ಇಂಡಿ: ಒಬ್ಬ ವ್ಯಕ್ತಿ ಅತಿಯಾದ ರಕ್ತವನ್ನು ದೇಹದಿಂದ ಕಳೆದುಕೊಂಡಾಗ ಅವರನ್ನು ಬದುಕಿಸಲು ರಕ್ತದಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯಲ್ಲಿ ವಿಜಯಪುರ ಆರೋಗ್ಯ ಇಲಾಖೆ, ತಡವಲಗಾ ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ, ಮರುಳಸಿದ್ಧೇಶ್ವರ ಜಾತ್ರಾ ಕಮಿಟಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಸ್ಪಂದನಾ ಆಸ್ಪತ್ರೆ ಇಂಡಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತದ ಕೊರತೆಯಿಂದ ಬಳಲುವವರಿಗೆ ಸಹಾಯ ಮಾಡಲು ನೀವು ಮಾಡಬಹುದಾದ ಉದಾತ್ತ ಕಾರ್ಯ ರಕ್ತದಾನವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಮ್ಮಣ್ಣ ಪೂಜಾರಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ ಬ್ಯಾಳಿ, ಮಳಸಿದ್ದ ನಡಗೇರಿ, ರವಿ ಹೊಸಮನಿ, ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಕೆ.ಎಸ್. ಜಾಧವ, ಇಂಡಿ ಆರೋಗ್ಯ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಂ.ಪೂಜಾರಿ, ರಾಮಗೊಂಡ ಭಜಂತ್ರಿ, ಡಾ.ಪ್ರಿಂಯಾಕ, ಎಸ್.ಸಿ.ಮುರನಾಳ, ವಿ.ಕೆ. ಜಂಬಗಿ, ಗೋಪಾಲ್ ಪಾಟೀಲ, ಭಾರತಿ ಕುಂಬಾರ, ರೇಖಾ ಸಿಂಪೆ, ಸಪ್ನಾ ಅಂಗಡಿ, ರಾಜು ಹಿರೇಕುರುಬರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.