More
  Home Blog

  ಬಜೆಟ್​ನಲ್ಲಿ ಈ ಯೋಜನೆ ಘೋಷಿಸಿದ ತಕ್ಷಣವೇ ಸೋಲಾರ್​ ಕಂಪನಿಗಳ ಷೇರುಗಳ ಬೆಲೆ ಗಗನಕ್ಕೆ

  ನವದೆಹಲಿ: ಗುರುವಾರದ ಮಧ್ಯಂತರ ಬಜೆಟ್​ ಮಂಡನೆಯ ನಂತರ ಸೋಲಾರ್ ಕಂಪನಿಗಳ ಷೇರುಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಹೂಡಿಕೆದಾರರು ಈ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಈ ಷೇರುಗಳ ಬೆಲೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿ ವಿದ್ಯುತ್ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಿದರು. ಮನೆ ಮೇಲ್ಛಾವಣೆಯಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಂಡು ಪ್ರತಿ ತಿಂಗಳಿಗೆ 300 ಯೂನಿಟ್‌ಗಳವರೆಗೆ ವಿದ್ಯುತ್​ ಉತ್ಪಾದಿಸಲು ಸಬ್ಸಿಡಿ ಕಲ್ಪಿಸುವ ಯೋಜನೆ ಇದಾಗಿದೆ.

  ಈ ಯೋಜನೆ ಘೋಷಿಸಿದ ನಂತರ ಸೌರ ಪರಿಹಾರ ಪೂರೈಕೆದಾರರಾದ ಕೆಪಿಐ ಗ್ರೀನ್ ಎನರ್ಜಿ ಮತ್ತು ವೆಬ್‌ಸೋಲ್ ಎನರ್ಜಿ ಷೇರುಗಳು ಮಾರುಕಟ್ಟೆಯಲ್ಲಿ ಗುರುವಾರ ಏರಿಕೆ ಕಂಡಿವೆ.

  KPI ಗ್ರೀನ್ ಎನರ್ಜಿ ಸ್ಟಾಕ್ ಶೇಕಡಾ 9.48 ರಷ್ಟು ಏರಿಕೆ ದಾಖಲಿಸಿ 1,996.65 ರೂಪಾಯಿ ತಲುಪಿತು. ದಿನದ ವಹಿವಾಟಿನ ನಡುವೆ ಶೇಕಡಾ 9.99ರಷ್ಟು ಏರಿಕೆ ಕಂಡು 52 ವಾರಗಳ ಗರಿಷ್ಠ ಬೆಲೆ 2,006.15 ರೂಪಾಯಿ ತಲುಪಿತು.

  ವೆಬ್‌ಸೋಲ್ ಎನರ್ಜಿ ಸಿಸ್ಟಮ್‌ನ ಷೇರುಗಳು ಶೇಕಡಾ 4.99 ರಷ್ಟು ಏರಿಕೆಯಾಗಿ, ಅದರ ಒಂದು ವರ್ಷದ ಗರಿಷ್ಠ ಬೆಲೆಯಾದ 388.15 ರೂಪಾಯಿ ತಲುಪಿತು.

  ಸ್ಟರ್ಲಿಂಗ್ ಮತ್ತು ವಿಲ್ಸನ್ ರಿನ್ಯೂವಬಲ್ ಎನರ್ಜಿ ಷೇರುಗಳು ಕೂಡ ಶೇಕಡಾ 4.16 ರಷ್ಟು ಏರಿದ ನಂತರ ರೂ 590 ಕ್ಕೆ ತಲುಪಿದವು. ದಿನದ ಅಂತ್ಯದಲ್ಲಿ 572.45 ರೂಪಾಯಿ ಮುಟ್ಟಿದವು.

  ಒಂದು ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಸೌರ ವಿದ್ಯುತ್ ತಯಾರಿಸಲು ಮನೆ ಮೇಲ್ಛಾವಣಿಯಲ್ಲಿ ಸೌರ ಫಲಕ ಅಳವಡಿಸುವ ಯೋಜನೆಯ ಬಗ್ಗೆ ಹಣಕಾಸು ಸಚಿವರು ಬಜೆಟ್​ನಲ್ಲಿ ಪ್ರಸ್ತಾಪಿಸಿದ್ದಾರೆ. ಇದು ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ರೂ 15,000-18,000 ರೂ.ಗಳಷ್ಟು ಉಳಿತಾಯಕ್ಕೆ ಕಾರಣವಾಗುತ್ತದೆ.

  “ಬಜೆಟ್ ಹಸಿರು ಬೆಳವಣಿಗೆಗೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ, ಎಲೆಕ್ಟ್ರಿಕ್ ವಾಹನಗಳು ಮತ್ತು ಜೈವಿಕ ಉತ್ಪಾದನೆಗೆ ಪರಿಸರವನ್ನು ಹೆಚ್ಚಿಸಲು ಉಪಕ್ರಮಗಳನ್ನು ಪರಿಚಯಿಸುತ್ತದೆ. ವಿಶೇಷವಾಗಿ ಮೇಲ್ಛಾವಣಿಯ ಸೌರೀಕರಣಕ್ಕೆ ಒತ್ತು ನೀಡುವುದು ಗಮನಾರ್ಹವಾಗಿದೆ” ಎಂದು ಮಾಸ್ಟರ್‌ಟ್ರಸ್ಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹರ್ಜೀತ್ ಸಿಂಗ್ ಅರೋರಾ ಹೇಳಿದ್ದಾರೆ.

  ಅಮೆರಿಕ ಬಡ್ಡಿ ದರ ಯಥಾಸ್ಥಿತಿ; ಬಜೆಟ್​ನಲ್ಲೂ ಇಲ್ಲ ಪ್ರಮುಖ ಘೊಷಣೆ: ಗುರುವಾರ ಚಡಪಡಿಸಿದ ಷೇರು ಮಾರುಕಟ್ಟೆ

  Paytm ವಿರುದ್ಧ ಆರ್​ಬಿಐ ಕ್ರಮದ ನಂತರ ಬಳಕೆದಾರರಲ್ಲಿ ಕನ್ಫೂಷನ್​: ಹಲವು ಪ್ರಶ್ನೆ, ಗೊಂದಲಗಳಿಗೆ ಇಲ್ಲಿದೆ ಉತ್ತರ

  ಷೇರುಗಳಿಗೆ ರೆಕ್ಕೆಪುಕ್ಕ ನೀಡಿದ ಬಜೆಟ್ ಘೋಷಣೆ; ಕುಣಿದು ಕುಪ್ಪಳಿಸಿದ ಹೂಡಿಕೆದಾರರು; ಒಂದೇ ದಿನದಲ್ಲಿ 20% ಹೆಚ್ಚಳವಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​

  ಡರ್ಟಿ ಗೇಮ್‌-ಫೇರ್​ ಗೇಮ್‌: ದೊಡ್ಮನೆಯಲ್ಲಿ ಆಟ ಹೋಗಿ ಹೊಡೆದಾಟ ಶುರುವಾಯ್ತಾ?

  ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಮಾತುಗಳ ಚಕಮಕಿ ತಾರಕಕ್ಕೇರಿದೆ. ಮಾತಿನ ಜೊತೆಗೆ ಕೈ ಕೈ ಮಿಲಾಯಿಸುವ, ಎದುರು-ಬದಿರು ನಿಂತು ಕೆಣಕುವ ಪ್ರಸಂಗಗಳೂ ನಡೆದಿವೆ.

  ವಿನಯ್‌ ಮತ್ತು ಕಾರ್ತಿಕ್ ಮಧ್ಯೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ. JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಬೆಂಕಿಯ ಕಿಡಿಗಳು ಸಿಡಿಯುತ್ತಿರುವುದು ಜಾಹೀರಾಗಿದೆ.

  ಬಿಗ್‌ಬಾಸ್ ಮನೆಯ ಸದಸ್ಯರಿಗೆ ‘ಮಣ್ಣಿನಲ್ಲಿ ಬಣ್ಣದ ಹೂಗಳನ್ನು ನೆಟ್ಟು, ಎದುರಾಳಿ ತಂಡದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು’ ಎಂಬ ಟಾಸ್ಕ್ ನೀಡಲಾಗಿದೆ. ಹೂವಿನಿಂದ ಶುರುವಾದ ಈ ಆಟ ಸ್ವಲ್ಪವೇ ಹೊತ್ತಿನಲ್ಲಿ ಜಿದ್ದಾಜಿದ್ದಿಯ ಬೆಂಕಿಯಾಗಿ ಬೆಳೆದಿದೆ. ಒಂದು ತಂಡದ ಹೂವನ್ನು ಇನ್ನೊಂದು ತಂಡ ಕಿತ್ತುಕೊಳ್ಳಲು ಹಾಳುಗೆಡವಲು ಯತ್ನಿಸಿದ್ದು ಮಾತಿನ ಚಕಮಕಿಗೆ ಕಾರಣವಾಗಿದೆ.

