ಪ್ರಯಾಣಿಕರೆ ಗಮನಿಸಿ: ಮೆಜೆಸ್ಟಿಕ್​ನ ಬಿಎಂಟಿಸಿ ಬಸ್​ ನಿಲ್ದಾಣದಲ್ಲಿಲ್ಲ ಸರಿಯಾದ ಸುರಕ್ಷತೆ

ಬೆಂಗಳೂರಿ: ನಗರ ಸಂಚಾರದ ಹೃದಯವಾಗಿರುವ ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ಸುರಕ್ಷತೆ ಇಲ್ಲ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಎಂಟು ಲಕ್ಷ ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಿಗಮ ಅಳವಡಿಸಿರುವುದು ಕೇವಲ 16 ಸಿಸಿಟಿವಿಗಳನ್ನು ಮಾತ್ರ. ಇದರಲ್ಲಿ ಕೆಲಸ ಮಾಡುತ್ತಿರುವುದು ಬೆರಳೆಣಿಕೆಯಷ್ಟು ಮಾತ್ರ. ಕೆಲಸ ನಿರ್ವಹಣೆ ಮಾಡುತ್ತಿರುವ ಸಿಟಿವಿಗಳ ಎಕ್ಸ್ ಕ್ಲೂಸಿವ್ ವಿಡಿಯೋ ಕೂಡ ದಿಗ್ವಜಯ ನ್ಯೂಸ್​ಗೆ ಲಭಿಸಿದ್ದು, ಅವುಗಳ ಬಗ್ಗೆಯೂ ಪೊಲೀಸ್ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.

ಸದ್ಯ ಇರುವ ಸಿಸಿಟಿವಿ ಕ್ಯಾಮರಾಗಳು ಉತ್ತಮ ಗುಣಮಟ್ಟದ್ದಾಗಿಲ್ಲ. ಈ ಕುರಿತಂತೆ ಗಮನ ಹರಿಸಬೇಕು ಹಾಗೆಯೇ ಹೆಚ್ಚಿನ ಕ್ಯಾಮರಾ ಅಳವಡಿಸುವ ಕುರಿತಂತೆ ಕ್ರಮ ಕೈಗೊಳ್ಳಿ ಅನ್ನು ಪತ್ರವನ್ನೂ ಬರೆದಿದೆ. ಪತ್ರ ಬರೆದು ಐದು ತಿಂಗಳು ಕಳೆದಿದ್ದರೂ ಬಿಎಂಟಿಸಿ ಯಾವುದೇ ಕ್ರಮವನ್ನ ಕೈಗೊಂಡಿಲ್ಲ. ಇದು ಪ್ರಯಾಣಿಕರ ಅಸಮಧಾನಕ್ಕೆ ಕಾರಣವಾಗಿದೆ. ನಿಗಮವನ್ನು ಕೇಳಿದರೆ ಆರ್ಥಿಕ ಸಂಕಷ್ಟದ ಸಬೂಬು ನೀಡುತ್ತಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *