ಶಿವಮೊಗ್ಗ: ನಾನು ಕೂಡ ಅನೇಕ ಬಾರಿ ರಕ್ತದಾನ ಮಾಡಿದ್ದೇನೆ. ಅಪಘಾತಗಳಾದ ಸಂದರ್ಭ ಅನೇಕ ಬಾರಿ ಗಾಯಾಳುಗಳಿಗೆ ರಕ್ತದ ಕೊರತೆ ಆಗಿರುವುದನ್ನು ಗಮನಿಸಿದ್ದೇನೆ. ಹೀಗಾಗಿ ಸಾರ್ವಜನಿಕರು ರಕ್ತದಾನಕ್ಕೆ ಮುಂದಾಗಬೇಕೆಂದು ಸಿಪಿಐ ಹರೀಶ್ ಪಟೇಲ್ ಹೇಳಿದರು.
ಕೆ.ಆರ್.ಪುರಂ ಯುವಕರ ಸೇವಾ ಸಂಘ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ ಹಬ್ಬದ ವೇಳೆ ರಕ್ತದಾನದಂತಹ ಉತ್ತಮ ಕಾರ್ಯದಲ್ಲಿ ಪಾಲ್ಗೊಳ್ಳುವುದು ವಿಶೇಷ ಎಂದರು.
ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ದಾನಿಗಳಿಂದಲೇ ಪಡೆದು ಬಳಸಬೇಕು. ಇಂದಿಗೂ ನಮ್ಮಲ್ಲಿ ರಕ್ತದಾನಿಗಳ ಕೊರತೆ ಇದೆ. ಇನ್ನೂ ಹೆಚ್ಚಿನ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಹೇಳಿದರು.
ಕೆ.ಆರ್.ಪುರಂ ಯುವಕರ ಸಂಘದ ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಸುಂದರ್, ಗಣೇಶ್, ಶರವಣ, ಪ್ರದೀಪ್, ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್, ಖಜಾಂಚಿ ಬಸವರಾಜ್, ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಸಂತೋಷ್, ಗಿರೀಶ್, ಬಲರಾಮ್, ಧರ್ಮೇಂದ್ರ ಸಿಂಗ್ ಹಾಗೂ ಆನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್ ಉಪಸ್ಥಿತರಿದ್ದರು.