More

    VIDEO| ಶಾಸಕ ರೇಣುಕಾಚಾರ್ಯ ಬಸ್​ ಓಡಿಸಿದ ನಂತರ ಈಗ ಐಎಎಸ್​ ಅಧಿಕಾರಿ ಶಿಖಾ ಓಡಿಸಿದರು ಬಿಎಂಟಿಸಿ ವೋಲ್ವೋ ಬಸ್​

    ಬೆಂಗಳೂರು: ಶಾಸಕ ರೇಣುಕಾಚಾರ್ಯ ಅವರು ಸಾರಿಗೆ ಬಸ್​ ಓಡಿಸಿ ಸುದ್ದಿಯಾಗಿದ್ದರು. ಈಗ ಐಎಎಸ್​ ಅಧಿಕಾರಿ ಬಸ್​ ಓಡಿಸುವ ಸರದಿ.

    ಹೌದು, ಬಿಎಂಟಿಸಿ ಶಿಖಾ ಅವರು ಬಿಎಂಟಿಸಿಯ ವೋಲ್ವೋ ಬಸ್​ ಓಡಿಸಿ ಗಮನ ಸೆಳೆದಿದ್ದಾರೆ.

    ಐಎಎಸ್​ ಅಧಿಕಾರಿಯಾಗಿ ಹೀಗೆ ಬಸ್​ ಓಡಿಸುವುದು ಸರಿಯಲ್ಲ. ಬಸ್​ ಓಡಿಸಲು ಹೆವಿ ಲೈಸೆನ್ಸ್​ ಬೇಕು. ಆದರೆ ಐಎಎಸ್​ ಅಧಿಕಾರಿ ಬಳಿ ಈ ಲೈಸೆನ್ಸ್​ ಇಲ್ಲವಾದರೂ ಬಸ್​ ಓಡಿಸಿ ಸಾರಿಗೆ ನಿಯಮವನ್ನು ಗಾಳಿಗೆ ತೂರಿದ್ದಾರೆ ಎನ್ನುವ ಆರೋಪವಿದೆ.

    ಕಳೆದ ಕೆಲ ದಿನಗಳ ಹಿಂದೆ ಹೀಗೆ ಬಸ್​ ಓಡಿಸಿದ್ದ ರೇಣುಕಾಚಾರ್ಯ ಅವರಿಗೆ ಬಸ್​ ಕೊಟ್ಟ ಚಾಲಕನಿಗೆ ನೋಟಿಸ್​ ನೀಡಲಾಗಿತ್ತು. ಆದರೆ ಈಗ ಬಿಎಂಟಿಸಿ ಎಂಡಿ ಶಿಖಾ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಸದ್ಯದ ಪ್ರಶ್ನೆ. (ದಿಗ್ವಿಜಯ ನ್ಯೂಸ್​).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts