25.9 C
Bengaluru
Wednesday, January 22, 2020

ಏ ದೋಸತಿ ಹಮ್​ ನಹೀ ಚೋಡೇಂಗೆ … ಎಂದು ಹಾಡಿದ ನಟ ಧರ್ಮೇಂದ್ರಗೆ 84!

Latest News

ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ...

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಬಾಲಿವುಡ್​ ನಟ ಧರ್ಮೇಂದ್ರ ಅವರಿಗೆ ಇಂದಿಗೆ (ಡಿ.8) 84 ವರ್ಷ. ನಗುಮೊಗದ, ಆಕರ್ಷಕವಾಗಿ ದೇಹವನ್ನು ಹುರಿಗೊಳಿಸಿದ, ಮಗುವಿನಂತಹ ಮನಸ್ಸಿನ ನಟ ಧರ್ಮೆಂದ್ರ.

ಧರ್ಮೇಂದ್ರ ಹುಟ್ಟಿದ್ದು 1935 ಡಿ.8ರಂದು ಪಂಜಾಬ್​ನ ಲುಧಿಯಾನ ಜಿಲ್ಲೆಯ ಜಾಟ್​ ಸಿಖ್​ ಕುಟುಂಬದಲ್ಲಿ. ತಂದೆ ಶಾಲೆ ಮುಖ್ಯೋಪಾಧ್ಯಾಯ.

ಧರ್ಮೇಂದ್ರ ಚಿತ್ರರಂಗ ಪ್ರವೇಶಿಸಿದ್ದು ಕುಟುಂಬದವರ ಸಹಾಯ ಅಥವಾ ಅದೃಷ್ಟದಿಂದಲ್ಲ. ಬದಲಿಗೆ ಫಿಲ್ಮ್​ಫೇರ್​ ಟ್ಯಾಲೆಂಟ್​ ಹಂಟ್​ನಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದರಿಂದ.

1960 ಮತ್ತು 70ರ ದಶಕದಲ್ಲಿ ಧಮೇಂದ್ರ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಾಯಕ ನಟ. 1960ರ ದಶಕದಲ್ಲಿ ಆತನ ಅತಿ ಹೆಚ್ಚು ಸಿನಿಮಾಗಳ ಬಿಡುಗಡೆಯಾದವು ಅಲ್ಲದೆ, ಅತಿ ಹೆಚ್ಚು ಸೂಪರ್​ ಹಿಟ್​ ಆದವು. ಅವುಗಳು ಕಾಮಿಡಿ ಮತ್ತು ರೋಮ್ಯಾಂಟಿಕ್​ ಸಿನಿಮಾಗಳು. ಇದೇ ಸಮಯದಲ್ಲಿ ಪ್ರಖ್ಯಾತ ನಟಿ ಮೀನಾ ಕುಮಾರಿ ಅವರೊಂದಿಗೆ ಇವರ ಹೆಸರು ಕೇಳಿ ಬಂದಿತ್ತು.

ಇನ್ನು 1970ರ ದಶಕದಲ್ಲಿ ಧರ್ಮೇಂದ್ರ ಅವರು ರೊಮ್ಯಾಂಟಿಕ್​ನಿಂದ ಆ್ಯಕ್ಷನ್​ ಡ್ರಾಮ ಕಡೆಗೆ ತಿರುಗಿದರು. ಇದೇ ವೇಳೆಯಲ್ಲಿ ಬಿಡುಗಡೆಯಾಗಿದ್ದು ಭಾರತವಷ್ಟೇ ಏಕೆ ಪ್ರಪಂಚದ ಬಾಲಿವುಡ್​ ಪ್ರಿಯರು ಮರೆಯದಂತಹ ಸಿನಿಮಾಗಳು. ಅಮಿತಾಭ್​ ಬಚ್ಚನ್​ ಅವರೊಂದಿಗೆ ನಟಿಸಿದ ರಾಮ್​ ಬಲರಾಮ್​, ಶೋಲೆ ಮುಂತಾದವು.

ಈ ಸಂದರ್ಭದಲ್ಲೇ ಅವರು ಸಹ ನಟಿ ಹೇಮ ಮಾಲಿನಿ ಅವರೊಂದಿಗಿನ ಸ್ನೇಹ ಮತ್ತು ಮದುವೆ. ಈಗಾಗಲೇ ಮದುವೆಯಾಗಿ ಮಕ್ಕಳಿದ್ದ ಅವರಿಗೆ ಇದು ಎರಡನೇ ಮದುವೆಯಾಗಿತ್ತು.

ಎರಡು ಮದುವೆ ಸೇರಿ ಅವರಿಗೆ 6 ಮಕ್ಕಳು. ಪ್ರಕಾಶ ಕೌರ್​ ಅವರಿಂದ ಸನ್ನಿ ಡಿಯೋಲ್​, ಬಾಬಿ ಡಿಯೋಲ್​, ವಿಜೀತಾ ಮತ್ತು ಅಜೀತಾ ಡಿಯೋಲ್​ ಮತ್ತು ಹೇಮ ಮಾಲಿನಿ ಅವರಿಂದ ಇಶಾ ಡಿಯೋಲ್​ ಮತ್ತು ಅಹನಾ ಡಿಯೋಲ್​.

ಮುಂಬೈನ ಹೊರವಲಯದಲ್ಲಿನ ತಮ್ಮ ನಿವಾಸದಲ್ಲಿ ಈಗ ಕಾಲ ಕಲೆಯುತ್ತಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆ ಮತ್ತು ವಿಡಿಯೋ, ಫೊಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ಜನ್ಮ ದಿನದ ಅಂಗವಾಗಿ ಮರೆಯಲಾರದಂತಹ ಕೆಲ ಫೋಟೋಗಳು ಇಲ್ಲಿವೆ. (ಏಜೆನ್ಸಿಸ್​)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...