  ಒಬ್ಬರು ಇನ್ನೊಬ್ಬರನ್ನು ಎಳದಾಡಿ, ಜಗಳವಾಡಿಕೊಳ್ಳುವವರೆಗೂ ಮುಟ್ಟಿದೆ. ತುಕಾಲಿ ಸಂತೋಷ್, ಪ್ರತಾಪ್ ಅವರನ್ನು ನೆಲಕ್ಕುರುಳಿಸಿ ಹೂ ಹಾಳು ಮಾಡಿದ್ದಾರೆ. ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಅವರನ್ನು ಹಿಂಬಾಲಿಸಿದ ವಿನಯ್ ಅವರನ್ನು ಜಗ್ಗಾಡಿದ್ದಾರೆ. ಮೈಕಲ್ ಹೂಬುಟ್ಟಿ ಗಟ್ಟಿಯಾಗಿ ಹಿಡಿದುಕೊಂಡರೆ ಉಳಿದವರೆಲ್ಲ ಅವರ ಮೇಲೆ ಬಿದ್ದಿದ್ದಾರೆ.

  ಕಳೆದ ಒಂದೆರಡು ವಾರಗಳಲ್ಲಿ ಸೈಲೆಂಟ್ ಆಗಿದ್ದ ವಿನಯ್ ಈ ವಾರ ಸಖತ್ ಅಗ್ರೆಸಿವ್ ಆಗಿದ್ದಾರೆ. ಅದರ ಪರಿಣಾಮ ಈ ಗೇಮ್‌ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತಿದೆ. ಈ ಜಗಳ ಎಲ್ಲಿಗೆ ಮುಟ್ಟುತ್ತದೆ? ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡವನ್ನು ವೀಕ್ಷಿಸಿ.

  ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

  ಸಿನಿಮಾಗಳಲ್ಲಿ ರೇಪ್ ಸೀನ್​ಗಳು ನಿಜವೇ? ಕಲಾವಿದರ ಸಂಘದ ವಿರುದ್ಧವೇ ತಿರುಗಿಬಿದ್ದ ನಟ ಮನ್ಸೂರ್​ ಅಲಿ ಖಾನ್​

  ಉತ್ತರಕಾಶಿ ಸುರಂಗದಲ್ಲಿನ ಕಾರ್ಮಿಕರ ಹೊರತರಲು ಬಂದವು 2 ರೋಬೋಟ್ – ದಕ್ಷ್ ಸಹೋದರರ ಕಾರ್ಯವೈಖರಿ ಹೇಗಿರಲಿದೆ?

  ಭಾರತಕ್ಕೆ ತವರಿನ ವಿಶ್ವಕಪ್​ನಲ್ಲಿ ವಿಶ್ವ ನಂ. 1 ತಂಡವಾಗಿ ಆಡುವ ಅವಕಾಶಕ್ಕಾಗಿ ಇದೆ ಸಿಂಪಲ್​ ಟಾಸ್ಕ್​!

  ಬೆಂಗಳೂರು: ಈಗಾಗಲೆ ಐಸಿಸಿ ಟಿ20 ಮತ್ತು ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡ ಶುಕ್ರವಾರದಿಂದ ನಡೆಯಲಿರುವ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಗೆದ್ದರೆ, ತವರಿನ ವಿಶ್ವಕಪ್​ಗೆ ಮುನ್ನ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲೂ ನಂ. 1 ಪಟ್ಟಕ್ಕೇರಲಿದೆ.

  ಸದ್ಯ ಪಾಕಿಸ್ತಾನ 115 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ (115) ಕೂಡ ಇಷ್ಟೇ ಅಂಕ ಹೊಂದಿದ್ದರೂ, ದಶಾಂಶ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲಿದೆ. ಆಸ್ಟ್ರೆಲಿಯಾ ತಂಡ (113) ಮೂರನೇ ಸ್ಥಾನದಲ್ಲಿದೆ. ಭಾರತ ತಂಡ ಆಸೀಸ್​ ವಿರುದ್ಧ ಕನಿಷ್ಠ 2-1ರಿಂದ ಸರಣಿ ಗೆದ್ದರೂ, 116 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಲಿದೆ. ಇದರಿಂದ ತವರಿನ ವಿಶ್ವಕಪ್​ನಲ್ಲಿ ವಿಶ್ವ ನಂ. 1 ತಂಡವಾಗಿ ಕಣಕ್ಕಿಳಿಯುವ ವಿಶೇಷ ಗೌರವ ಭಾರತ ತಂಡದ್ದಾಗಲಿದೆ.

  ಇನ್ನು ಆಸ್ಟ್ರೆಲಿಯಾ ಸರಣಿ 3-0ಯಿಂದ ಕ್ಲೀನ್​ಸ್ವೀಪ್​ ಸಾಧಿಸಿದರಷ್ಟೇ ವಿಶ್ವ ನಂ. 1 ಪಟ್ಟಕ್ಕೇರುವ ಅವಕಾಶ ಹೊಂದಿದೆ. ಆಸೀಸ್​ 2-1ರಿಂದಷ್ಟೇ ಸರಣಿ ಗೆದ್ದರೆ, ಪಾಕಿಸ್ತಾನ ನಂ. 1 ಪಟ್ಟವನ್ನು ರಕ್ಷಿಸಿಕೊಳ್ಳಲಿದೆ.

  ಐಸಿಸಿ ರ್ಯಾಂಕಿಂಗ್​ನಲ್ಲಿ ಭಾರತದ ಪ್ರಾಬಲ್ಯ
  ಟೆಸ್ಟ್​ ಟೀಮ್​: ನಂ. 1
  ಟಿ20 ಟೀಮ್​: ನಂ. 1
  ಏಕದಿನ ಟೀಮ್​: ನಂ. 2
  ಟೆಸ್ಟ್​ ಬೌಲರ್​: ಆರ್​. ಅಶ್ವಿನ್​ ನಂ. 1
  ಏಕದಿನ ಬೌಲರ್​: ಮೊ. ಸಿರಾಜ್​ ನಂ.1
  ಟಿ20 ಬ್ಯಾಟರ್​: ಸೂರ್ಯಕುಮಾರ್​ ನಂ. 1
  ಟೆಸ್ಟ್​ ಆಲ್ರೌಂಡರ್​: ರವೀಂದ್ರ ಜಡೇಜಾ ನಂ.1
  ಏಕದಿನ ಬ್ಯಾಟರ್​: ಶುಭಮಾನ್​ ಗಿಲ್​ ನಂ. 2
  ಟೆಸ್ಟ್​ ಆಲ್ರೌಂಡರ್​: ಆರ್​. ಅಶ್ವಿನ್​ ನಂ. 2
  ಟಿ20 ಆಲ್ರೌಂಡರ್​: ಹಾರ್ದಿಕ್​ ಪಾಂಡ್ಯ ನಂ. 2

  ವಿಶ್ವಕಪ್​ನಿಂದ ಚಾಹಲ್​ ಹೊರಕ್ಕೆ, ಪತ್ನಿ ಧನಶ್ರೀಗೆ ಸಿಕ್ಕಿತು ಚಾನ್ಸ್​!

  ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿ ಸಂದೇಶ; ಗ್ರೂಪ್ ಎಡ್ಮಿನ್ ಅರೆಸ್ಟ್

  ನವದೆಹಲಿ: ಉತ್ತರ ಪ್ರದೇಶದ ಭಡೋಹಿ ಪೋಲಿಸರು, ಭಾನುವಾರ ಉದ್ಯಮಿಯೂ ಆಗಿರುವ 35 ವರ್ಷದ ವಾಟ್ಸಾಪ್ ಗುಂಪಿನ ಎಡ್ಮಿನ್‍ಅನ್ನು ಬಂಧಿಸಿದ್ದಾರೆ. ಈ ಗುಂಪಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ವಿರುದ್ಧ ‘ಅವಹೇಳನಕಾರಿ’ ಕಾಮೆಂಟ್ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಪೊಲೀಸರು, “ಈ ಪ್ರಕರಣದಲ್ಲಿ ಎಡ್ಮಿನ್‍ಅನ್ನು ಬಂಧಿಸಿದ್ದು ಏಕೆಂದರೆ ನಿರ್ವಾಹಕರಾಗಿ ಅವರು ಕಾಮೆಂಟ್ ಪೋಸ್ಟ್ ಮಾಡಿದ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ” ಎಂದು ತಿಳಿಸಿದ್ದಾರೆ.

  ಬಂಧಿತ ಗ್ರೂಪ್ ಎಡ್ಮಿನ್‍ರನ್ನು ಭಡೋಹಿಯಲ್ಲಿನ ಥ್ರೆಡ್ ವ್ಯವಹಾರವನ್ನು ಹೊಂದಿರುವ ಸಹಬುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಜಯ್ ಕುಮಾರ್ ಸೇಥ್ ಹೇಳಿದ್ದಾರೆ. “ಆ ಸಂದೇಶವನ್ನು ಅಳಿಸುವ ಬದಲು ಹಾಗೂ ಪೋಸ್ಟ್ ಮಾಡಿದ ಸದಸ್ಯರನ್ನು ಗುಂಪಿನಿಂದ ತೆಗೆದುಹಾಕುವ ಬದಲು ಅವರು ಮೌನವಾಗಿದ್ದರು. ಆದಾಗ್ಯೂ, ಗುಂಪಿನ ಹಲವಾರು ಸದಸ್ಯರು ಇದಕ್ಕೆ ಆಕ್ಷೇಪಣೆಯನ್ನು ಎತ್ತಿದರು” ಎಂದು ಸೇಥ್ ಹೇಳಿದರು.

  ಇದನ್ನೂ ಓದಿ: ಜನೋಪಯೋಗಿ ಕೆಲಸ ಮಾಡಲು ಸಲಹೆ

  ಪೊಲೀಸರ ಪ್ರಕಾರ, ಕಾಮೆಂಟ್ ಮಾಡಿದ ವಾಟ್ಸಾಪ್ ಗುಂಪಿನ ಹೆಸರು, ‘ನಗರ್ ಪಾಲಿಕಾ ಪ್ಯಾರಿಷ್ ಭಡೋಹಿ’. ಜನರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಇದನ್ನು ಬಳಸುತ್ತಾರೆ. ಈ ಗುಂಪಿನಲ್ಲಿ ನಗರ ಪಾಲಿಕೆಯ ನೌಕರರು ಸೇರಿದಂತೆ ಸ್ಥಳೀಯ ನಿವಾಸಿಗಳು ಸೇರಿದಂತೆ 418 ಸದಸ್ಯರು ಇದ್ದಾರೆ.

  ಪೊಲೀಸರು ಈಗ ಆರೋಪಿ ಅನ್ಸರಿಯನ್ನು ಹುಡುಕುತ್ತಿದ್ದು ಭಡೋಹಿಯಿಂದ ಬಂದ ಅನ್ಸಾರಿ ನೇಪಾಳದಲ್ಲಿ ವ್ಯವಹಾರವನ್ನು ನಡೆಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. “ನಾವು ಭಡೋಹಿಯಲ್ಲಿರುವ ಅನ್ಸಾರಿ ಮನೆಯಲ್ಲಿ ದಾಳಿ ನಡೆಸಿದ್ದೇವೆ. ಹೆಂಡತಿ ಮತ್ತು ಮಕ್ಕಳು ಸೇರಿದಂತೆ ಅವರ ಕುಟುಂಬ ಸದಸ್ಯರು ಅವರು ( ಅನ್ಸಾರಿ ) ನೇಪಾಳದಲ್ಲಿದ್ದಾರೆ ಮತ್ತು ಕಳೆದ ಮೂರು ತಿಂಗಳಿನಿಂದ ಮನೆಗೆ ಮರಳಿಲ್ಲ ಎಂದು ಹೇಳಿದರು. ಅವನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ, ” ಸೇಥ್ ಹೇಳಿದರು.

  ಇದನ್ನೂ ಓದಿ: ಗ್ಯಾಂಗ್​ಸ್ಟರ್​​ನ ಜಮೀನಿನಲ್ಲಿ ಫ್ಲ್ಯಾಟ್‌ ನಿರ್ಮಿಸಿ, ಬಡವರಿಗೆ ಹಂಚಿದ ಸಿಎಂ ಯೋಗಿ ಆದಿತ್ಯನಾಥ್

  ಪೊಲೀಸರ ಪ್ರಕಾರ, ವಾಟ್ಸ್ಆ‍್ಯಪ್ ಗುಂಪಿನಲ್ಲಿ ಆಕ್ಷೇಪಾರ್ಹ ಕಾಮೆಂಟ್ ನ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡುವ ಮೂಲಕ ಮಾಹಿತಿದಾರರು ಆಗಸ್ಟ್ 4 ರಂದು ಆರಂಭಿಕ ಟ್ವಿಟರ್ ಮೂಲಕ ದೂರು ನೀಡಿದರು. ಅವರು ಸೈಬರ್ ಸೆಲ್ ಸಹಾಯದಿಂದ ವಿಚಾರಣೆಯನ್ನು ಪ್ರಾರಂಭಿಸಿದ್ದು ದೂರು ನಿಜವೆಂದು ಕಂಡುಕೊಂಡರು. ವಿಚಾರಣೆಯ ಸಮಯದಲ್ಲಿ, ಇತರ ವಾಟ್ಸಾಪ್ ಗುಂಪುಗಳಲ್ಲಿಯೂ ಈ ಕಾಮೆಂಟ್ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಪೊಲೀಸರು FIRನಲ್ಲಿ ಐಪಿಸಿ ವಿಭಾಗಗಳು (500 ಮಾನಹಾನಿ), 504 (ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ), 505 ( 2 ) ಮತ್ತು 506 ( ಕ್ರಿಮಿನಲ್ ಬೆದರಿಕೆ ) ಹಾಗೂ ಸಮುದಾಯಗಳ ನಡುವಿನ ದ್ವೇಷ, ಅಥವಾ ಕೆಟ್ಟ ಇಚ್ಛೆಯನ್ನು ರಚಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಇವು ಕ್ರಿಮಿನಲ್ ಕಾನೂನು ( ತಿದ್ದುಪಡಿ ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಆಹ್ವಾನಿಸಿದರು. (ಏಜೆನ್ಸೀಸ್)

  ಗ್ರಾ.ಪಂ ಚುನಾವಣೆ; ‘ನಾವು ಪೊಲೀಸರು’ ಎಂದು ಗ್ರಾಮ ಪಂಚಾಯಿತಿ ಸದಸ್ಯೆಯ ಕಿಡ್ನಾಪ್​ಗೆ ಯತ್ನ!

  ಕಲಬುರಗಿ: ಕಲಬುರಗಿ ತಾಲೂಕಿನ ಸಾವಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸಿಂದಗಿ (ಬಿ) ಗ್ರಾಮದಲ್ಲಿ ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪ್​ ಯತ್ನ ನಡೆದಿದೆ. ಇದಕ್ಕೆಲ್ಲಾ ಕಾರಣ ಗ್ರಾಮ ಪಂಚಾಯಿತಿ ಚುನಾವಣೆ! ನಾಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯ ಅಪರಹಣಕ್ಕೆ ಯತ್ನ ನಡೆದಿದೆ.

  ನಾಳೆ ಸಾವಳಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಗದ್ದುಗೆ ಹಿಡಿಯಲು ಹರಸಾಹಸ ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ಬೆಂಬಲಿತ ಸದಸ್ಯರ ನಡುವೆ ಭಾರೀ ಸ್ಪರ್ಧೆ ಉಂಟಾಗಿದೆ ಎನ್ನಲಾಗುತ್ತಿದೆ. ಸಾವಳಗಿ ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಸದಸ್ಯೆ ನಾಗಮ್ಮ ಕೊಂಡೆದ್ ಅವರ ಅಪಹರಣಕ್ಕೆ ಅದೇ ಗ್ರಾಮದ ಕಾಂಗ್ರೆಸ್ ಬೆಂಬಲಿತ ಶಿವಕುಮಾರ್ ಮಲ್ಲು ಕಡಗಂಚಿ ಸೇರಿದಂತೆ ಇತರರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ, ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಇದನ್ನೂ ಓದಿ: ಪ್ರೀತಿಯ ವಿಚಾರಕ್ಕೆ ಯುವಕನನ್ನು ಕಿಡ್ನ್ಯಾಪ್‍ ಮಾಡಿ ಪೆಟ್ರೋಲ್ ಹಚ್ಚಿ ಸುಟ್ಟ ದುಷ್ಕರ್ಮಿಗಳು!

  ಘಟನೆ ನಡೆದದ್ದು ಹೇಗೆ?

  ಜಮೀನಿನಲ್ಲಿ‌ ಕೆಲಸ ಮಾಡ್ತಿರುವಾಗ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆಯನ್ನು, ಕ್ರೂಸರ್‌ನಲ್ಲಿ ಬಂದ 5 ರಿಂದ 6 ಜನ ಅಪಹರಣಕಾರರು, ಪೊಲೀಸರ ಹೆಸರು ಹೇಳಿ ಕಿಡ್ನ್ಯಾಪ್​ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭ ಅವರು ಮಾರಕಾಸ್ತ್ರಗಳನ್ನು ಹಾಗೂ ಬಡಿಗೆಗಳನ್ನೂ ಹಿಡಿದುಕೊಂಡು ಸದಸ್ಯೆ ನಾಗಮ್ಮರನ್ನು ಅಪರಹಣ ಮಾಡಲು ಮುಂದಾಗಿದ್ದರು.

  ಇದನ್ನೂ ಓದಿ: ಫೇಸ್​​ಬುಕ್​ ಸ್ನೇಹಿತನೊಂದಿಗೆ ಪತ್ನಿ ಪರಾರಿ: ಕಿಡ್ನ್ಯಾಪ್​​​ ಎಂದು ಪತಿಯಿಂದ ದೂರು

  ಈ ವೇಳೆ ಸ್ಥಳಕ್ಕೆ ನಾಗಮ್ಮ ಅವರ ಪುತ್ರ ಹಾಗೂ ಗ್ರಾಮಸ್ಥರು ಬಂದಿದ್ದಾರೆ. ಜನ ಸೇರುವುದನ್ನು ಕಂಡು ಅಪಹರಣಕಾರರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಸದಸ್ಯೆ ನಾಗಮ್ಮ ಮತ್ತು ಪುತ್ರ ಮಲ್ಲಿಕಾರ್ಜುನಿಗೆ ಗಾಯಗಳಾಗಿವೆ. ಅಪಹರಣಕಾರರಲ್ಲಿ ನಾಲ್ವರು ತಪ್ಪಿಸಿಕೊಂಡಿದ್ದು, ಗ್ರಾಮಸ್ಥರ ಕೈಗೆ ಓರ್ವ ಸಿಕ್ಕಿಬಿದ್ದಿದ್ದಾನೆ. ಆತನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ.

  ಈತ, ಸಿಕ್ಕಿ ಬೀಳುತ್ತಿದ್ದಂತೆಯೇ, ಆತನನ್ನು ಮರಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ನಂತರ ಆತನನ್ನೂ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  ಯಾವ ತರಬೇತಿಯನ್ನೂ ಪಡೆಯದ ‘ಕ್ರೀಡಾಪಟು’ವಿಗೆ ಅವಕಾಶ ಕೊಟ್ಟು ಕೆಟ್ಟಿತು ಈ ದೇಶ!

  ಟ್ರಕ್​ ಡ್ರೈವರ್​ಗಳಿಗೆ ಇನ್ನು ನಿರಾಳ; ಈ ವರ್ಗದ ಟ್ರಕ್​ ಕ್ಯಾಬಿನ್​ಗಳಲ್ಲಿನ್ನು AC ಕಡ್ಡಾಯ!

  ಖರ್ಗೆ ಮೈಬಣ್ಣದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಆರಗ ಜ್ಞಾನೇಂದ್ರ; ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್​

  ಒಳಗೆ ಬಂದು ಯಾವ ಹುಡುಗಿಯನ್ನಾದರೂ ಆಯ್ದುಕೊಳ್ಳಿ… ಚೆನ್ನೈ ಹೋಟೆಲ್​ನಲ್ಲಿ ಆಫರ್​ ಬೋರ್ಡ್​, ಅಸಲಿಯತ್ತು ಬಯಲು

  ಚೆನ್ನೈ: ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವ ಹುಡುಗಿಯನ್ನಾದರೂ ಸಂಭೋಗಿಸಿ ಎಂದು ಹೋಟೆಲ್​ ಮುಂದೆ ಅಳವಡಿಸಿದ್ದ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕವನ್ನು ಗ್ರೇಟರ್​ ಚೆನ್ನೈ ಪೊಲೀಸರು ಕಳೆದ ಶನಿವಾರ (ಡಿ. 24) ತೆರವುಗೊಳಿಸಿದ್ದು, ಹೋಟೆಲ್​ ಮಾಲೀಕರ​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಚೆನ್ನೈ ನಾಗರಿಕರೊಬ್ಬರು ಹೋಟೆಲ್​ ಮುಂದಿನ ಡಿಜಿಟಲ್​ ಜಾಹಿರಾತು ಫಲಕವನ್ನು ನೋಡಿ ತಮ್ಮ ಮೊಬೈಲ್​ನಲ್ಲಿ ಫೋಟೋ ಮತ್ತು ವಿಡಿಯೋ ರೆಕಾರ್ಡ್​ ಮಾಡಿ, ಟ್ವಿಟರ್​ನಲ್ಲಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಲಿಟಲ್​ ಮೌಂಟ್​ ಮೆಟ್ರೋ ಬಳಿಯ ಕಂಬವೊಂದರಲ್ಲಿ ಡಿಜಿಟಲ್​ ಜಾಹಿರಾತು ಫಲಕ ಅಳವಡಿಸಲಾಗಿತ್ತು. ಅದರಲ್ಲಿ ಪುರುಷರೇ ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವುದೇ ಹುಡುಗಿಯ ಜೊತೆ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಬರೆಯಲಾಗಿತ್ತು.

  ಈ ವಿಚಾರವಾಗಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ರಾಜ್ಯ ಘಟಕದ ಸದಸ್ಯರು ಡಿ.24ರಂದು ಪ್ರತಿಭಟನೆ ನಡೆಸಿ, ಹೋಟೆಲ್​ ಮಾಲೀಕ ಅಥವಾ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕ ಅಳವಡಿಸಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಚೆನ್ನೈ ಪೊಲೀಸರನ್ನು ಒತ್ತಾಯಿಸಿದ್ದರು.

  ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಡಿಜಿಟಲ್​ ಜಾಹಿರಾತು ಫಲಕವನ್ನು ತೆಗೆದಿದ್ದು, ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಹೋಟೆಲ್​ನ ವೈ-ಫೈ ನೆಟ್‌ವರ್ಕ್‌ ಹ್ಯಾಕ್​ ಮಾಡಿ ಅಪರಿಚಿತ ವ್ಯಕ್ತಿ ಈ ರೀತಿ ಮಾಡಿದ್ದಾನೆಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ನಮ್ಮ ವೈ ಫೈ ಎಲ್ಲರಿಗೂ ಮುಕ್ತವಾಗಿದೆ. ಯಾವುದೇ ಪಾಸ್​ವರ್ಡ್​ನಿಂದ ನೆಟ್​ವರ್ಕ್​ ಅನ್ನು ಸುರಕ್ಷಿತವಾಗಿ ಇರಿಸಿರಲಿಲ್ಲ ಎಂದಿದ್ದಾರೆ. ಡಿಸ್‌ಪ್ಲೇ ಸಂದೇಶಕ್ಕಾಗಿ ಕೋಡ್‌ಗಳನ್ನು ಬದಲಾಯಿಸುವ ಬಗ್ಗೆ ತಾಂತ್ರಿಕ ಜ್ಞಾನವನ್ನು ಹೊಂದಿರುವ ಯಾರೋ ಕಿಡಿಗೇಟಿ ಡಿಜಿಟಲ್​ ಬೋರ್ಡ್​ ಸಂದೇಶವನ್ನು ಬದಲಾಯಿಸಿದ್ದಾನೆ ಎಂದು ಪೊಲೀಸರು ಹೇಳಿಕೆಯನ್ನು ನೀಡಿದ್ದಾರೆ.

  ಹೋಟೆಲ್‌ನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತೆರೆದ ವೈ-ಫೈ ನೆಟ್‌ವರ್ಕ್‌ಗಳ ದುರುಪಯೋಗದ ಬಗ್ಗೆ ಜಾಗೃತರಾಗಿರಲು ಜನರಿಗೆ ಪೊಲೀಸರು ಸಲಹೆ ನೀಡಿದ್ದಾರೆ ಮತ್ತು ವೈ-ಫೈ ಅಥವಾ ವೈರ್ಡ್ ಸಂಪರ್ಕದ ಮೂಲಕ ಫಲಕಕ್ಕೆ ಪ್ರವೇಶವನ್ನು ಮರುಪರಿಶೀಲಿಸಲು ಮತ್ತು ಸುರಕ್ಷಿತವಾಗಿರಿಸಲು ಹೋಟೆಲ್​ ಮಾಲೀಕರನ್ನು ಪೊಲೀಸರು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

  6000 ಟ್ವೀಟ್​ಗಳಲ್ಲಿ 4000 ಟ್ವೀಟ್​ಗೆ ಪರಿಹಾರ: ಈ ಟ್ವಿಟರ್​ ಗರ್ಲ್​ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

  ಕೇವಲ 26ನೇ ವಯಸ್ಸಿನಲ್ಲಿ 21 ಮದ್ವೆ ಮಾಡ್ಕೊಂಡ ಭೂಪ! ಈ ಒಂದು ಕಾರಣಕ್ಕೆ ಯುವತಿಯರ ಹಿಂದೆ ಬಿದ್ದ ಕಿರಾತಕ

  ಡಬಲ್​ ಮರ್ಡರ್​ಗೆ ಬೆಚ್ಚಿಬಿದ್ದ ಬೆಳಗಾವಿ ಜನ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಬರ್ಬರ ಹತ್ಯೆ

  ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿ; ಮಕ್ಕಳ ಕಳ್ಳ ಎಂದು ಕೈಕಟ್ಟಿ ಕೂರಿಸಿದ ಜನರು

  ಗದಗ: ಬಹಳ ದಿನಗಳಿಂದ ಉತ್ತರ ಕರ್ನಾಟಕ ಭಾಗದ ಹಲವೆಡೆಗಳಲ್ಲಿ ಮಕ್ಕಳ ಕಳ್ಳರ ಕುರಿತಾಗಿ ವದಂತಿಯೊಂದು ನಿರಂತರವಾಗಿ ಹರಡುತ್ತಲೇ ಇದೆ. ಈ ಹಿಂದೆ ಬಾಗಲಕೋಟೆ ಹಾಗೂ ಕಲಬುರಗಿಯಲ್ಲಿ ಮಕ್ಕಳ ಕಳ್ಳರು ಎಂದು ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿಗಳನ್ನು ಜನರು ಪೋಲಿಸರಿಗೆ ಒಪ್ಪಿಸಿದ್ದರು.

