17.8 C
Bengaluru
Wednesday, January 22, 2020

ಬದುಕಿನ ಸತ್ಯವ ಒರೆಗೆ ಹಚ್ಚುವ ಯತ್ನ…

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಮನುಷ್ಯಜೀವನದ ಸತ್ಯಾನ್ವೇಷಣೆಗೆ ಸಂಬಂಧಿಸಿದ ಗಂಭೀರ ಓದಿನ ಪುಸ್ತಕವಿದು. ಬದುಕಿನ ಸಣ್ಣ ಸಣ್ಣ ಸತ್ಯಗಳ ಅರಿವು ಮೂಡಲು ಸಹಕಾರಿ. ಮೊದಲಿದ್ದದ್ದು ಬರಿ ನೀರು; ಮೊದಲ ಜೀವ ಸಸ್ಯ, ಪಾಚಿ ರೂಪದಲ್ಲಿತ್ತು. ನಂತರ ಭೂಮಿ ಸೃಷ್ಟಿಯಾಯಿತು. ತದನಂತರ ಮಿಕ್ಕೆಲ್ಲವೂ. ಬದುಕಿನ ಅವಶ್ಯಕತೆಗೆ ಬೇಕಾದ್ದೆಲ್ಲ ಉಂಟಾದ ನಂತರ ಮನುಷ್ಯ ಸೃಷ್ಟಿಯಾದ. ಉದ್ದಕ್ಕೂ ಸೂರ್ಯನ ಸಹಕಾರ. ಕಾವಿಲ್ಲದೆ ಜೀವವಿಲ್ಲ. ದಿನದಿಂದ ದಿನಕ್ಕೆ ಕಾವು ಹೆಚ್ಚುತ್ತಾ ಹೋಗಿ ಕೊನೆಗೆ ಜೀವಗಳೇ ಇಲ್ಲದಾಗುವುದು ಪ್ರಳಯ. ಮತ್ತೆ ಮಳೆ. ಎಲ್ಲ ಕಡೆ ನೀರು. ಇದರ ಪುನರಾವರ್ತನೆ? ಮತ್ತ್ತೆ ಸಸ್ಯ, ಪಾಚಿ ರೂಪದಲ್ಲಿ. ಇದು ವಿಜ್ಞಾನ ಪ್ರತಿಪಾದಿಸಿದ ಸತ್ಯ. ಇದು ಒಂದು ಕಲ್ಪ ಅಂತ ಯಾವುದೋ ಕಾಲದಲ್ಲಿ ಗುರುತಿಸಿದ್ದರು ಎನ್ನುವುದು ಈ ಮಣ್ಣಿನ ಜ್ಞಾನ. ಅಷ್ಟೇ ಅಲ್ಲ. ಸಂದ ಕಲ್ಪಗಳ ಗುರುತೂ ಇದೆ. ಮುಂಬರುವ ಕಲ್ಪಗಳ ಹೆಸರೂ ಪರಿಚಯವೂ ಇದೆ. ಈ ಅರಿವನ್ನು ಪುಸ್ತಕ ಮೂಡಿಸುತ್ತದೆ.

ಲೇಖಕರು ರಾಮಾಯಣದ ವಿವಿಧ ಸರ್ಗಗಳಲ್ಲಿ ಬರುವ ನಕ್ಷತ್ರಗಳ ಪ್ರಸ್ತಾಪ ಉಲ್ಲೇಖಿಸಿ ಅವು ಹೇಗೆ ಕಾಲಸೂಚಕ ಅಂತ ವಿವರಿಸುತ್ತಾರೆ. ರಾಮಾಯಣ ಮಹಾಕಾವ್ಯದ ಕಾಲದ ಬಗ್ಗೆ ಏನೇ ಜಿಜ್ಞಾಸೆ ಇದ್ದರೂ ಅದು ಬುದ್ಧ ಮಹಾವೀರರಿಗಿಂತ ಮೊದಲಿನದು ಎನ್ನುವ ಬಗ್ಗೆ ಅನುಮಾನವಿಲ್ಲ. ಈ ಅರಿವು ಒಂದು ಮಹಾಕಾವ್ಯದ ಸಾಹಿತ್ಯ ಭಾಗ ಎನ್ನುವುದಾದರೆ ಅದಾಗಲೇ ಜನಜೀವನದಲ್ಲಿ ಹಾಸು ಹೊಕ್ಕಾಗಿತ್ತು ಎನ್ನುವುದು ಸತ್ಯ. ಬಹುಶಃ ಭಾರತದ ಸಂಸ್ಕೃತಿ, ಇಡೀ ಭೂಮಂಡಲದ ಸಂಸ್ಕೃತಿ ಆಗಿದ್ದೀತು. ಬರಿ ಒಂದು ದೇಶದ ಇವತ್ತಿನ ಸರಹದ್ದಿಗೆ ಸೀಮಿತಗೊಳಿಸುವುದು ತಪ್ಪಾದೀತೇನೋ.

