ರೈತರ ಅಭಿವೃದ್ಧಿಗೆ ಶ್ರಮಿಸುವೆ

ಕೆರೂರ: ತಾಲೂಕಿನ ಎಲ್ಲ ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ನೀಡಿ ಅವರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಎಂಆರ್​ಎನ್ ಉದ್ಯಮ ಸಮೂಹದ ಅಧ್ಯಕ್ಷ ಹಾಗೂ ಶಾಸಕ ಮುರುಗೇಶ ನಿರಾಣಿ ಹೇಳಿದರು.

ಕಲ್ಲಾಪುರ ಎಸ್.ಕೆ. ಗ್ರಾಮದ ಸಮೀಪ ನಿರ್ವಣಗೊಂಡ ಎಂಆರ್​ಎನ್ ಕೇನ್ ಪವರ್ ಇಂಡಿಯಾದ ನೂತನ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಖಾನೆಯಲ್ಲಿ ನಿತ್ಯ 40 ಸಾವಿರ ಟನ್ ಕಬ್ಬು ನುರಿಸಿ, 45 ಕ್ವಿಂಟಾಲ್ ಸಕ್ಕರೆ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ರೈತರಿಗೆ 15 ದಿನಕ್ಕೊಮ್ಮೆ ಕಬ್ಬಿನ ಬಿಲ್, ಬೀಜ, ಗೊಬ್ಬರ ಸೇರಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತದೆ. ಮುಂಬರುವ ದಿನಗ ಳಲ್ಲಿ ನಿರಾ ಣಿ ಉದ್ಯಮ ಸಮೂಹ ಮೂಲಕ ನಿತ್ಯ 5 ಲಕ್ಷ ಲೀಟರ್ ಎಥಿನಾಲ್, 200 ಮೆಗಾ ವಾಟ್ ವಿದ್ಯುತ್ ಉತ್ಪಾದಿಸ ಲಾಗುತ್ತದೆ ಎಂದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ನಿರಾಣಿ ಉದ್ಯಮ ಸಮೂಹದ ಮೂಲಕ ಮುಧೋಳ, ಜಮಖಂಡಿ ಹಾಗೂ ಬಾದಾಮಿ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಮೂಲಕ ಈ ಭಾಗದ ಅಭಿವೃದ್ಧಿ ಕೊಡುಗೆ ನೀಡಿದೆ ಎಂದರು.

ಕಾರ್ಖಾನೆ ಕಟ್ಟಲು ಭೂಮಿ ನೀಡಿದ ರೈತರಿಗೆ ಮತ್ತು ಆರ್ಥಿಕ ನೆರವು ನೀಡಿದ ಗಣ್ಯರು ಹಾಗೂ ಕಾರ್ಖಾನೆ ಸಿಬ್ಬಂದಿಗೆ ನಿರಾಣಿ ಉದ್ಯಮ ಸಮೂಹದ ಮೂಲಕ ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಹೊಸಮನಿ, ಶಶಿಕಲಾ ಯಡಹಳ್ಳಿ, ಸಂಗಮೇಶ ನಿರಾಣಿ, ಶ್ರೀಶೈಲ ನಿರಾಣಿ, ಲಕ್ಷ್ಮಣ ನಿರಾಣಿ, ವಿಜಯ ನಿರಾಣಿ, ರಾಮನಗೌಡ ನಾಯ್ಕ,

ಮಹಾಂತೇಶ ಮೆಣಸಗಿ, ಪಿ.ಆರ್. ಗೌಡರ, ಶಿವನಗೌಡ ಪಾಟೀಲ, ಯಲಗೂರಪ್ಪ ಗೌಡರ, ಹನುಮಂತ ಯಕ್ಕಪ್ಪನವರ, ಪ್ರಶಾಂತ ಹುನಸಿಕಟ್ಟಿ, ತಾಪಂ ಸದಸ್ಯರು, ಮಲ್ಲು ಕಂಟೆಪ್ಪನವರ, ಶಂಕರಗೌಡ ಗೌಡರ ಸೇರಿದಂತೆ ಇನ್ನಿತರರಿದ್ದರು.