  ಇದೀಗ ಗದಗ ಜಿಲ್ಲೆಯ ಗಜೇಂದ್ರಗಡ ದುರ್ಗಮ್ಮನ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಓಡಾಡಿಕೊಂಡಿರುವುದು ತಿಳಿದು ಬಂದಿದೆ. ಈ ವದಂತಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಬಂದ ಊರಿನ ಜನರು ಮಕ್ಕಳ ಕಳ್ಳ ಎಂದು ಆ ವ್ಯಕ್ತಿಯ ಕೈಗೆ ಹಗ್ಗವನ್ನು ಕಟ್ಟಿ ತಪ್ಪಿಸಿಕೊಂಡು ಹೋಗದಂತೆ ಕೂರಿಸಿದ್ದರು.

  ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗಜೇಂದ್ರಗಡ ಪೋಲಿಸರು ಆ ವ್ಯಕ್ತಿಯನ್ನು ಆಟೋದಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಅಷ್ಟೊತ್ತಿಗಾಗಲೇ ಈ ವಿಷಯ ಊರಿಡೀ ಹರಡಿ ಆ ವ್ಯಕ್ತಿಯನ್ನು ನೋಡಲು ನೂರಾರು ಜನರು ಬಂದಿದ್ದರು.

  ಎಲ್​ಪಿಯು ಪದವೀಧರರು ಪಡೆಯುತ್ತಿದ್ದಾರೆ 3 ಕೋಟಿಯ ಪ್ಯಾಕೇಜ್​

  ಎಲ್‌ಪಿಯು ಪದವಿ ಪಡೆದ ನಂತರ ಅವರು ಬೇರೆ ಯಾವುದೇ ಪದವಿ ಪಡೆಯಲಿಲ್ಲ. ಅವರು ತಮ್ಮ ಯಶಸ್ಸಿಗೆ ಕಾರಣ ಎಲ್​ಪಿಯುನಲ್ಲಿ ಸ್ವೀಕರಿಸಿದ ಬಲವಾದ ಮೂಲಭೂತ ಅಂಶಗಳು ಎಂದು ಹೇಳುತ್ತಾರೆ.

  ಎಲ್​ಪಿಯುನಿಂದ 2018ರಲ್ಲಿ ಪಾಸಾದ ಯಾಸಿರ್ ಎಂ. ಅವರು 3 ಕೋಟಿ ರೂಪಾಯಿ ಗ್ರ್ಯಾಂಡ್ ಪ್ಲೇಸ್​ಮೆಂಟ್ ಪ್ಯಾಕೇಜ್ ಪಡೆಯುವ ಮೂಲಕ ಪ್ಲೇಸ್​ಮೆಂಟ್ ದಾಖಲೆಯನ್ನು ಮಾಡಿದ್ದಾರೆ. ಕೇರಳದಿಂದ ಬಂದಿರುವ ಯಾಸಿರ್, ಲವ್​ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್​ಪಿಯು) ಬಿಟೆಕ್​ ಸಿಎಸ್ಇ ಪದವೀಧರ ಆಗಿದ್ದು, ಕೋವಿಡ್ ಸಮಯದಲ್ಲಿ ಜಗತ್ತಿಗೆ ಗಣನೀಯ ಕೊಡುಗೆ ನೀಡಿರುವ ವಿಶ್ವಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಗೆ ಭಾರಿ ಮೊತ್ತವಾದ 3 ಕೋಟಿ ರೂ. ಪ್ಯಾಕೇಜ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್​ಪಿಯುನಲ್ಲಿ ಪದವಿ ಪಡೆದ ಬಳಿಕ ಅವರು ಬೇರೆ ಯಾವುದೇ ಪದವಿ ಪಡೆಯಲಿಲ್ಲ ಮತ್ತು ಎಲ್​ಪಿಯು ಕ್ಯಾಂಪಸ್​ನಲ್ಲಿ ಕಲಿಯುತ್ತಿದ್ದಾಗಿನ ಮೂಲಭೂತ ಅಂಶಗಳೇ ತಮ್ಮ ಯಶಸ್ಸಿಗೆ ಕಾರಣ ಎಂದು ಹೇಳಿದ್ದಾರೆ.

  ಎಲ್​ಪಿಯುನಲ್ಲಿದ್ದಾಗ ಅವರು ಯಾವಾಗಲೂ ಬುದ್ಧಿವಂತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ ಮತ್ತು 8.6 ಸಿಜಿಪಿಎಯೊಂದಿಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್​ ಪೂರ್ಣಗೊಳಿಸಿದ್ದಾರೆ. ಅವರು ಕ್ಯಾಂಪಸ್‌ನಲ್ಲಿ ಯಾವಾಗಲೂ ಹಲವಾರು ಹ್ಯಾಕಥಾನ್‌ ಮತ್ತು ಇತರ ತಾಂತ್ರಿಕ ಕಾರ್ಯಕ್ರಮಗಳ ಭಾಗವಾಗಿದ್ದಷ್ಟೇ ಅಲ್ಲದೇ ಅವುಗಳಲ್ಲಿ ಹೆಚ್ಚಿನದನ್ನು ಗೆದ್ದಿದ್ದಾರೆ. “ನಾನು ಎಲ್​ಪಿಯುನಲ್ಲಿದ್ದಾಗ ಎಐ, ಎಂಎಲ್​ನಂಥ ಹೊಸ ಯುಗದ ತಂತ್ರಜ್ಞಾನಕ್ಕೆ ತೆರೆದುಕೊಂಡೆ ಮತ್ತು ಪ್ರಪಂಚದಾದ್ಯಂತ ಸ್ನೇಹಿತರನ್ನು ಮಾಡಿಕೊಂಡೆ.

  ಇಂಥದ್ದೊಂದು ಪ್ರಮುಖ ಪಾತ್ರ ವಹಿಸುತ್ತಿರುವುದಕ್ಕೆ ಇಲ್ಲಿನ ಬೋಧಕರ ತೆರೆದುಕೊಳ್ಳುವಿಕೆ ಮತ್ತು ಮಾರ್ಗದರ್ಶನ ನನಗೆ ಸಹಾಯ ಮಾಡಿದೆ. ಜರ್ಮನಿಯಲ್ಲಿ ಕೆಲಸ ಮಾಡುವ ಇಂಥ ದೊಡ್ಡ ಅವಕಾಶ ಪಡೆಯುವ ಮೂಲಕ ನನ್ನ ಹೆತ್ತವರಷ್ಟೇ ಅಲ್ಲದೆ ಇಡೀ ವಿಶ್ವವಿದ್ಯಾಲಯ ಮತ್ತು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿರುವುದು ನನಗೆ ಸಂತೋಷ ನೀಡಿದೆ” ಎಂದು ಮೊಹಮ್ಮದ್ ಹೇಳಿಕೊಂಡಿದ್ದಾರೆ.

  ಇಂತಹ ಕೊಡುಗೆಯನ್ನು ಪಡೆದಿರುವ ಯಾಸಿರ್ ಮಾತ್ರವಲ್ಲದೆ ಎಲ್‌ಪಿಯುನ ಸಾವಿರಾರು ಹಳೆಯ ವಿದ್ಯಾರ್ಥಿಗಳು ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್, ಮರ್ಸಿಡಿಸ್ ಮತ್ತು ಪ್ರಪಂಚದಾದ್ಯಂತದ ಇತರ ಫಾರ್ಚೂನ್ 500 ಕಂಪನಿಗಳಲ್ಲಿ 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಪ್ಯಾಕೇಜ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

  ಇತ್ತೀಚೆಗೆ ಎಲ್​​ಪಿಯು ಬಿ.ಟೆಕ್ ಪದವೀಧರ  ಹರೇಕೃಷ್ಣ ಮಹತೋ ಗೂಗಲ್​ನ ಬೆಂಗಳೂರು ಕಚೇರಿಯಲ್ಲಿ 2022ರಲ್ಲಿ 64 ಲಕ್ಷ ರೂ. ಶ್ಲಾಘನೀಯ ಪ್ಯಾಕೇಜ್ ಸ್ವೀಕರಿಸಿದರು. ಇದು ಯಾವುದೇ ಯುವ ಪದವೀಧರರು ಸ್ವೀಕರಿಸಿದ ಅತ್ಯಧಿಕ ಪ್ಯಾಕೇಜ್‌ಗಳಲ್ಲಿ ಒಂದಾಗಿದೆ.

