ಮೇಲಧಿಕಾರಿಯ ಕಿರುಕುಳ: ಬಿಎಂಟಿಸಿ ಬಸ್​ ಚಾಲಕ ಆತ್ಮಹತ್ಯೆ

ಬೆಂಗಳೂರು: ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತ ಬಿಎಂಟಿಸಿ ಬಸ್ ಚಾಲಕ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಾಲಕ ಮತ್ತು ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮರೀಶ್ ಬಿಎಂಟಿಸಿ ಡಿಪೋ-43ರಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನಾರೋಗ್ಯವಿದ್ದ ಕಾರಣ ಆರು ತಿಂಗಳ ಬಳಿಕ ಅಮರೀಶ್​ ಕೆಲಸಕ್ಕೆ ಹಾಜರಾಗಿದ್ದರು. ಡಿಪೋದಲ್ಲಿ ಕೆಲಸ ಮಾಡುವುದು ಬಿಟ್ಟು ರೂಟ್​​ಗೆ ಹೋಗಿ ಎಂದು ಕಿರುಕುಳ ನೀಡಿದ ಕಾರಣ ಬೇಸತ್ತ ಅಮರೀಶ್​ ಈ ಕೃತ್ಯ ಎಸಗಿದ್ದಾರೆ.

ದಾಸನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *