ವಿಜಯವಾಣಿ ಸುದ್ದಿಜಾಲ ಧಾರವಾಡ
ಬದುಕಿನಲ್ಲಿ ಉತ್ಸಾಹ, ಸಾಧಿಸುವ ಛಲ, ಸಮಸ್ಯೆ ಎದುರಿಸುವ ಗುಣ ಬೆಳೆಯಬೇಕಾದ ಮನಸ್ಸು ದೃಢವಾಗಿರಬೇಕು. ಮನೋ ನಿಗ್ರಹಕ್ಕೆ ಸಕಾರಾತ್ಮಕ ಹವ್ಯಾಸಗಳು ಸಹಕಾರಿ. ಅದರಲ್ಲೂ ಪುಸ್ತಕ ಓದು ಒಂದಾಗಿದೆ. ಉತ್ತಮ ಪುಸ್ತಕಗಳು ಅತ್ಯುತ್ತಮ ಗೆಳೆಯರಿದ್ದಂತೆ ಎಂದು ಶಿಕ್ಷಕ ರಂಗನಾಥ ವಾಲ್ಮೀಕಿ ಹೇಳಿದರು.
ತಾಲೂಕಿನ ಮನಗುಂಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ , ಧ್ಯಾನ , ಸಂಗೀತ ಆಸಕ್ತಿ , ಕ್ರೀಡೆಗಳು ಮನುಷ್ಯನನ್ನು ಕ್ರೀಯಾಶೀಲವನ್ನಾಗಿ ಮಾಡುತ್ತವೆ. ಹಾಗೆ ಓದುವ ಅಭಿರುಚಿ ಮಕ್ಕಳಾದಿಯಾಗಿ ಎಲ್ಲರಿಗೂ ಇರಬೇಕು ಎಂದರು.
ಉದ್ಯೋಗಕ್ಕಾಗಿ ಓದುವುದು ಒಂದು ವಿಧವಾದರೆ ಜ್ಞಾನಾರ್ಜನೆ, ಅರಿವಿನ ಪರಿಧಿ ವಿಸ್ತರಿಸಲು ಓದುವುದು ಮತ್ತೊಂದು ಬಗೆ. ಹೀಗಾಗಿ ನಿತ್ಯ ಕಾರ್ಯಗಳ ನಡುವೆಯೂ ಸ್ವಲ್ಪ ಸಮಯ ಓದಿಗಾಗಿ ಮೀಸಲಿಡಬೇಕು. ಅದರಿಂದ ಸಮಯದ ಸದ್ಭಳಕೆ ಆಗುವುದು. ಪ್ರಚಲಿತ ವಿಷಯಗಳ ಮಾಹಿತಿ ಸಿಗುವುದು. ಓದಿನಿಂದ ನಮ್ಮ ಅರಿವು ಅಧಿಕವಾಗಿ ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಬೆಳೆಯಲಿದೆ. ಮಕ್ಕಳು ಗ್ರಂಥಾಲಯಗಳ ಪ್ರಯೋಜನ ಪಡೆಯಬೇಕು ಎಂದರು.
ಶಾಲಾ ಮಕ್ಕಳು ಗ್ರಂಥಾಲಯದಲ್ಲಿನ ಒಂದೊಂದು ಪುಸ್ತಕ ಪಡೆದು ಅದನ್ನು ಓದಿ ಅದರಲ್ಲಿನ ಮುಖ್ಯಾಂಶಗಳನ್ನು ಪಟ್ಟಿ ಮಾಡಿ ಓದಿದರು.
ಪುಸ್ತಕಗಳು ಅತ್ಯುತ್ತಮ ಗೆಳೆಯರಿದ್ದಂತೆ
Exif_JPEG_420