ಎಲ್ಲಿಂದಲೋ ಯಾರೋ ಇಲ್ಲಿ ವಲಸೆ ಬಂದದ್ದಲ್ಲ. ಇಲ್ಲಿ ಉಂಟಾದದ್ದು ಮತ್ತೆ ಅಲ್ಲಲ್ಲಿಗೆ ವಲಸೆ ಹೋಗಿರಬೇಕು! ನಾವು ಮರೆತದ್ದನ್ನು ಅವರು ತಮ್ಮವಾಗಿಸಿ ಕೊಂಡರೇನೋ! ಅದನ್ನೆಲ್ಲ ನೆನಪಿಸುತ್ತದೆ ಈ ಪುಸ್ತಕ. ವೇದಗಳಿಂದ ಉಲ್ಲೇಖಿಸಿ ಕಾಲವನ್ನು ಸೂರ್ಯ ಮತ್ತು ವರುಣರ ಅಧೀನಎನ್ನುತ್ತಾರೆ. ಪುಸ್ತಕ ಓದಿದ ನಂತರ ‘ಕಾಲ’ದ ಅರಿವು ಸ್ವಲ್ಪ ಹೆಚ್ಚಾದೀತೇನೋ. ಜೀವಕ್ಕೆಕಾವು ಮತ್ತು ತೇವ ಎರಡೂ ಬೇಕು. ಹದವಾಗಿದ್ದಾಗ ಸೃಷ್ಟಿ, ಸಹ್ಯವಾಗಿದ್ದಷ್ಟು ದಿನ ಬದುಕು, ಮಿತಿ ಮೀರಿದಾಗ ಪ್ರಳಯ. ಸೃಷ್ಟಿಯ ಪ್ರತಿ ಜೀವವೂ ಪ್ರಳಯಕ್ಕೆ ಪೂರಕ.

ಪ್ರಳಯದಲ್ಲಿ ಮತ್ತ್ತೆ ಸೃಷ್ಟಿ. ಹಾಗಾಗಿ ಕಾಲ ನಿರಂತರವೇನೋ! ಇದು ಜೀವಕ್ಕಷ್ಟೇ ಅಲ್ಲ; ಬದುಕಿನ ಭಾವಕ್ಕೂ ಪ್ರಸ್ತುತ. ‘ನನ್ನ ಕಾಲ’ ಎಂದರೆ ಅದಕ್ಕೊಂದು ಮಿತಿ ಇದೆ. ನನ್ನ ಹುಟ್ಟು ಮತ್ತು ಸಾವಿನ ಮಿತಿ.

ಅದರೆ ನನ್ನಲ್ಲಿರುವ ಪ್ರಜ್ಞೆೆಗೆ ಈ ಮಿತಿ ಇಲ್ಲ. ಅದು ನನ್ನ ಮೂಲಕ ನನ್ನಮುಂದಿನ ಪೀಳಿಗೆಗೆ ವರ್ಗವಾಗುತ್ತದೆ. ನನ್ನ ಸೀಮಿತ ಬುದ್ಧಿಮತ್ತೆಯ ತರ್ಕಕ್ಕೆನಿಲುಕದ ಈ ಸೃಷ್ಟಿ ಪ್ರಳಯಗಳ ಪುನರಾವರ್ತನೆಯಲ್ಲಿ ನಾನೊಂದು ಅಣು ಎನ್ನುವುದುಮನದಟ್ಟಾದರೆ ನನಗೂ ಬದುಕು ಸಹ್ಯವಾಗುತ್ತದೆ ಮತ್ತು ನಾನೂ ಪ್ರಪಂಚಕ್ಕೆ ಸಹ್ಯವಾಗುತ್ತೇನೆ.

ವ್ಯಕ್ತಿಗೆ ಸಾವಿದೆ, ವ್ಯಕ್ತಿತ್ವಕ್ಕೆ ಸಾವಿಲ್ಲ. ಬದುಕಿನ ಮೂಲ ಉದ್ದೇಶ ವ್ಯಕ್ತಿತ್ವದ ವಿಕಸನ. ಸೃಷ್ಟಿಯಾದ ಸಂಪನ್ಮೂಲಗಳಿಗೆ ಮಿತಿಯಿದೆ. ಅವಶ್ಯಕತೆ ಇದ್ದಷ್ಟು ಉಪಯೋಗಿಸಿದರೆಹೆಚ್ಚು ದಿನ ತಡೆದೀತು. ಮಿತಿ ಮೀರಿದರೆ ಬೇಗ ಖಾಲಿಯಾದೀತು.

ಯುಗಾಂತ್ಯಕ್ಕೆ ಇಷ್ಟೇ ಕಾಲ ಅಂತಿಲ್ಲ ಎನಿಸುತ್ತದೆ. ಸಂಪನ್ಮೂಲಗಳು ಖಾಲಿಯಾದಂದು ಪ್ರಳಯ. ನನ್ನ ತಳಿಯ ನಾಶ. ತಳಿಯ ಬಗ್ಗೆ ಪ್ರೀತಿ ಇದ್ದರೆ ಪ್ರಕೃತಿಯ ಬಗ್ಗೆ ಗೌರವ ಇರಬೇಕು. ಇಲ್ಲಿರುವುದು ದೇವರು ಧರ್ಮದ ಭಾವವಲ್ಲ. ಬದುಕಿಗೆ ಅವಶ್ಯವಾದ ಜ್ಞಾನ. ಬದುಕಿಗೆ ಜ್ಞಾನ ಬೇಕು. ವಿಜ್ಞಾನವೇನಿದ್ದರೂ ಸೌಕರ್ಯಕ್ಕೆ. ಸೃಷ್ಟಿಯಾದ ಕೊನೆಯ ಜೀವಿ ಮನುಷ್ಯ. ಅವನಿಂದಲೇ ಪ್ರಳಯವಾ? ಪ್ರಳಯದ ನಾಂದಿ ಮನುಷ್ಯನಿಂದಲೇ ಆಗುತ್ತದೆಯೇ? ಈ ಭಾವವನ್ನು ಓದುಗರಲ್ಲಿ ಸ್ಪುರಿಸುತ್ತದೆ ಈ ಪುಸ್ತಕ. ಇಷ್ಟು ಜ್ಞಾನವನ್ನು ಕೊಡುತ್ತದೆ. ಸಾಲದೇ ಓದಿನ ಸಾರ್ಥಕತೆಗೆ?

ಸತ್ಯಾನ್ವೇಷಣೆಯ ಜಿಜ್ಞಾಸೆ

ಕಾಲ ಎನ್ನುವುದು ಮುಂದಕ್ಕೆ ನಿರಂತರವಾಗಿ ಚಲಿಸುತ್ತಲೇ ಇರುತ್ತದೆಯೇ ಹೊರತು ಹಿಮ್ಮುಖವಾಗಿ ಚಲಿಸುವುದಿಲ್ಲ. ಇದು ಈ ಪುಸ್ತಕದ ಹಂದರವಾಗಿದ್ದರೂ ಇಲ್ಲಿ ಅನೇಕ ಕಥೆಗಳ ಸಂಕಲನವಿದೆ, ಜತೆಗೆ ಜಿಜ್ಞಾಸೆ ಹುಟ್ಟುತ್ತದೆ. ಇದು ಸದ್ಯೋಜಾತರು ಈ ಮೊದಲು ಬರೆದ ‘ಶಿಲೆಗಳಲ್ಲಡಗಿನ ಸತ್ಯ’ ಮತ್ತು ‘ನಾಸತ್ಯಾ’ ಎಂಬ ಶೀರ್ಷಿಕೆಯ ಎರಡು ಪುಸ್ತಕಗಳಿಗಿಂತಲೂ ಸ್ವಲ್ಪ ಭಿನ್ನ.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...