ಹೊನ್ನಾವರ: ಮೀನುಗಾರಿಕೆಗೆ ಹೋಗಿ ಬರುವಾಗ ಅರೆಬಿಯನ್ ಸೀ ಎಂಬ ಹೆಸರಿನ ಬೋಟ್ ಅಳಿವೆಯಲ್ಲಿ ಸಿಲುಕಿ ದಡ ಸೇರಲಾಗದೇ ಸಮುದ್ರ ತೀರದ ಬಳಿ ಬಂದು ನಿಂತ ಘಟನೆ ಕಾಸರಕೋಡದಲ್ಲಿ ನಡೆದಿದೆ.
ಸ್ಥಳೀಯ ಮೀನುಗಾರರು, ಪೊಲೀಸ್ ಸಿಬ್ಬಂದಿ ಕರಾವಳಿ ಕಾವಲು ಪಡೆಯವರು ಸೇರಿ ಬೋಟ್ನಲ್ಲಿದ್ದ 30 ಮೀನುಗಾರರನ್ನು ರಕ್ಷಿಸಿದ್ದಾರೆ. ಅನ್ಸರ್ ಸಾಬ್ ಮಾಲೀಕತ್ವದ ಬೋಟ್ ಮೀನುಗಾರಿಗೆ ತೆರಳಿ ಮೀನು ತುಂಬಿ ಮರಳಿ ಟೊಂಕಾ ಬಂದರಿಗೆ ಬರುವಾಗ ಘಟನೆ ನಡೆದಿದೆ. ಸ್ಥಳೀಯರ ಸಹಾಯದೊಂದಿಗೆ ಬೋಟ್ ಅನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಿ ಬೋಟ್ನಲ್ಲಿರುವ ಮೀನುಗಳನ್ನು ಇಳಿಸಲಾಗಿದೆ. ಅಳಿವೆಯಲ್ಲಿ ಹೂಳು ತುಂಬಿದ ಪರಿಣಾಮ ಈ ಹಿಂದೆ 6-7 ಬೋಟ್ ಸಿಲುಕಿ ಅವಘಡಗಳು ಸಂಭವಿಸಿದ್ದವು.