ಮಂಡ್ಯ: ನಗರದ ಕಲ್ಲಹಳ್ಳಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ 60 ಯೂನಿಟ್ ರಕ್ತ ಸಂಗ್ರಹವಾಯಿತು.
ವಿನಾಯಕ ಗೆಳೆಯರ ಬಳಗ ಹಾಗೂ ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬಳಗದ ಯುವಕರು ಉತ್ಸಾಹದಿಂದ ರಕ್ತದಾನದಲ್ಲಿ ಪಾಲ್ಗೊಂಡರು. ಇದರೊಂದಿಗೆ ಗಣೇಶ ಹಬ್ಬವನ್ನು ಮಾದರಿಯಾಗಿ ಆಚರಣೆ ಮಾಡಿದರು. ಸ್ಥಳಾವಕಾಶದ ಸಮಸ್ಯೆ ಹಿನ್ನೆಲೆಯಲ್ಲಿ ಮಿಮ್ಸ್‌ನ ಸಂಚಾರ ವಾಹನದಲ್ಲಿ ರಕ್ತ ಸಂಗ್ರಹಿಸಲಾಯಿತು. ಯುವಕರ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಯಿತು.
ಟ್ರಸ್ಟ್ ಅಧ್ಯಕ್ಷ ನಟರಾಜು, ಮಿಮ್ಸ್ ರಕ್ತನಿಧಿ ಕೇಂದ್ರದ ಮಹಮದ್ ರಫೀಕ್, ಬಳಗದ ಅನ್ನದಾನಿ, ನಾಗೇಂದ್ರ, ರಾಘು, ಗಗನ್, ಹೇಮಂತ್, ಅವಿ, ಬಂಗಾರಪ್ಪ, ಧನುಷ್ ಇತರರಿದ್ದರು.