ಬೆಳಗಾವಿ ಯುವತಿ ಸಾವು ಪ್ರಕರಣ: ಗೋವಾ ಶಾಸಕನ ಪುತ್ರ ಅರೆಸ್ಟ್​

ಬೆಳಗಾವಿ: ಕಾರು ಹರಿದು ಯುವತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋವಾ ಶಾಸಕ ಗ್ಲೆನ್​ ಶಿಕ್ಲಾನ್​ ಪುತ್ರ ಕೈಲ್​ ಟಿಕ್ಲೋ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅ.8ರಂದು ಸಂಜೆ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 4ರ ಹಣ್ಣಿನ ಮಾರ್ಕೆಟ್​ ಬಳಿ ಅಪಘಾತ ಸಂಭವಿಸಿತ್ತು. ಪಾಲಕರೊಂದಿಗೆ ರಸ್ತೆ ದಾಟುತ್ತಿದ್ದ ಯುವತಿ ತಾಹಿನಿಯತ್​ ಬಿಸ್ಟಿಗೆ ಕೈಲ್​ ಟಿಕ್ಲೋ ಅವರ ಬಿಎಂಡಬ್ಲ್ಯೂ ಕಾರು ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತವಾದ ಕೂಡಲೇ ಕೈಲ್​ ಟಿಕ್ಲೋ ಪರಾರಿಯಾಗಿದ್ದರು. ಸಿಟ್ಟಿಗೆದ್ದ ಸ್ಥಳೀಯರು ಕಾರಿಗೆ ಬೆಂಕಿ ಹಚ್ಚಿದ್ದರು. ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಶಾಸಕರ ಪುತ್ರ ಕೈಲ್​ ಟಿಕ್ಲೋ ಮಾಳಮಾರುತಿ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾರೆ.