಸೆಂಬರ್ 31ರ ವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಿರುವಂತೆ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ. ಲೇಖಕರು, ಪ್ರಕಾಶಕರು, ಸಂಪಾದಕರು, ತಮ್ಮ 1 ಕೃತಿಯನ್ನು ರಿಜಿಸ್ಟಾçರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜಯಚಾಮರಾಜನಗರ, ಜೆ.ಸಿ ರಸ್ತೆ, ಬೆಂಗಳೂರು 560002 ಇಲ್ಲಿಗೆ 2025ರ ಜೂನ್ 30ರ ಒಳಗೆ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡಬೇಕು. ಪುಸ್ತಕವು ತಜ್ಞರಿಂದ ಪ್ರಕಾರವಾರು ಆಯ್ಕೆಯಾದಲ್ಲಿ, ನಂತರ ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಉಳಿದಂತೆ 3 ಪ್ರತಿಗಳನ್ನು ಮೌಲ್ಯಮಾಪಕರ ಪರಿಶೀಲನೆಗೆ ತರಿಸಿಕೊಳ್ಳಲಾಗುವುದು.
ಪ್ರಕಾರಗಳ ವಿವರ
ಜನಪದ ಗದ್ಯ 3 ಇದ್ದು, ಜನಪದ ಪದ್ಯ, ಪ್ರಕಾರ ಜನಪದ ವಿಚಾರ ವಿಮರ್ಶೆ ಸಂಶೋಧನೆ, ಜನಪದ ಸಂಕೀರ್ಣ, ಪುಸ್ತಕಗಳನ್ನು ಆಯ್ಕೆ ಮಾಡುವಾಗ ನಿಯಮಗಳನ್ನು ಅನುಸರಿಸಲಾಗುವುದು.
ಯಾವುದೇ ಪಠ್ಯಕ್ಕಾಗಿ ಸಿದ್ದಪಡಿಸಿದ ಗ್ರಂಥವಾಗಿರಬಾರದು, ಪುನರ್ ಮುದ್ರಣವಾಗಿರಬಾರದು, ಲೇಖಕರ ಸ್ವಂತ ಕೃತಿಯಾಗಿರಬೇಕು, ಒಮ್ಮೆ ಬಹುಮಾನಕ್ಕೆ ಬಂದ ಪುಸ್ತಕವನ್ನು ಪುನಃ ಬಹುಮಾನಕ್ಕೆ ಪರಿಗಣಿಸುವುದಿಲ್ಲ. ಬಹುಮಾನವನ್ನು ಲೇಖಕರಿಗೆ, ಪ್ರಕಾಶಕರಿಗೆ ನೀಡಲಾಗುವುದು. ಬಹುಮಾನ ಆಯ್ಕೆಯಲ್ಲಿ ಅಕಾಡೆಮಿಯದೇ ಅಂತಿಮ ತೀರ್ಮಾನ, ಪುಸ್ತಕದ ಕನಿಷ್ಠ 4 ಪ್ರತಿಗಳನ್ನು ಕಡ್ಡಾಯವಾಗಿ ಅಕಾಡೆಮಿಗೆ ಕಳುಹಿಸಬೇಕು, ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಈಗಾಗಲೇ ಪುಸ್ತಕ ಬಹುಮಾನ ಪಡೆದ ಸಂಪಾದಕರು, ಲೇಖಕರು ಮತ್ತೆ ಪುಸ್ತಕ ಬಹುಮಾನ ಯೋಜನೆಗೆ ಕೃತಿಗಳನ್ನು ಕಳುಹಿಸಬಾರದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.