More

    ಜಿಮ್​ನಲ್ಲಿ ಮಾತಾಡ್ತ ಮಾತಾಡ್ತ ಕುಸಿದು ಬಿದ್ದು ಸಾವಿಗೀಡಾದ ಬಾಡಿಬಿಲ್ಡರ್!

    ಚಂಡೀಗಢ: ಇತ್ತೀಚೆಗೆ ದೇಶದಲ್ಲಿ ಕುಸಿದು ಬಿದ್ದು, ಹೃದಯಾಘಾತಕ್ಕೆ ಒಳಗಾಗಿ ಹಠಾತ್ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಆ ಪಟ್ಟಿಗೆ ಇನ್ನೊಂದು ಸಾವೂ ಸೇರಿದೆ. ಬಾಡಿಬಿಲ್ಡರ್​ವೊಬ್ಬರು ಜಿಮ್​ನಲ್ಲಿ ಸ್ನೇಹಿತರ ಜತೆ ಮಾತನಾಡುತ್ತಿರುವಾಗಲೇ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ.

    ಚಂಡೀಗಢದಲ್ಲಿ ಈ ಪ್ರಕರಣ ಸಂಭವಿಸಿದ್ದು, ರಾಮ್​ ರಾಣಾ (33) ಸಾವಿಗೀಡಾದ ಬಾಡಿಬಿಲ್ಡರ್​. ಜಿಮ್​ನಲ್ಲಿ ವರ್ಕೌಟ್ ಮಾಡಿದ ಬಳಿಕ ಸ್ನೇಹಿತರ ಜತೆ ಮಾತನಾಡುತ್ತ ಹಿಂದಕ್ಕೆ ಬಾಗಿದ್ದು, ಹಾಗೇ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರೂ ವೈದ್ಯರು ಆತ ಅದಾಗಲೇ ಮೃತಪಟ್ಟಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

    ಸಾವಿಗೀಡಾದ 33 ವರ್ಷದ ಬಾಡಿಬಿಲ್ಡರ್​ಗೆ ಪತ್ನಿ ಹಾಗೂ 11 ವರ್ಷ ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಹೀಗೆ ಹಠಾತ್ ಸಾವಿಗೀಡಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಮೊನ್ನೆಮೊನ್ನೆಯಷ್ಟೇ 18 ವರ್ಷದ ಮಾರ್ಷಲ್ ಆರ್ಟ್​ ಸ್ಟಾರ್​​ ಎನಿಸಿಕೊಂಡಿರುವ ಯುವತಿಯೊಬ್ಬಳು ಕೂಡ ಹಠಾತ್ ಸಾವಿಗೀಡಾಗಿದ್ದಳು. –ಏಜೆನ್ಸೀಸ್

    ‘ಅಭಿಮಾನಿ ದೇವರುಗಳೇ.. ನಮಸ್ಕಾರ ದೇವರು’: ಡಾ.ರಾಜ್​ ಆದರ್ಶದ ಡಾ.ಬ್ರೋ!

    ನಾಯಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದು ಪ್ರಾಣ ಕಳ್ಕೊಂಡ ಸ್ವಿಗ್ಗಿ ಡೆಲಿವರಿ ಬಾಯ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts