More

    ‘ಇವರಿಬ್ಬರು ನನ್ನ ನೆಚ್ಚಿನ ನಟರು’; ಬಾಬಿ ಡಿಯೋಲ್ ಹೆಸರಿಸಿದ ಆ ಸ್ಟಾರ್​ ಕಲಾವಿದರು ಯಾರು?

    ಮುಂಬೈ: ಬಾಲಿವುಡ್​ ಅಂಗಳದಲ್ಲಿ ಸದ್ಯ ‘ಅನಿಮಲ್’ ಭಾರೀ ಘರ್ಜಿಸುತ್ತಿದ್ದು, ಶೀಘ್ರವೇ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್​ ಪಡೆಯಲು ಸಿದ್ಧವಾಗುತ್ತಿದೆ. ಈ ಮಧ್ಯೆ ಚಿತ್ರದ ಬಗ್ಗೆ ಮಾತನಾಡಿದ ನಟ ಬಾಬಿ ಡಿಯೋಲ್​ ಇಬ್ಬರು ಸ್ಟಾರ್​ ನಟರ ಹೆಸರನ್ನು ಉಲ್ಲೇಖಿಸಿ, ಇವರೇ ನನ್ನ ನೆಚ್ಚಿನ ಕಲಾವಿದರು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಇದು ಬರಿ ಬೆಳಕಲ್ಲ, ದರ್ಶನ’: ಕಾಂತಾರ ಪ್ರೀಕ್ವೆಲ್‌ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ರಿಷಬ್‌ ಶೆಟ್ಟಿ

    ಭಾರತೀಯ ಚಿತ್ರರಂಗದಲ್ಲಿ ಸದ್ಯ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಅನಿಮಲ್’​ ಮುಂಚೂಣಿಯಲ್ಲಿದೆ.

    ಈ ಚಿತ್ರವು ಇದೇ ಡಿಸೆಂಬರ್ 1, 2023 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ತಮ್ಮ ಸಿನಿಮಾದ ಕೆಲಸಗಳಲ್ಲಿ ನಿರತರಾಗಿರುವ ಬಾಬಿ ಡಿಯೋಲ್ ಇತ್ತೀಚೆಗೆ ನಡೆದ ಒಂದು ಸಂದರ್ಶನವೊಂದರಲ್ಲಿ ಇಬ್ಬರು ಬಾಲಿವುಡ್​ ಸ್ಟಾರ್​ ನಟರು ನನ್ನ ಫೇವರೆಟ್​ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಫೇಕ್​ ವೋಟಿಂಗ್​ ಎಂಬ ಚಿತ್ರಲ್ ಹೇಳಿಕೆಗೆ ಈಶಾನಿ ತಿರುಗೇಟು!

    “ರಣಬೀರ್ ಕಪೂರ್ ಮತ್ತು ಆಲಿಯಾ ಭಟ್​ ನನ್ನ ಮೆಚ್ಚಿನ ನಟರು. ನಾನು ರಣಬೀರ್​ ಅವರ ದೊಡ್ಡ ಅಭಿಮಾನಿ ಮತ್ತು ಪ್ರಸ್ತುತ ಅವರು ದೇಶದ ಅತ್ಯುತ್ತಮ ನಟ” ಎಂದು ಬಾಬಿ ಹೇಳಿದ್ದಾರೆ.

    ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ಬಾಬಿ ಡಿಯೋಲ್​ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ಟ್ರೇಲರ್ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಸದ್ಯ ಸಿನಿಮಾವನ್ನು ಥಿಯೇಟರ್​ನಲ್ಲಿ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಸಿನಿಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಬಿಡುಗಡೆಯ ನಂತರ ತಿಳಿಯಲಿದೆ,(ಏಜೆನ್ಸೀಸ್).

    ಪುತ್ರಿ ಶ್ವೇತಾಗೆ ಬಂಗಲೆ ಗಿಫ್ಟ್​ ಕೊಟ್ಟ್ ಬಿಗ್​ ಬಿ!; ‘ಪ್ರತೀಕ್ಷಾ’ ನಿವಾಸದ ಬೆಲೆ ಎಷ್ಟು ಕೋಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts