ಬೈಂದೂರು ಅಭಿವೃದ್ಧಿಗೆ ನೀಲಿನಕ್ಷೆ

Latest News

ಸಂಗನಬಸವ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ

ವಿಜಯಪುರ: ಇಲ್ಲಿನ ಹೊರವಲಯ ಕವಲಗಿಯಲ್ಲಿರುವ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಶುಕ್ರವಾರ ಅಂತರ್ ಶಾಲಾ ವಿಜ್ಞಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಎಸ್‌ಆರ್ ಪಿಯು ಕಾಲೇಜಿನ...

ಪುಟ್ನಂಜ ನಾಯಕಿಯ ಹೊಸ ಪ್ರಯತ್ನ: ಕಾಮಾಕ್ಷಿಯಾಗಿ ಬಂದ ಸ್ವಾತಿಮುತ್ತು ಮೀನ

ಬೆಂಗಳೂರು: ಒಂದು ಕಾಲದಲ್ಲಿ ಸಿನಿಪ್ರಿಯರ ಮನ ಗೆದ್ದ ನಟಿ ಮೀನಾ ಕರುನಾಡಿನಲ್ಲಿ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ‘ಪುಟ್ನಂಜ’,...

17-11-2019ರಿಂದ 23-11-2019ರವರೆಗೆ

ಮೇಷ: ನಿಮ್ಮ ನಿರೀಕ್ಷೆಗಳು ತುಂಬಾ ಇವೆ. ಆದರೆ ಬುಧನ ಜತೆಗಿನ ನಿಮ್ಮ ರಾಶ್ಯಾಧಿಪ ಕುಜನ ಸಂಯೋಜನೆಯಿಂದಾಗಿ ಹಲವು ಮಹತ್ವದ ವಿಷಯಗಳು ನಿಮ್ಮ ನಿರೀಕ್ಷೆಯ...

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಕೈಯಲ್ಲಿ ಏನೂ ಹಣವಿಲ್ಲ, ಏನು ಮಾಡುವುದು ಎಂಬ ದೊಡ್ಡ ಚಿಂತೆ ಪವಾಡಸದೃಶವಾಗಿ ದೂರವಾಗಲಿದೆ

ಮೇಷ: ಬರೀ ಗಾಳಿಯೊಡನೆ ಗುದ್ದಾಡಿ ಕೈ ನೋವು ಮಾಡಿಕೊಳ್ಳುವಂತಹ ಯುದ್ಧಕ್ಕಾಗಿನ ತಯಾರಿಯನ್ನು ಬಿಡಿ. ಶುಭಸಂಖ್ಯೆ: 2 ವೃಷಭ: ಬಹಳ ಹಿಂದೆ ಪ್ರಾರಂಭಿಸಿದ ಕೆಲಸವೊಂದು ಸದ್ಯದಲ್ಲೇ...

ರಾಷ್ಟ್ರಪತಿ ಆಳ್ವಿಕೆ ರಾಜಕೀಯ ಅಸ್ತ್ರ: ಯಾರ ಕಾಲದಲ್ಲಿ ಹೆಚ್ಚು ಬಳಕೆ ಎಂಬುದರ ಮಾಹಿತಿ ಇಲ್ಲಿದೆ

ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸಲು ವಿಫಲವಾದ್ದರಿಂದ ಅಲ್ಲಿ ಇತ್ತೀಚೆಗಷ್ಟೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಏಕೆ...

ನರಸಿಂಹ ನಾಯಕ್ ಬೈಂದೂರು
ಉಡುಪಿ ಜಿಲ್ಲೆಯ ಉತ್ತರ ಗಡಿಭಾಗದ ತಾಲೂಕು ಕೇಂದ್ರವಾದ ಬೈಂದೂರು ಪ್ರಗತಿಯ ಇಂದಿನ ನೋಟ ನಗರದ ಪ್ರಗತಿ ಚಿತ್ರಣ ಬದಲಿಸಲಿದೆ. ಹಲವು ವರ್ಷಗಳ ಪ್ರಯತ್ನಗಳಿಗೆ ದೊರೆಯುತ್ತಿರುವ ಯಶಸ್ಸುಗಳು ಅಭಿವೃದ್ಧಿಯ ವೇಗ ಹೆಚ್ಚಿಸಿದೆ. ಮಾದರಿ ತಾಲೂಕು ರಚನೆ ನಿರ್ಮಾಣದಲ್ಲಿ ತೆಗೆದುಕೊಳ್ಳಬೇಕಾದ ಮಹತ್ವದ ನಿರ್ಣಯಗಳು ಊರಿನ ಭವಿಷ್ಯ ನಿರ್ಧರಿಸಲಿದೆ. ಹೀಗಾಗಿ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು, ಅಭಿವೃದ್ಧಿ ಚಿಂತಕರು ಮುಂದಿನ ದಿನದ ಬದಲಾವಣೆಗಳನ್ನು ಮನಗಂಡು ಬೈಂದೂರಿನ ಬೆಳವಣಿಗೆಯ ಚಿತ್ರಣ ರೂಪಿಸಬೇಕಿದೆ.

ಬೈಂದೂರು ಅಭಿವೃದ್ಧಿಯಲ್ಲಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸರ್ಕಾರದ ನಿರಂತರ ಕೊಡುಗೆಯಿದೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವಧಿಯಲ್ಲಿ ತಾಲೂಕು ಕೇಂದ್ರದ ಕಲ್ಪನೆಯಲ್ಲಿ ಅವಶ್ಯವಿರುವ ಕಚೇರಿಗಳನ್ನು ರೂಪಿಸುವ ಮೂಲಕ ಉತ್ತಮ ಅಡಿಪಾಯ ದೊರಕಿತು. ಹಿಂದಿನ ಅವಧಿಯಲ್ಲಿ ಹಲವು ಗೊಂದಲಗಳ ಬಳಿಕ ತಾಲೂಕು ಕೇಂದ್ರ ಅಧಿಕೃತ ಘೋಷಣೆ ಮಾಡುವುದರ ಮೂಲಕ ಪೂರ್ಣತೆ ಕಾಣಲಾಯಿತು. ಬಳಿಕ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ, ತಾಲೂಕು ಕೇಂದ್ರದ ಮೂಲ ಸಮಸ್ಯೆಗಳಾದ ನದಿ ಜೋಡಣೆ, ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಜತೆಗೆ ತಾಲೂಕು ಕೇಂದ್ರದ ಪ್ರಮುಖ ಅವಶ್ಯಕತೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಸಾಕಷ್ಟು ವೇಗ ದೊರಕಿಸಿಕೊಟ್ಟಿದೆ. ಸಂಸದ ಬಿ.ವೈ.ರಾಘವೇಂದ್ರ ಬೈಂದೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತೆಗೆದುಕೊಳ್ಳುತ್ತಿರುವ ವಿಶೇಷ ಆಸಕ್ತಿ ಬಹುದಿನಗಳ ಕನಸುಗಳು ಸಾಕಾರಗೊಳ್ಳಲು ಕ್ಷಣಗಣನೆ ನಡೆಯುತ್ತಿದೆ.

ಮಿನಿ ವಿಧಾನಸೌಧ, ನ್ಯಾಯಾಲಯ, ಆರೋಗ್ಯ ಕೇಂದ್ರ: ಈಗಿನ ಮಾಹಿತಿ ಪ್ರಕಾರ ಮೊದಲ ಹಂತದಲ್ಲಿ ಬೈಂದೂರು ಕ್ಷೇತ್ರಕ್ಕೆ ಸರ್ಕಾರ ರೂ. ೧೦೦ ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಹಣಕಾಸು ವಿಭಾಗದ ಅನುಮೋದನೆ ದೊರೆತರೆ ತಕ್ಷಣದಿಂದ ಬೈಂದೂರಿನಲ್ಲಿ ಮಿನಿ ವಿಧಾನಸೌಧ, ನ್ಯಾಯಾಲಯ, ತಾಲೂಕು ಆರೋಗ್ಯ ಕೇಂದ್ರ, ತಾಪಂ, ಸರ್ಕಾರಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಅಭಿವೃದ್ಧಿ, ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾಮಗಾರಿ ಆರಂಭವಾಗಲಿದೆ. ಮಿನಿ ವಿಧಾನಸೌಧ ಹಾಗೂ ನ್ಯಾಯಾಲಯಕ್ಕೆ ಸ್ಥಳ ಮೀಸಲಿರಿಸಲಾಗಿದೆ. ತಾಪಂ ಕಚೇರಿ ಸದ್ಯ ಇರುವ ಯಾವುದಾದರೂ ಕಟ್ಟಡದಲ್ಲಿ ಆರಂಭವಾಗುವ ಸಾಧ್ಯತೆಗಳಿವೆ. ಈಗಿರುವ ತಾಪಂ ವಸತಿಗೃಹಗಳ ಜಾಗದಲ್ಲಿ ತಾಲೂಕು ಆಸ್ಪತ್ರೆ ನಿರ್ಮಿಸುವ ಕುರಿತು ಚಿಂತನೆ ನಡೆಯುತ್ತಿದೆ. ಆರೋಗ್ಯ ಇಲಾಖೆಗೆ ಮೀಸಲಿರಿಸುವ ೫೩ ಸೆಂಟ್ಸ್ ಸರ್ಕಾರಿ ಜಾಗದಲ್ಲಿ ಸರ್ಕಾರಿ ವಸತಿಗೃಹಗಳ ನಿರ್ಮಾಣ ಮಾಡುವ ಪ್ರಸ್ತಾವನೆಯಿದೆ. ಆದರೆ ಸರ್ಕಾರಿ ಆಸ್ಪತ್ರೆಗೆ ಅವಶ್ಯ ಇರುವ ವೈದ್ಯರಿಗೆ ಸಮೀಪದಲ್ಲೆ ಕ್ವಾರ್ಟಸ್‌ಗಳನ್ನು ನಿರ್ಮಿಸಬೇಕಿದೆ.

ಟ್ರಾಫಿಕ್ ಸಮಸ್ಯೆ: ಬೈಂದೂರು ನಗರ ಪ್ರದೇಶದ ಟ್ರಾಫಿಕ್ ಗೊಂದಲ ಅತ್ಯಂತ ಕಿರಿಕಿರಿಯಾಗಿದೆ. ರಥಬೀದಿಯಲ್ಲಿ ವಾಹನ ದಟ್ಟಣೆಯಿಂದ ನಡೆದಾಡುವುದೂ ಕಷ್ಟ. ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಜನಜಂಗುಳಿ ನಿಯಂತ್ರಿಸಬಹುದು.

ಅಭಿವೃದ್ಧಿಗೆ ವ್ಯವಸ್ಥಿತ ಮಾಸ್ಟರ್ ಪ್ಲಾನ್
: ಸರ್ಕಾರದ ಒತ್ತಡ ಹೆಚ್ಚಿದಂತೆ ವಿವಿಧ ಇಲಾಖೆಯ ಮೇಲಧಿಕಾರಿಗಳು ಬೈಂದೂರಿನಲ್ಲಿ ಕಚೇರಿ ಸ್ಥಾಪನೆಯ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷಿಗೆ ಅನುಕೂಲವಾಗುವ ದೊಡ್ಡಮಟ್ಟದ ಅಧ್ಯಯನ ಕೇಂದ್ರ ಬೇಕಿದೆ. ಪ್ರವಾಸಿ ಸ್ಥಳಗಳ ಪ್ರಗತಿ, ಕೊಲ್ಲೂರನ್ನು ಕೇಂದ್ರೀಕರಿಸಿಕೊಂಡು ಧಾರ್ಮಿಕ ಸ್ಥಳಗಳ ಅಭಿವೃದ್ಧಿ, ಮಲ್ಟಿ ಟೂರಿಸಂ ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ನಗರ ವಿನ್ಯಾಸ ರೂಪಿಸುವ ಮೂಲಕ ಬೈಂದೂರಿನ ಭವಿಷ್ಯ ರೂಪಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ.

ಹೊಸ ತಾಲೂಕಿನ ವಿಶೇಷ:
ಹೊಸ ತಾಲೂಕಿನಲ್ಲಿ ವಿಶೇಷ ತಹಸೀಲ್ದಾರರ ಕಚೇರಿ, ಜಿಪಂ ಇಂಜಿನಿಯರಿಂಗ್ ಉಪವಿಭಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ಉಪಖಜಾನೆ, ವಲಯ ಅರಣ್ಯಾಧಿಕಾರಿ ಕಚೇರಿ, ಕೃಷಿ, ತೋಟಗಾರಿಕಾ ಇಲಾಖೆ ಕಚೇರಿ, ಸರ್ಕಾರಿ ಸಮುದಾಯ ಆಸ್ಪತ್ರೆ, ಜಾನುವಾರು ಆಸ್ಪತ್ರೆ, ಮೆಸ್ಕಾಂ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ ಸೇರಿದಂತೆ ತಾಲೂಕು ಮಟ್ಟದ ಕಾರ್ಯಲಯಗಳು ಕಾರ್ಯ ನಿರ್ವಹಿಸುತ್ತಿವೆ. ಉಳಿದಂತೆ ತಾಲೂಕು ಕಚೇರಿ, ತಾಪಂ ಕಚೇರಿ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ, ಸಹಾಯಕ ನಿರ್ದೇಶಕರು ಮೀನುಗಾರಿಕಾ ಇಲಾಖೆ, ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಲೋಕೋಪಯೋಗಿ ಇಲಾಖೆ, ಕಾರ್ಮಿಕ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನ್ಯಾಯಾಲಯ ಸಂಕೀರ್ಣ, ರೇಷ್ಮೆ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕ ದಳ, ಸಮಾಜ ಕಲ್ಯಾಣ ಇಲಾಖೆ, ಸಹಕಾರ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಗ್ರಂಥಾಲಯ, ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಇಲಾಖೆ, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಹೊಸದಾಗಿ ಸ್ಥಾಪಿಸಬೇಕಾಗಿದೆ.

ಶಾಸಕರಾಗಿ ಆಯ್ಕೆಯಾದ ಬಳಿಕ ಜನರಿಗೆ ಬಹಳಷ್ಟು ನಿರೀಕ್ಷೆಗಳಿದ್ದವು. ಆದರೆ ಸರ್ಕಾರ ನಮ್ಮದಾಗಿಲ್ಲದ ಕಾರಣ ಅಭಿವೃದ್ಧಿಗೆ ಅನುದಾನ ತರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕ್ಷೇತ್ರದ ಅಭಿವೃದ್ಧಿ ಕನಸುಗಳು ಸಾಕಾರಗೊಳ್ಳುತ್ತಿವೆ. ಕ್ಷೇತ್ರದ ಮಾಜಿ ಸಂಸದರೇ ಮುಖ್ಯಮಂತ್ರಿಯಾಗಿದ್ದಾರೆ. ಈಗಿನ ಸಂಸದರು ಅವರ ಪುತ್ರರಾಗಿದ್ದು, ಹಲವು ಮಹತ್ವದ ಯೋಜನೆಗಳು ಸಾಕಾರಗೊಳ್ಳುವ ಜತೆಗೆ ಮಾದರಿ ಕ್ಷೇತ್ರವಾಗಿ ಬೈಂದೂರನ್ನು ರೂಪಿಸುತ್ತೇವೆ.
ಬಿ.ಎಂ.ಸುಕುಮಾರ ಶೆಟ್ಟಿ ಶಾಸಕರು ಬೈಂದೂರು ಕ್ಷೇತ್ರ

ತಾಲೂಕು ಹೋರಾಟ ಸಮಿತಿಯ ನಿರಂತರ ಹೋರಾಟದಿಂದ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಈ ಹಂತ ತಲುಪಿದೆ. ಕಚೇರಿ ಸ್ಥಾಪನೆ ಕುರಿತಂತೆ ಶಾಸಕರು ಹಾಗೂ ಸಂಸದರ ಜತೆ ಚರ್ಚಿಸಿ ಮುಂದಿನ ಹಲವು ವರ್ಷದ ಕಲ್ಪನೆಯಲ್ಲಿ ತಾಲೂಕು ಕೇಂದ್ರ ರೂಪಿಸಬೇಕಾಗಿದೆ. ಕಚೇರಿ ಅನುಷ್ಠಾನದಲ್ಲಿ ಎಲ್ಲ ಸೇವೆಗಳು ಜನರಿಗೆ ಒಂದೇ ಕಡೆ ದೊರೆಯುವಂತಿರಬೇಕು.
ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷರು ಬೈಂದೂರು ತಾಲೂಕು ಹೋರಾಟ ಸಮಿತಿ 

- Advertisement -

Stay connected

278,504FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....