Bommanahalli Constituency

ಕ್ಷೇತ್ರ ಪರಿಚಯ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದು ಬೆಂಗಳೂರು ನಗರದ ದಕ್ಷಿಣ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಬೊಮ್ಮನಹಳ್ಳಿಯಲ್ಲಿ ಬಿಜೆಪಿಯ ಎಂ. ಸತೀಶ್ ರೆಡ್ಡಿ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 9 ವಾರ್ಡ್ಗಳಿದ್ದು ಎಲ್ಲಾ ವಾರ್ಡ್ಗಳಲ್ಲಿಯೂ ಬಿಜೆಪಿಯ ಅಭ್ಯರ್ಥಿಗಳೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 

 

ಈ ಕ್ಷೇತ್ರದಲ್ಲಿ ಶೇಕಡ 57.22ರಷ್ಟು ಜನರು ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿಯವರಿಗೆ ತಮ್ಮ ಮತ ನೀಡಿದ್ದಾರೆ. ಇಲ್ಲಿ ಅಭ್ಯರ್ಥಿ ಸುಶ್ಮಾ ರಾಜಗೋಪಾಲ ರೆಡ್ಡಿ ಶೇಕಡ 33ರಷ್ಟು ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷವನ್ನು ಎರಡನೇ ಪ್ರಬಲ ಪಕ್ಷವಾಗಿ ಮಾಡಿದ್ದಾರೆ. ಆದರೂ ಕಾಂಗ್ರೆಸ್ ಯಾವುದೇ ವಾರ್ಡ್ಗಳಲ್ಲಿ ಗೆಲುವು ಸಾಧಿಸಿಲ್ಲ. 

Bommanahalli Constituency

ಬೊಮ್ಮನಹಳ್ಳಿ ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿದ್ದು ಹೊಸೂರು ರಸ್ತೆ ರಾಷ್ಟ್ರೀಯ ಹೆದ್ದಾರಿ 7ರ ಪಕ್ಕದಲ್ಲಿದೆ. ಇಲ್ಲಿ ವಸತಿ, ಕೈಗಾರಿಕಾ ಪ್ರದೇಶಗಳನ್ನು ಕಾಣಬಹುದಾಗಿದೆ. ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ, ಹೊಂಗಸಂದ್ರ, ಜರಗನಹಳ್ಳಿ, ಬಿಳೇಕಹಳ್ಳಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ಅರಕೆರೆ ಮತ್ತು ಪುಟ್ಟೇನಹಳ್ಳಿ ಈ ಕ್ಷೇತ್ರದ ವಾರ್ಡ್‌ಗಳಾಗಿವೆ.

ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯ ಮಾಹಿತಿ ಪ್ರಕಾರ ಒಟ್ಟು 4,25,433 ಮತದಾರರಿದ್ದಾರೆ. ಈ ಕ್ಷೇತ್ರ ಅತ್ಯಧಿಕ ವಾಣಿಜ್ಯ ಚಟುವಟಿಕೆಗಳಿರುವ ಕ್ಷೇತ್ರಗಳಲ್ಲಿ ಒಂದು. ಅನೇಕ ಕೈಗಾರಿಕೆಗಳ ಜಾಗವಾಗಿದ್ದು ಆರ್ಥಿಕ ಚಟುವಟಿಕೆಗಳು ನಡೆಯುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.


ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಗಾರ್ಮೆಂಟ್ ಕಾರ್ಖಾನೆಗಳು ಈ ಕ್ಷೇತ್ರದಲ್ಲಿ ಇದ್ದು ಸಣ್ಣ ಪ್ರಮಾಣದ ಕೈಗಾರಿಕೆ ಹೇರಳವಾಗಿವೆ. ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಉದ್ದಿಮೆಗಳ ಹಾಟ್‌ಸ್ಪಾಟ್‌ ಆಗಿದೆ. ಇಲ್ಲಿ 100ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಛೇರಿಗಳನ್ನು ಹೊಂದಿವೆ. ಈ ಹಿಂದೆ ಈ ಕ್ಷೇತ್ರದಲ್ಲಿ ಕೆಸಿಡಿಸಿ ಕಾರ್ಖಾನೆಯೂ ಇತ್ತು. ಈಗ ಅದನ್ನು ಜನರ ಆರೋಗ್ಯದ ಹಿತದೃಷ್ಟಿಯಿಂದ ಮುಚ್ಚಲಾಗಿದೆ.


ಇಲ್ಲಿ ಪ್ಲಾಂಟ್ ಹಾಗೂ ಮಷಿನರಿ ಉತ್ಪಾದನಾ ಕಂಪನಿಗಳಿಂದ ಹಿಡಿದು ಹೋಂ ಅಪ್ಲೈಯೆನ್ಸ್, ಕಂಪ್ಯೂಟರ್ ಬಿಡಿಭಾಗಗಳ, ಟ್ರಾನ್ಸ್ಪೋರ್ಟ್, ಬಿಲ್ಡರ್ಸ್, ಫ್ಯಾಷನ್ ಹೀಗೆ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದ ವಸ್ತುಗಳನ್ನು ಉತ್ಪಾದಿಸುವ ಕೇಂದ್ರಗಳೂ ಇವೆ.


ಈ ಕ್ಷೇತ್ರ ‘ನಮ್ಮ ಮೆಟ್ರೋ’ ನಗರದಾದ್ಯಂತ ತಲುಪುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದು ಈಗಾಗಲೇ ಮೆಟ್ರೋ ರೈಲು ಕನಕಪುರ ರಸ್ತೆಯ ಜರಗನಹಳ್ಳಿ ಮತ್ತು ಪುಟ್ಟೇನಹಳ್ಳಿಯವರೆಗೆ ತಲುಪಿದೆ. ನಮ್ಮ ಮೆಟ್ರೋ ಜಯನಗರ, ಬನ್ನೇರುಘಟ್ಟ ರಸ್ತೆ, ಮೀನಾಕ್ಷಿ ಮಾಲ್ವರೆಗೂ ಬೊಮ್ಮನಹಳ್ಳಿ ಮಾರ್ಗವಾಗಿ ಸಿಲ್ಕ್ ಬೋರ್ಡ್ನಿಂದ ಎಲೆಕ್ಟ್ರಾನಿಕ್ ಸಿಟಿ ವರೆಗೂ ಅಭಿವೃದ್ಧಿಗೊಳಿಸಲು ಯೋಜನೆ ಮಂಜೂರಾಗಿದೆ.

ಆಕಾಂಕ್ಷಿಗಳು

Bommanahalli Constituency

ಸುಷ್ಮಾ ರಾಜಗೋಪಾಲ್ ರೆಡ್ಡಿ

Bommanahalli Constituency

ಟಿ ಆರ್ ಪ್ರಸಾದ್

ವೀಡಿಯೊ ಗ್ಯಾಲರಿ