ಭಟ್ಕಳ /Boat sinking: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟೊಂದು ಕುಮಟಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ಮುಗಿಸಿ ಮರಳಿ ತೆರಳುವಾಗ ಭಟ್ಕಳದ ಸಮುದ್ರದಲ್ಲಿ ಮುಳುಗಿದ್ದು, ಬೋಟ್‌ನಲ್ಲಿದ್ದ ಚಾಲಕ ಸೇರಿದಂತೆ ಒಟ್ಟು 5ಜನ ಮೀನುಗಾರರನ್ನು ಸ್ಥಳೀಯ ನಾಡದೋಣಿಯ ಮೀನುಗಾರರು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆದು ತಂದಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಅಶ್ವೀನಿ ಸುರೇಶ ಅವರಿಗೆ ಸೇರಿದ ವಿನಶ್ ಬೋಟ್ ಭಟ್ಕಳದ ಬಳಿಯ ಸಮುದ್ರದಲ್ಲಿ ಮುಳುಗಡೆಯಾಗಿದೆ. ಉಮೇಶ ಮೊಗೇರ ಎನ್ನುವ ಚಾಲಕ ಫೆ 2ರಂದು ಮಲ್ಪೆಯಿಂದ ಮೀನುಗಾರಿಕೆಗೆಂದು 5 ಜನ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದರು.
ಕುಮಟಾ ಸಮೀಪ Boat sinking
ಕುಮಟಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಿ ಮರಳಿ ತೆರಳುವಾಗ ಬುಧವಾರ ಭಟ್ಕಳದ ಬಳಿಯ ಸಮುದ್ರದಲ್ಲಿ ಬೋಟಿನ ಅಡಿಭಾಗಕ್ಕೆ ಎನೊ ತಗುಲಿ ಬೋಟಿನೊಳಗೆ ನೀರು ತುಂಬಿ ಮುಳುಗಡೆಯಾಗುವ ಹಂತಕ್ಕೆ ಬಂದಿದೆ.
ಈ ಸಂದರ್ಬದಲ್ಲಿ ಭಟ್ಕಳದ ಸ್ವರ್ಣಗೌರಿ ಎನ್ನುವ ನಾಡದೋಣಿಯಲ್ಲಿದ್ದ ರಾಮಾ ಮೊಗೇರ, ಭರತ ಮೊಗೇರ ಮುಳುಗುತ್ತಿರುವ ಬೋಟಿನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಅದಾದ ಬಳಿಕ ಬೋಟ್ ನೀರಿನಲ್ಲಿ ಸಂಪೂರ್ಣ ಮುಳುಗಿದ್ದು, ಅನೇಕ ಸಾಮಾಗ್ರಗಳ ಸಹಿತ ಸುಮಾರು 50ರಿಂದ 60ಲಕ್ಷ ರೂ ನಷ್ಟವಾಗಿದೆ ಎಂದು ಚಾಲಕ ಉಮೇಶ ಮೊಗೇರ ಭಟ್ಕಳ ಕರಾವಳಿ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: https://www.vijayavani.net/sapayi-karmachari-meeting