ನೇಣುಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ; ಕಾರಣವಾದರೂ ಏನು? | Hanging

Hanging : ಒಂದೇ ಕುಟುಂಬದ ನಾಲ್ಕು ಜನರ ಶವ ಮನೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಹಿಡುಕ್ಕಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.

ಮೃತರಲ್ಲಿ ಕುಟುಂಬದ ಮುಖ್ಯಸ್ಥ ಸಂಜೀವ್ ಮೋಹನನ್(34), ಅವರ ಪತ್ನಿ ರೇಷ್ಮಾ(30) ಮತ್ತು ಆರು ಮತ್ತು ನಾಲ್ಕು ವರ್ಷದ ಅವರ ಇಬ್ಬರು ಚಿಕ್ಕ ಮಕ್ಕಳ ಶವ ಪತ್ತಯಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಇದನ್ನೂ ಓದಿ:ತಹವ್ವೂರ್ ರಾಣಾ ಭಾರತದ ಇತರ ನಗರಗಳ ಮೇಲೂ ಕಣ್ಣಿಟ್ಟಿದ್ದ; ‘ಭಯೋತ್ಪಾದನಾ ನಿಗ್ರಹ ಸಂಸ್ಥೆ’| tahawwur Rana

ಶುಕ್ರವಾರ ಸಂಜೆ 4.30ರ ಸುಮಾರಿಗೆ ಲಿವಿಂಗ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಸ್ವಲ್ಪ ಸಮಯದಿಂದ ಕುಟುಂಬ ಸದಸ್ಯರು ಕಾಣಿಸಿಕೊಂಡಿರಲಿಲ್ಲ, ಮಾತು ಕೂಡ ಕೇಳಿರಲಿಲ್ಲ. ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ನಾಲ್ವರ ಮೃತದೇಹಗಳು ಅವರ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪ್ರಾಥಮಿಕ ಸಂಶೋಧನೆಗಳು ಶಂಕಿತ ಆತ್ಮಹತ್ಯೆ ಪ್ರಕರಣವನ್ನು ಸೂಚಿಸುತ್ತವೆ, ಆದರೂ ಸಾವಿನ ಸುತ್ತಲಿನ ನಿಖರವಾದ ಸಂದರ್ಭಗಳನ್ನು ನಿರ್ಧರಿಸಲು ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ತಹವ್ವೂರ್ ರಾಣಾ ಭಾರತದ ಇತರ ನಗರಗಳ ಮೇಲೂ ಕಣ್ಣಿಟ್ಟಿದ್ದ; ‘ಭಯೋತ್ಪಾದನಾ ನಿಗ್ರಹ ಸಂಸ್ಥೆ’| tahawwur Rana

ಆದರೆ, ಒಂದು ಮೂಲದ ಪ್ರಕಾರ, ಈ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟವೇ ಕಾರಣ ಎಂದು ಬಹಿರಂಗಪಡಿಸಿದ ಆತ್ಮಹತ್ಯೆ ಪತ್ರವೂ ಪೊಲೀಸರಿಗೆ ಸಿಕ್ಕಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ಅಬ್ಬಾಬ್ಬ ಲಾಟ್ರಿ.. ಇದಪ್ಪಾ ಅದೃಷ್ಟ ಅಂದ್ರೆ .. ಅಂತ್ಯ ಕಾಲದ ವೃದ್ಧನಿಗೆ ಬಂದು ಕೋಟಿ ಕೋಟಿ ರೂ. ಜಾಕ್​ಪಾಟ್​! | Lottery

ಅಮೆರಿಕ-ಚೀನಾ ವ್ಯಾಪಾರ ಸಂಘರ್ಷ ತೀವ್ರ; ಚಿನ್ನದ ಬೆಲೆ ದಿಢೀರ್​ ಏರಿಕೆ: ಹೊಸ ದಾಖಲೆ ಬರೆದ Gold ರೇಟ್​!

Share This Article

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…