More

    ಬಾಲಿವುಡ್​ ನಟಿಯ ಅತ್ತೆಯಿಂದ ಫ್ಲಿಪ್​ ದಿ ಸ್ವಿಚ್​ ಹಾಡಿಗೆ ಹೆಜ್ಜೆ: ವೈರಲ್​ ಆಯ್ತು ಈ ಜೋಡಿಯ ಡ್ಯಾನ್ಸ್​

    ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ರೀತಿಯ ಚಾಲೆಂಜ್​ಗಳನ್ನು ನೋಡಿದ್ದೇವೆ. ಕೀಕಿ ಚಾಲೆಂಜ್​, ನೋ ಮೇಕಪ್​ ಚಾಲೆಂಜ್​ ಹೀಗೆ ಅನೇಕ ರೀತಿಯ ಚಾಲೆಂಜ್​ಗಳು ಜಾಲತಾಣಗಳಲ್ಲಿ ಸದ್ದು ಮಾಡಿ ಹೋಗಿವೆ. ಇದೀಗ ಫ್ಲಿಪ್​ ದಿ ಸ್ವಿಚ್​ ಚಾಲೆಂಜ್​ ಟ್ರೆಂಡಿಂಗ್​ನಲ್ಲಿದ್ದು, ಅನೇಕ ಸೆಲೆಬ್ರಿಟಿಗಳು ಈ ಚಾಲೆಂಜ್​ ಸ್ವೀಕರಿಸಿ ಹೆಜ್ಜೆ ಹಾಕುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ.

    ವಿಶೇಷವೆನಿಸುವಂತೆ ಬಾಲಿವುಡ್​ನ ನಟಿ ಸಮೀರಾ ರೆಡ್ಡಿ ತನ್ನ ಅತ್ತೆಯ ಜತೆ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ. ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ನಟಿ ಚಾಲೆಂಜ್​ ಸ್ವೀಕರಿಸಿರುವ ವಿಡಿಯೋವನ್ನು ಹಾಕಿದ್ದಾರೆ.

    ವಿಡಿಯೋ ಪೋಸ್ಟ್​ ಮಾಡುವುದಕ್ಕೂ ಮೊದಲು ನಟಿ ಒಂದು ಫೋಟೋ ಹಾಕಿದ್ದು, ಅದರಲ್ಲಿ ಆಕೆ ಬಿಳಿ ಬಣ್ಣದ ಬಾತುಕೋಳಿಗಳ ಚಿತ್ರವಿರುವ ನೀಲಿ ಬಣ್ಣದ ಫ್ರಾಕ್​ ಧರಿಸಿದ್ದಾರೆ. ಫೋಟೋದಲ್ಲಿ ಸಖತ್​ ಸ್ಟೈಲಿಷ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಸಮೀರಾ ಅವರ ಅತ್ತೆ ಕಪ್ಪು ಬಣ್ಣದ ಶೋಲ್ಡರ್​ಲೆಸ್​ ಟಾಪ್​ ಧರಿಸಿದ್ದು ಅದರ ಮೇಲೆ ಗ್ಯಾಂಗ್​ಸ್ಟಾ ಎನ್ನುವ ಡಾಲರ್​ ಇರುವ ಚೈನ್​ ಧರಿಸಿದ್ದಾರೆ.

    ಚಾಲೆಂಜ್​ ಸ್ವೀಕರಿಸಿರುವ ವಿಡಿಯೋದಲ್ಲಿ ನಟಿ ಡ್ರೇಕ್​ನ ಫ್ಲಿಪ್​ ದಿ ಸ್ವಿಚ್​ ಹಾಡಿಗೆ ಮೊದಲು ನೃತ್ಯ ಮಾಡಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್​ ಮತ್ತು ಟಾಪ್​ನ ಮೇಲೆ ಗ್ಯಾಂಗ್​ಸ್ಟಾ ಡಾಲರ್​ ಚೈನ್​ ಧರಿಸಿ ನೃತ್ಯ ಮಾಡುತ್ತಿರುವ ನಟಿಯನ್ನು ಆಕೆಯ ಅತ್ತೆ ವಿಡಿಯೋ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಇಬ್ಬರ ಬಟ್ಟೆಯು ಅದಲು ಬದಲಾಗಿದ್ದು, ನಟಿಯ ಅತ್ತೆ ಡ್ಯಾನ್ಸ್​ ಮಾಡುವುದನ್ನು ನಟಿ ವಿಡಿಯೋ ಮಾಡಿದ್ದಾರೆ.

    ಸಮೀರಾ ಮತ್ತು ಆಕೆಯ ಅತ್ತೆಯ ಈ ಡ್ಯಾನ್ಸ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಹಿಂದೆ ಟಾಲಿವುಡ್​ನ ಜೆನ್ನಿಫರ್​ ಲೋಪೆಜ್​ ಮತ್ತು ಕ್ಯಾಮಿಲಾ ಕ್ಯಾಬೆಲ್ಲೊ ಕೂಡ ಈ ಚಾಲೆಂಜ್​ಗೆ ಹೆಜ್ಜೆ ಹಾಕಿದ್ದು ಟಿಕ್​ಟಾಕ್​ನಲ್ಲಿ ವೈರಲ್​ ಆಗಿತ್ತು. (ಏಜೆನ್ಸೀಸ್​)

    ವಿದೇಶಿಗರ ಬಾಯಲ್ಲೂ ನಮಸ್ತೆ ಎನ್ನಿಸುತ್ತಿದೆ ಕರೊನಾ ವೈರಸ್​! ಬಾಲಿವುಡ್​ನಲ್ಲೀಗ ನೋ ಹ್ಯಾಂಡ್​ ಶೇಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts