ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ರಬಕವಿ/ಬನಹಟ್ಟಿ:ಬ್ರಹ್ಮಾನಂದರು ದಾರ್ಶನಿಕ ಮಹರ್ಷಿಯಾಗಿದ್ದು, ರಾಜರಿಗೆ ಮಾರ್ಗದರ್ಶನ ಮಾಡುವ ಮಹಾನ್ ಸ್ವಾಮೀಜಿಯಾಗಿದ್ದರು ಎಂದು ಬೆಳಗಾವಿ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಜಗಜಂಪಿ ಹೇಳಿದರು.

ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಡಾ.ಪ್ರದೀಕುಮಾರ ಹೆಬ್ರಿ ಬರೆದ ಗುರುದೇವ ಬ್ರಹ್ಮಾನಂದರ ಮಹಾಕಾವ್ಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಓದುವ ಹವ್ಯಾಸ, ಕಾಯಕ ಹಾಗೂ ಒಳ್ಳೆಯ ನುಡಿ ಜೀವನಕ್ಕೆ ಅಗತ್ಯವಾಗಿದೆ. ಬ್ರಹ್ಮಾನಂದರ ಚರಿತ್ರೆ ಓದಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೃತಿ ರಚನೆಕಾರ ಪ್ರದೀಪ ಹೆಬ್ರಿ ಮಾತನಾಡಿ, ಸಾಯಿಬಾಬಾ ಮತ್ತು ಗುರುದೇವ ಬ್ರಹ್ಮಾನಂದ ಜೀವನ ಚರಿತ್ರೆಗಳು ಹೋಲಿಕೆ ಹೊಂದುತ್ತವೆ. ಕಲ್ಯಾಣ ರಾಜ್ಯ ನಿರ್ವಣಕ್ಕೆ ಪಾಲಕರು ಮಕ್ಕಳನ್ನು ಉತ್ತಮವಾಗಿ ಬೆಳೆಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಗುರುಸಿದ್ಧೇಶ್ವರ ಶ್ರೀಗಳು ಪ್ರಾಸ್ತಾವಿಕ ಮಾತನಾಡಿದರು. ಜಮಖಂಡಿ ಓಲೇಮಠದ ಡಾ.ಅಭಿನವ ಚನ್ನಬಸವ ಸ್ವಾಮೀಜಿ ಗುರುದೇವ ಮಹಾಕಾವ್ಯ ಬಿಡುಗಡೆ ಮಾಡಿದರು. ಅಂತಾರಾಷ್ಟ್ರೀಯ ಕಲಾವಿದ ಜಯವಂತ ಮುನ್ನೊಳ್ಳಿ ರಚಿಸಿದ ಬ್ರಹ್ಮಾನಂದ ಕಲಾಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಹಿರಿಯ ಸಾಹಿತಿ ಸಿದ್ದರಾಜ ಪ್ರಜಾರಿ, ಅಂತಾರಾಷ್ಟ್ರೀಯ ಖ್ಯಾತ ಚಿತ್ರಕಾರ ಜಯವಂತ ಮುನ್ನೊಳ್ಳಿ ಮಾತನಾಡಿದರು. ವಿಶ್ವಜ ಕಾಡದೇವರ, ಶೇಖರ ಬಡಿಗೇರ, ಶಿವಾನಂದ ದಾಶ್ಯಾಳ, ಮರೀಶ ಮುತ್ತೂರ, ಐ.ಆರ್. ಮಠಪತಿ, ಮಹಾದೇವ ಕವಿಶೆಟ್ಟಿ, ಡಾ. ಅಶೋಕ ನರೋಡೆ, ಜಿ.ಎಸ್. ವಡಗಾಂವಿ, ಸುರೇಶ ಕೋಲಾರ, ವೈ.ಬಿ. ಕೊರಡೂರ, ಎಂ.ಎಸ್. ಮುನ್ನೊಳ್ಳಿ, ಶಿವಜಾತ ಉಮದಿ, ಬುದ್ದಪ್ಪ ಕುಂದಗೋಳ, ವೆಂಕಟೇಶ ನಿಂಗಸಾನಿ ಇತರರಿದ್ದರು.