ಬೆಂಗಳೂರು: ‘ಎವೆರಿ ಡಾಗ್ ಹ್ಯಾಸ್ ಇಟ್ಸ್ ಡೇ’ ಎಂಬ ಮಾತೊಂದಿದೆ. ಎಲ್ಲರಿಗೂ ಒಂದು ಕಾಲ ಬಂದೇ ಬರುತ್ತದೆ ಎಂಬುದನ್ನು ಸೂಚಿಸುವಂಥ ಮಾತಿದು. ಇಲ್ಲೊಂದು ಕಡೆ ನಾಯಿಯೊಂದಕ್ಕೆ ಆ ದಿನ ಬಂದಿದೆ. ಅಂದರೆ ನಾಯಿಗಾಗಿ ರಕ್ತ ಬೇಕೆಂದು ಕೋರಿ ಸಾರ್ವಜನಿಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ.
ಮನುಷ್ಯರು ಅನಾರೋಗ್ಯಕ್ಕೀಡಾದಾಗ ಅಥವಾ ಗಾಯಗೊಂಡಾಗ ಅವರಿಗಾಗಿ ಸೂಕ್ತ ರಕ್ತದ ಅಗತ್ಯವಿದೆ ಎಂದು ಬೇಡಿಕೆಯನ್ನು ಇಡುವುದು ಹೊಸದೇನಲ್ಲ. ಅಂಥ ಒಂದಲ್ಲ ಒಂದು ಬೇಡಿಕೆ ಆಗಾಗ ಕಣ್ಣಿಗೆ ಕಾಣಿಸುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಕಡೆ ನಾಯಿಯ ಶಸ್ತ್ರಚಿಕಿತ್ಸೆಗಾಗಿ ರಕ್ತ ಬೇಕಿದೆ ಎಂಬ ಬೇಡಿಕೆಯೊಂದು ಹರಿದಾಡುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಇಂದು ಒಂದು ಸೆಕೆಂಡ್ನಲ್ಲಿ ಹಾಕಿಸಿದ ಲಸಿಕೆ ಎಷ್ಟು ಗೊತ್ತೇ!?
ಮೂರು ತಿಂಗಳ ನಾಯಿ ಮೇಲೆ ಕಾರು ಹರಿದುಹೋಗಿ ಅದರ ಕಾಲಿನ ಮೂಳೆ ಮುರಿದಿದೆ. ಮೂಳೆಯ ಸರ್ಜರಿ ಮಾಡಲು ಸೂಕ್ತವಾದ ರಕ್ತದ ಅಗತ್ಯವಿದೆ. ನಿಮ್ಮಲ್ಲಿ ಇದಕ್ಕೆ ಸರಿಹೊಂದುವಂಥ ನಾಯಿ ಇದ್ದರೆ ಅದರ ರಕ್ತದಾನ ಮಾಡಿ ಎಂಬುದಾಗಿ ಮೈಸೂರಿನ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಾಕುನಾಯಿಯ ಪರವಾಗಿ ಕೇಳಿಕೊಂಡಿದ್ದಾರೆ.
ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
ಕೆಎಸ್ಆರ್ಟಿಸಿ ಬಸ್ನಲ್ಲಿ ಹಾವು!; ಲಾಕ್ಡೌನ್ ಇಫೆಕ್ಟ್, ಚಾಲಕರಲ್ಲಿ ಭಯ…
ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!