‘ಹಮ್​ ಆಪ್​ಕೆ ಹೈ​ ಕೌನ್’​ ಖ್ಯಾತಿಯ ಬಾಲಿವುಡ್​ ಚಿತ್ರ ನಿರ್ಮಾಪಕ ರಾಜ್​ಕುಮಾರ್​ ಬಾರ್ಜತ್ಯಾ ನಿಧನ

ಬಾಲಿವುಡ್​: ಬಾಲಿವುಡ್​ ಚಲನಚಿತ್ರ ನಿರ್ಮಾಪಕ ರಾಜಕುಮಾರ್​ ಬಾರ್ಜತ್ಯಾ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು.

ರಾಜಶ್ರೀ ಪ್ರೊಡಕ್ಷನ್​ ಸಂಸ್ಥೆ ಅಧ್ಯಕ್ಷರಾಗಿದ್ದ ಅವರು, ಹಮ್​ ಆಪ್​ಕೆ ಹೈ​ ಕೌನ್​ !, ಹಮ್​ ಸಾಥ್​-ಸಾಥ್​ ಹೈ​, ವಿವಾಹ್​, ಪ್ರೇಮ ರತನ್​ ಧನ್​ ಪಾಯೋ ಮತ್ತಿತರ ಚಿತ್ರಗಳನ್ನು ನಿರ್ಮಿಸಿದ್ದರು. ಅವರ ನಿರ್ಮಾಣದ ಕೊನೇ ಸಿನಿಮಾ ಹಮ್​ ಚಾರ್​ ಫೆ.15ರಂದು ಬಿಡುಗಡೆಗೊಂಡಿತ್ತು.

ಈ ಬಗ್ಗೆ ಚಿತ್ರ ವ್ಯವಹಾರ ವಿಮರ್ಶಕ ಕೋಮಲ್​ ನಹ್ತಾ ಟ್ವೀಟ್ ಮಾಡಿದ್ದು, ರಾಜ್​ಕುಮಾರ್​ ಅವರ ನಿಧನದಿಂದ ಶಾಕ್​ ಆಗಿದೆ. ಈಗೊಂದು ವಾರದ ಹಿಂದೆ ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದೆ. ನಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆರೋಗ್ಯವಾಗಿಯೇ ಇದ್ದರು. ಅವರ ಸಾವು ನೋವು ತಂದಿದೆ ಎಂದು ಹೇಳಿದ್ದಾರೆ.

ಅವರಿಗೆ ಪತ್ನಿ ಸುಧಾ ಬಾರ್ಜತ್ಯಾ, ಮಗ ಸೂರಜ್​ ಬಾರ್ಜತ್ಯಾ ಇದ್ದಾರೆ.