ಬಿಹಾರದ 2,100 ರೈತರ ಸಾಲ ತೀರಿಸಿದ ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​

ಮುಂಬೈ: ಬಾಲಿವುಡ್​ನ ಹಿರಿಯ ನಟ ಅಮಿತಾಬ್​ ಬಚ್ಚನ್​ ಬಿಹಾರದ ರೈತರ ನೆರವಿಗೆ ಧಾವಿಸಿದ್ದು, ಸಾಲ ತೀರಿಸಲಾಗದೆ ಪರದಾಡುತ್ತಿದ್ದ 2,100 ರೈತರ ಸಾಲವನ್ನು ಬ್ಯಾಂಕ್​ಗೆ ಮರುಪಾವತಿ ಮಾಡಿದ್ದಾರೆ.

ಈ ಕುರಿತು ಅವರು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದು, ಇಂದು ನಾನು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ. ಬಿಹಾರದಲ್ಲಿ ಸಾಲ ತೀರಿಸಲಾಗದೆ ಪರದಾಡುತ್ತಿರುವ ರೈತರ ಪೈಕಿ 2,100 ರೈತರನ್ನು ಆಯ್ಕೆ ಮಾಡಿ ಅವರ ಸಾಲವನ್ನು ಒನ್​ ಟೈಮ್​ ಸೆಟಲ್​ಮೆಂಟ್​ ಮೂಲಕ ಬ್ಯಾಂಕ್​ಗೆ ಪಾವತಿಸಲಾಗಿದೆ. ಇಂದು ಕೆಲವು ರೈತರನ್ನು ನಮ್ಮ ಮನೆಗೆ ಆಹ್ವಾನಿಸಿ ಅವರಿಗೆ ಸಾಲ ಮರುಪಾವತಿ ಪತ್ರವನ್ನು ವಿತರಿಸಿದ್ದೇವೆ. ಶ್ವೇತಾ ಮತ್ತು ಅಭಿಷೇಕ್​ ಸಾಲ ಮರುಪಾವತಿ ಪತ್ರವನ್ನು ವಿತರಿಸಿದರು ಎಂದು ತಿಳಿಸಿದ್ದಾರೆ.

ಅಮಿತಾಬ್​ ಬಚ್ಚನ್​ ಕಳೆದ ವರ್ಷ ಉತ್ತರ ಪ್ರದೇಶದ ಒಂದು ಸಾವಿರ ರೈತರ ಸಾಲವನ್ನು ತೀರಿಸಿದ್ದರು.

ಅವರು ತಮ್ಮ ಬ್ಲಾಗ್​ನಲ್ಲಿ ಇನ್ನು ಒಂದು ಭರವಸೆಯನ್ನು ಈಡೇರಿಸಬೇಕಿದೆ. ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ ಯೋಧರ ಕುಟುಂಬಸ್ಥರಿಗೆ ಕೈಲಾದ ಮಟ್ಟಿಗೆ ಆರ್ಥಿಕ ನೆರವು ನೀಡಬೇಕೆಂದಿದ್ದೇನೆ. ಅದನ್ನು ನಾಳೆ ಪೂರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

https://srbachchan.tumblr.com/post/185527557711

2 Replies to “ಬಿಹಾರದ 2,100 ರೈತರ ಸಾಲ ತೀರಿಸಿದ ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​”

  1. ಧನ್ಯವಾದಗಳು ಅಮಿತಾಭ್ ಬಚ್ಚನ್ ಸಾಬ್….ಇದಕ್ಕಿಂತ ಬೇರೆನೂ ಹೇಳಲು ಸಾಧ್ಯವಾಗುತ್ತಿಲ್ಲ. ಜನರ ಆಶೋತ್ತರಗಳ ಕಡೆ ಗಮನ ಕೊಡಬೇಕಾದ ಸರ್ಕಾರಗಳೇ ಕಣ್ಮುಚ್ಚಿ ಕುಳಿತಿವೆ. ರೈತರ ಬೇಡಿಕೆಗಳು ಈಡೇರಿಸದ ಸರ್ಕಾರಗಳು ಇದ್ದರೆಷ್ಟು ಬಿಟ್ಟರೆಷ್ಟು. ನಿಮ್ಮಂತೆಯೇ ಎಲ್ಲರೂ ರೈತರ ಏಳಿಗೆಗೆ ಕೈ ಜೋಡಿಸಲಿ ಎಂಬುದೇ ರೈತರ ಮನವಿ…… ಸರ್ಕಾರಗಳೇ ರೈತರನ್ನು ಕೊಲ್ಲದಿರಿ. ಪ್ಲೀಸ್.

Leave a Reply

Your email address will not be published. Required fields are marked *