  ನಮ್ಮ ಹರೇ ಕೃಷ್ಣ ಅವರು ಎಲ್​ಪಿಯು ಕುರಿತು ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ಕೇಳಿ

  ಶೈಕ್ಷಣಿಕ ಉತ್ಕೃಷ್ಟತೆಯ ಕಡೆಗೆ ವಿಶ್ವವಿದ್ಯಾನಿಲಯದ ಸ್ಥಿರತೆ, ವಿದ್ಯಾರ್ಥಿಗಳಿಗೆ ಅವಕಾಶಗಳ ಅಂತ್ಯವಿಲ್ಲದ ಹರಿವು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮತ್ತು ಮಾರ್ಗದರ್ಶನ ನೀಡಲು ದೋಷರಹಿತ ಉದ್ಯೋಗ ಬೆಂಬಲದಿಂದ ಹೊರಹೊಮ್ಮುವ ಹೋಲಿಸಲಾಗದ ಉದ್ಯೋಗ ದಾಖಲೆಯನ್ನು ಎಲ್​ಪಿಯು ಹೊಂದಿದೆ. ಅಲ್ಲದೆ, ಈ ವರ್ಷ ಎಲ್​ಪಿಯು ವಿದ್ಯಾರ್ಥಿ ಅರ್ಜುನ್ ಕ್ಯಾಂಪಸ್‌ನಿಂದ ನೇರವಾಗಿ 63 ಲಕ್ಷ ರೂ. ಪ್ಯಾಕೇಜ್​ಗೆ ಆಯ್ಕೆ ಆಗುವುದರೊಂದಿಗೆ ಇದು ಅತಿ ಹೆಚ್ಚು ಉದ್ಯೋಗ ದಾಖಲೆಗಳಲ್ಲಿ ಒಂದಾಗಿದೆ. ಇಡೀ ಭಾರತದಲ್ಲಿ ಯಾವುದೇ ಇಂಜಿನಿಯರಿಂಗ್ ಫ್ರೆಶರ್‌ಗಳು ಸ್ವೀಕರಿಸಿದ ಅತ್ಯಧಿಕ ಪ್ಯಾಕೇಜ್‌ಗಳಲ್ಲಿ ಇದು ಒಂದಾಗಿದೆ.

  ನಮ್ಮ ಅರ್ಜುನ್ ಅರ್ಜುನ್ ಎಲ್​ಪಿಯು ಕುರಿತು ಹೇಳಿರುವ ಮಾತುಗಳನ್ನು ಇಲ್ಲಿ ಕೇಳಿ

  ಅಲ್ಲದೆ, ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಲ್ಲ, ಎಲ್​ಪಿಯು ಹೊಸ 2021,22 ಬ್ಯಾಚ್‌ನ 431 ವಿದ್ಯಾರ್ಥಿಗಳನ್ನು 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ಯಾಕೇಜ್‌ನಲ್ಲಿ ಇರಿಸಲಾಗಿದೆ. ಇಷ್ಟೇ ಅಲ್ಲ, ಬೃಹತ್​ ನೇಮಕಾತಿದಾರರು 10 ಲಕ್ಷದವರೆಗಿನ ವಿಭಿನ್ನ ಪ್ಯಾಕೇಜ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಎಲ್​ಪಿಯುನಿಂದ ಅತ್ಯಧಿಕ ಸಂಖ್ಯೆಯಲ್ಲಿ ನೇಮಿಸಿಕೊಂಡ ಪ್ರಮುಖ ಕಂಪನಿಗಳಲ್ಲಿ ಕಾಗ್ನಿಜೆಂಟ್ ಕೂಡ ಇದ್ದು, ಅದು 670ಕ್ಕೂ ಅಧಿಕ ಎಲ್​ಪಿಯು ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದೆ. ಅದೇ ರೀತಿ, ಕ್ಯಾಪ್​ಜೆಮಿನಿ 310ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದೆ, ವಿಪ್ರೊ 310ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದೆ, ಎಂಫಸಿಸಿ 210ಕ್ಕೂ ಅಧಿಕ ಮತ್ತು ಆ್ಯಕ್ಸೆಂಚರ್​ 150ಕ್ಕೂ ಅಧಿಕ ನೇಮಕಾತಿಗಳನ್ನು ಮಾಡಿಕೊಂಡಿದ್ದು, ಇದರಲ್ಲಿ ಇನ್ನೂ ಹೆಚ್ಚಿನ ಹೆಸರುಗಳಿವೆ. ಇತ್ತೀಚಿನ ವರ್ಷಗಳಲ್ಲಿ, ಉನ್ನತ ನೇಮಕಾತಿದಾರರಿಂದ ಎಲ್​ಪಿಯು ವಿದ್ಯಾರ್ಥಿಗಳಿಗೆ 20,000ಕ್ಕೂ ಹೆಚ್ಚು ಉದ್ಯೋಗಗಳು/ ಇಂಟರ್ನ್‌ಶಿಪ್‌ಗಳನ್ನು ನೀಡಲಾಗಿದೆ. ಫಾರ್ಚೂನ್ 500 ಕಂಪನಿಗಳು 5000ಕ್ಕೂ ಹೆಚ್ಚು ಕೊಡುಗೆಗಳನ್ನು ವಿಸ್ತರಿಸಿವೆ.

  ಎಲ್​ಪಿಯು ಪದವೀಧರರು ಪಡೆಯುತ್ತಿದ್ದಾರೆ 3 ಕೋಟಿಯ ಪ್ಯಾಕೇಜ್​

  ಅಂಥ ಶ್ಲಾಘನೀಯ ಕಥೆಗಳು ಭಾರತದಲ್ಲಿ ಎಲ್​ಪಿಯು ಹೇಗೆ ಉನ್ನತ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂಬುದನ್ನು ಸೂಚಿಸುತ್ತವೆ ಮತ್ತು ಇಲ್ಲಿ ಅಂತಹ ಅದ್ಭುತ ಉದ್ಯೋಗ ದಾಖಲೆಗಳು ಸಾಮಾನ್ಯ ಎನಿಸುವಂತಾಗುತ್ತಿವೆ.

  ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ಶ್ರೇಯಾಂಕಗಳು 2022ರಲ್ಲಿ ಜಾಗತಿಕ ಶ್ರೇಯಾಂಕ ಪಡೆದಿರುವ ಎಲ್​ಪಿಯು ಪ್ರಪಂಚದಾದ್ಯಂತ ಮತ್ತು ಭಾರತದ ಯುವ ಮನಸ್ಸುಗಳಿಗೆ ಅತ್ಯುತ್ತಮ ಶಿಕ್ಷಣ ಮತ್ತು ಉದ್ಯೋಗ ಬೆಂಬಲವನ್ನು ನೀಡುತ್ತದೆ. ಶಿಕ್ಷಣವನ್ನು ಮುಂದುವರಿಸಲು, ಎಲ್​ಪಿಯುವನ್ನು ಪರಿಗಣಿಸಲು ಇತರ ಕೆಲವು ಅಂಶಗಳೆಂದರೆ ಅತ್ಯಾಧುನಿಕ ಕ್ಯಾಂಪಸ್, 300ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳೊಂದಿಗೆ ಟೈ-ಅಪ್‌ಗಳು ಮತ್ತು 28 ಭಾರತೀಯ ರಾಜ್ಯಗಳು ಮತ್ತು 50ಕ್ಕೂ ಅಧಿಕ ದೇಶಗಳಿಂದ ಬಂದ ವಿದ್ಯಾರ್ಥಿಗಳು ಒಂದೇ ಸಂಸ್ಥೆಯಲ್ಲಿರುವುದು.

  ಎಲ್​ಪಿಯುಗೆ 2022ರ ಪ್ರವೇಶಾತಿ ಶೀಘ್ರದಲ್ಲೇ ಮುಗಿಯಲಿದೆ. ಪರೀಕ್ಷೆ ಮತ್ತು ಪ್ರವೇಶಾತಿ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ವಿದ್ಯಾರ್ಥಿಗಳು ಇದನ್ನು ವೀಕ್ಷಿಸಬಹುದು: https://bit.ly/3ocXiZE

  ಪೊಲೀಸ್​ ಠಾಣೆಯಿಂದ ಮನೆಗೆ ಬಂದು ಯುವತಿ ಆತ್ಮಹತ್ಯೆ: ಠಾಣೆಯಲ್ಲೇ ನಡೆಯಿತು ಮಹಾ ಪ್ರಮಾದ!

  ಕೊಚ್ಚಿ: ಗಂಡ ಮತ್ತು ಆತನ ಕುಟುಂಬದ ವಿರುದ್ಧ ಕೇರಳದ ಅಲುವಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿಯೊಬ್ಬಳು ಇದೀಗ ಅಲುವಾದ ಎಡಯಪುರಂ ನಿವಾಸದಲ್ಲಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

  ಮೃತಳನ್ನು ಮೌಫಿಯಾ ಪರ್ವೀನ್​ (23) ಎಂದು ಗುರುತಿಸಲಾಗಿದೆ. ಈಕೆ ಎಲ್​ಎಲ್​ಬಿ ಓದುತ್ತಿದ್ದಳು. ಪೊಲೀಸ್​ ಠಾಣೆಗೆ ದೂರು ನೀಡಿ ಮನೆಗೆ ಬಂದ ಬೆನ್ನಲ್ಲೇ ಮೌಫಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಠಡಿಯಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ದೂರನ್ನು ನಿರ್ಲಕ್ಷಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ನನಗೆ ಪೊಲೀಸರಿಂದ ಯಾವುದೇ ನ್ಯಾಯ ದೊರಕಲಿಲ್ಲ. ಬದಲಾಗಿ ಗಂಡನ ಕುಟುಂಬದ ಜತೆ ಸಂಧಾನಕ್ಕಾಗಿ ನನ್ನನ್ನು ಕರೆಸಿದರು ಎಂದು ಮೌಫಿಯಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

  ಆದಾಗ್ಯೂ, ಸಂಧಾನ ನಡೆಯುವ ವೇಳೆ ಮೌಫಿಯಾ ತನ್ನ ಗಂಡನ ಕಪಾಳಕ್ಕೆ ಬಾರಿಸಿದ್ದಳು. ಅದನ್ನು ನೋಡಿ ಕೋಪಗೊಂಡ ಪೊಲೀಸರು ಠಾಣೆಯ ಒಳಗೆ ಇಂತಹ ಕೆಲಸ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮೌಫಿಯಾಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಇದರಿಂದ ಮನನೊಂದಿದ್ದ ಮೌಫಿಯಾ, ನ್ಯಾಯಾ ಸಿಗಲಿಲ್ಲ ಎಂಬ ನಿರಾಶೆಯಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.

  ಮೌಫಿಯಾ ತೋಡುಪುಳ್ಳಾದ ಖಾಸಗಿ ಕಾಲೇಜೊಂದರಲ್ಲಿ ಎಲ್​ಎಲ್​ಬಿ ಓದುತ್ತಿದ್ದಳು. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಾಮಾಸ್ಸೆರಿ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

  ಅಪ್ಪು ಅಗಲಿಕೆ ನೋವು ಇನ್ನೂ ಮಾಸಿಲ್ಲ… ಈಗಲೇ ಇದೆಲ್ಲಾ ಬೇಕಿತ್ತಾ? ಸುಮಲತಾ ಅಂಬರೀಷ್​ ಬೇಸರ

  ಮಾಸ್ಕ್‌ ಒಳಗೆ ಬ್ಯಾಟರಿ, ಚಾರ್ಜಿಂಗ್, ಸಿಮ್ ಕಾರ್ಡ್! ಕಾನ್ಸ್‌ಟೆಬಲ್‌ ನೇಮಕಾತಿ ಪರೀಕ್ಷೆಯ ಅಕ್ರಮದ ಪರಿ ಇದು…

  ಸಮಂತಾರ ಹಾದಿಯನ್ನೇ ಹಿಡಿದ ಪ್ರಿಯಾಂಕಾ ಚೋಪ್ರಾ! ಜಾಲತಾಣದಲ್ಲಿ ಸಿಡಿಯಿತು ಬಾಂಬ್​

  ನೇರಪ್ರಸಾರ: ಆಹಾ.. ಮೈಸೂರು ದಸರಾ ಎಷ್ಟೊಂದು ಸುಂದರಾ…

  0

  ದುಷ್ಟಶಕ್ತಿ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾಗಿ ಆಚರಿಸುವ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮದ ದೃಶ್ಯವನ್ನ ಕಣ್ತುಂಬಿಕೊಳ್ಳಿ. ಚಾಮುಂಡಿಬೆಟ್ಟದಲ್ಲಿ ಅ.7ರಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಂದ 411ನೇ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಇಂದು (ಅ.15) ಜಂಬೂಸವಾರಿ ಮೆರವಣಿಗೆಗೆ ಅರಮನೆ ಆವರಣ ಸಜ್ಜಾಗಿದೆ. ಸಂಜೆ 4.36ರಿಂದ 4.46ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಲಿದ್ದು, ಸಂಜೆ 5 ರಿಂದ 5.30ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿ ಮೇಲೆ ವಿರಾಜಮಾನಳಾಗುವ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ನೆರವೇರಿಸಿದ ನಂತರ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಮೈಸೂರು ದಸರಾ ಎಷ್ಟೊಂದು ಸುಂದರಾ… ಎಂಬುದನ್ನ ಕುಳಿತಲ್ಲೇ ಕಣ್ತುಂಬಿಕೊಳ್ಳಲು ‘ಮೈಸೂರು ದಸರಾ 2021’ ಶೀರ್ಷಿಕೆಯಡಿ ಸರ್ಕಾರವೇ ನೇರಪ್ರಸಾರ ಮಾಡುತ್ತಿದೆ.

  ಮೈಸೂರು ದಸರಾ: ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಮೆರವಣಿಗೆಯಲ್ಲಿ ಅರಮನೆಗೆ ಬಂದ ಉತ್ಸವ ಮೂರ್ತಿ

  ಮೈಸೂರಿನ ಜಂಬೂಸವಾರಿಯಲ್ಲಿ ಈ 6 ಸ್ತಬ್ಧಚಿತ್ರಗಳಿಗಷ್ಟೇ ಅವಕಾಶ

  ಮೈಸೂರಲ್ಲಿ ಜಂಬೂಸವಾರಿಗೆ ಕ್ಷಣಗಣನೆ: ವಿಜಯದಶಮಿ‌ ಪೂಜಾ ಕೈಂಕರ್ಯ ಶುರು, ಇಲ್ಲಿದೆ ಪೂರ್ಣ ಚಿತ್ರಣ

  ಟೋಕಿಯೋ ಒಲಿಂಪಿಕ್ಸ್: ಮೊದಲ ಸುತ್ತಿನಲ್ಲಿ ಗೆಲುವಿನ ನಗಾರಿ ಬಾರಿಸಿದ ಭಾರತದ ‘ನಗಾಲ್’

  ಟೋಕಿಯೋ: ಟೆನ್ನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್, ಉಜ್​​ಬೇಕಿಸ್ತಾನದ ಡೆನಿಸ್ ಇಸ್ಟೋಮಿನ್​ರನ್ನ ಸೋಲಿಸುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದ 2ನೇ ಸುತ್ತು ಪ್ರವೇಶಿಸಿದ್ದಾರೆ.

  ತೀವ್ರ ಹಣಾಹಣಿಯಿಂದ ಕೂಡಿದ ಇಂದು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ, ನಗಾಲ್ 6-4, 6-7, 6-4 ಸೆಟ್ ಅಂತರದಿಂದ ಡೆನಿಸ್​​ರನ್ನ ಪರಾಭವಗೊಳಿಸಿದ್ದಾರೆ.
  ಮೊದಲ ಸೆಟ್​​ನಲ್ಲಿ ಭಾರತೀಯ ಆಟಗಾರ ನಗಾಲ್ 6-4 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ಎರಡನೇ ಸೆಟ್ ​​ನಲ್ಲಿ ಉಜ್​​ಬೇಕಿಸ್ತಾನದ ಡೆನಿಸ್ ತೀವ್ರ ಪೈಪೋಟಿ ನೀಡುವ ಮೂಲಕ 6-7 ಅಂಕಗಳಿಂದ ಸಮಬಲ ಸಾಧಿಸಿದ್ದರು.

  ಅಂತಿಮ ಸೆಟ್​​ನಲ್ಲಿ ಎದುರಾಳಿ ತಂಡದ ಆಟಗಾರನ ಮೇಲೆ ಸವಾರಿ ಮಾಡಿದ ಸುಮಿತ್ 6-4 ಅಂಕಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಟೆನ್ನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ. (ಏಜೆನ್ಸೀಸ್)

  ಈ ಸಲ ಆನ್​ಲೈನ್​ನಲ್ಲೇ ಆಗಲಿ ಸುರಕ್ಷತಾ ಸಪ್ತಾಹ

  ರಾಜ್ಯದ ಶಿಕ್ಷಣ ಇಲಾಖೆ ಪ್ರತಿ ವರ್ಷ ಜೂನ್​ನಲ್ಲಿ ಮಕ್ಕಳ ಸುರತಾ ಸಪ್ತಾಹ ಆಚರಿಸುತ್ತ ಬಂದಿದೆ. ಈ ಸಪ್ತಾಹಕ್ಕೆ ಜೂ. 7ರಿಂದ 14ರವರೆಗೆ ದಿನಾಂಕ ನಿಗದಿಯಾಗಿದ್ದರೂ ಶಾಲೆಗಳು ಮತ್ತು ಸಂಸ್ಥೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆಬೇರೆ ದಿನಗಳಲ್ಲಿ ಆಚರಿಸುತ್ತವೆ. ಎಲ್ಲವೂ ಸರಿ ಇದ್ದಿದ್ದರೆ ಇಷ್ಟೊತ್ತಿಗೆ ಸಪ್ತಾಹ ಎಲ್ಲೆಡೆ ಸದ್ದು ಮಾಡುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಆಚರಣೆಯನ್ನು ಕೈಬಿಡಲಾಗಿದೆ.
  | ದೇವರಾಜ್​ ಕನಕಪುರ

  ಪ್ರತಿ ವರ್ಷ ಜೂನ್​ನಲ್ಲಿ ರಾಜ್ಯದ ಶಿಕ್ಷಣ ಇಲಾಖೆಯು ಪೊಲೀಸ್​ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜತೆಗೂಡಿ ಮಕ್ಕಳ ಸುರತೆ ಕುರಿತು ಬೀದಿಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ ಜನರ ಗಮನ ಸೆಳೆಯುತ್ತಿತ್ತು. ಸದ್ಯ ಕರೊನಾ ಲಾಕ್​ಡೌನ್​ನಿಂದಾಗಿ ಶಾಲಾ&-ಕಾಲೇಜುಗಳು ಮುಚ್ಚಿವೆ. ವಿದ್ಯಾರ್ಥಿಗಳಿಗೆ ಬೋಧನೆ, ಮುಖ್ಯ ಪರೀಕ್ಷೆ ಆಯೋಜಿಸುವುದೇ ಶಿಣ ಇಲಾಖೆಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸುರತಾ ಸಪ್ತಾಹ ಆಯೋಜನೆ ಕಷ್ಟಕರ. ಹಾಗಾಗಿ ಪರ್ಯಾಯ ಮಾರ್ಗವನ್ನೂ ಇಲಾಖೆ ಕಂಡುಕೊಳ್ಳದೆ ಈ ವರ್ಷ ಸಪ್ತಾಹಕ್ಕೆ ತಿಲಾಂಜಲಿ ಇತ್ತಿದೆ. ಇದೀಗ ಮಕ್ಕಳು ಮನೆಯಲ್ಲೇ ಇರುವುದರಿಂದ ಕರೊನಾ ಮೂರನೇ ಅಲೆ ಹಾಗೂ ಮನೆಯಲ್ಲಿ ನಡೆಯಬಹುದಾದ ದೌರ್ಜನ್ಯ ತಡೆ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಹಾಗಾಗಿ ಕನಿಷ್ಠ ಆನ್​ಲೈನ್​ ಮೂಲಕವಾದರೂ ಜಾಗೃತಿ ಕಾರ್ಯಕ್ರಮ ನಡೆಯಲಿ ಎಂಬುದು ಶಿಣ ತಜ್ಞರ ಅಭಿಪ್ರಾಯ.

  ಶಿಕ್ಷಣ ತಜ್ಞರ ಸಲಹೆಗಳೇನು?: ಮಕ್ಕಳ ಸುರತಾ ಸಪ್ತಾಹಕ್ಕಾಗಿ ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಮುಂತಾದ ಸಾಮಾಜಿಕ ಸಂವಹನ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಮಕ್ಕಳಿಗೆ ಜಾಹೀರಾತುಗಳ ಮೇಲೆ ಹೆಚ್ಚು ಆಸಕ್ತಿ. ಹಾಗಾಗಿ ಸಣ್ಣ ಜಾಹೀರಾತು ರೂಪಿಸಿ ಪ್ರಕಟಿಸಬೇಕು. ಆನ್​ಲೈನ್​ ಮೂಲಕ ಮಕ್ಕಳಿಗೆ ಚಟುವಟಿಕೆ ಮಾಡಿಸಬೇಕು. ಕರೊನಾ ಬಗ್ಗೆ ಭಯ ಬೇಡ ಎಂಬುದನ್ನು ಮನದಟ್ಟು ಮಾಡಿಸಬೇಕು. ಪಾಲಕರು ಮಕ್ಕಳ ಜತೆ ಕನಿಷ್ಠ 2 ಗಂಟೆಯಾದರೂ ಕಾಲ ಕಳೆಯಬೇಕು. ಮಕ್ಕಳಲ್ಲಿ ಲಿಂಗ ತಾರತಮ್ಯ ಕಾಣದಂತೆ ಎಚ್ಚರ ವಹಿಸಬೇಕು.

  ಮನೆಯಲ್ಲೂ ಸೇಫಲ್ಲ!: ಮಗು ಮನೆಯಲ್ಲಿದೆ ಎಂದ ಕಾರಣಕ್ಕೆ ದೌರ್ಜನ್ಯ ನಡೆಯುವುದಿಲ್ಲ ಎಂದು ಭಾವಿಸುವುದು ತಪ್ಪು. ಪಾಲಕರಿಂದ, ಸಂಬಂಧಿಕರಿಂದಲೂ ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿರುವ ಹಲವು ಪ್ರಕರಣಗಳು ವರದಿಯಾಗಿವೆ. ಮನೆಯಲ್ಲಿ ಮಕ್ಕಳ ವರ್ತನೆಯನ್ನು ಗಮನಿಸುವುದು, ಮನೆಯ ಇತರ ಸದಸ್ಯರ ಮೇಲೆ ನಿಗಾ ವಹಿಸುವುದು ಕೂಡ ಮುಖ್ಯ.

  ಮಕ್ಕಳು ಮನೆಯಲ್ಲಿರುವಾಗ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಅವರಿಗೆ ಸುರಕ್ಷಿತವಾಗಿರುವುದರ ಕುರಿತು ಅರಿವು ಮೂಡಿಸಬೇಕು. ಮುಖ್ಯವಾಗಿ ಕರೊನಾ ಮೂರನೇ ಅಲೆಯ ಬಗ್ಗೆ ತಿಳಿಸುವುದು ಉತ್ತಮ.
  |ವಿ.ಪಿ. ನಿರಂಜನಾರಾಧ್ಯ ಶಿಕ್ಷಣ ತಜ್ಞ
  ಮಕ್ಕಳ ಸುರಕ್ಷತಾ ಸಪ್ತಾಹವನ್ನು ಶಿಕ್ಷಣ ಇಲಾಖೆ ನಿಲ್ಲಿಸಬಾರದು. ಕನಿಷ್ಠ ಆನ್​ಲೈನ್​ ಮೂಲಕವಾದರೂ ಆಯೋಜಿಸಬೇಕು. ಮಕ್ಕಳಿಗೆ ಸುರಕ್ಷತೆ ಕುರಿತು ಅರಿವು ಮೂಡಿಸಬೇಕು.
  | ನಾಗಸಿಂಹ ಜಿ.ರಾವ್​ ಸಂಚಾಲಕ, ಮಕ್ಕಳ ಹಕ್ಕುಗಳ ಟ್ರಸ್ಟ್​

  ಹಿಂದಿನ ವರ್ಷ ಹೀಗಿತ್ತು…

  • ಶಾಲೆಗಳಲ್ಲಿ ಸುರಕ್ಷತಾ ಸಮಿತಿ ರಚನೆ
  • ಮಕ್ಕಳಿಗೆ ಸೂಕ್ತ ಶೌಚಗೃಹ
  • ಭಿತ್ತಿಪತ್ರ ಮುದ್ರಿಸಿ ಮಕ್ಕಳಿಗೆ ನೀಡುವುದು
  • ಸಿಸಿಟಿವಿ ಅಳವಡಿಕೆ
  • ಪೋಕ್ಸೋ ಕಾಯ್ದೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು
  • ಮಕ್ಕಳ ಸುರಕ್ಷತೆ ಯೋಜನೆ ಮತ್ತು ಕ್ರಿಯಾ ಯೋಜನೆ ರೂಪಿಸುವುದು
  • ಮಗುವಿನ ವರ್ತನೆ, ಪ್ರಗತಿ ಗುರುತಿಸುವುದು
  • ಶಾಲೆಗಳಲ್ಲಿ ಸುರಕ್ಷತಾ ಕ್ರಮ ಅನುಸರಿ ಸಿರುವ ಬಗ್ಗೆ ಇಲಾಖೆ ಖಾತ್ರಿ ಪಡಿಸುವುದು

  ಯಾವ್ಯಾವ ವಿಷಯದಲ್ಲಿ ಜಾಗೃತಿ ಅಗತ್ಯ?
  ಶಾಲೆಗೆ ಹೋಗುವಾಗ ಮತ್ತು ಮನೆಗೆ ಮರಳುವಾಗ ರಸ್ತೆ ದಾಟುವ ವೇಳೆ ಅಪಘಾತವಾಗದಂತೆ ಹೇಗೆ ಎಚ್ಚರ ವಹಿಸಬೇಕು, ಬೈಸಿಕಲ್​ ಓಡಿಸುವಾಗ, ಶಾಲೆಯ ಬಳಿ ಅಪರಿಚಿತರೊಂದಿಗೆ ವ್ಯವಹರಿಸುವಾಗ, ಮನೆಯಲ್ಲಿ ಗ್ಯಾಸ್​ ಸ್ಟವ್​ ಹೊತ್ತಿಸುವಾಗ, ಕುಕ್ಕರ್​, ಚಾಕು ಬಳಸುವಾಗ, ನಾಣ್ಯಗಳೊಂದಿಗೆ ಆಡುವಾಗ, ಗಾಜಿನ ವಸ್ತುಗಳನ್ನು ಉಪಯೋಗಿಸುವಾಗ, ಪಾಲಕರ ಮೊಬೈಲ್​ ಫೋನ್​ ತೆಗೆದುಕೊಂಡಾಗ, ಫಿನೈಲ್​ ಮತ್ತಿತರ ಗೃಹಬಳಕೆ ವಸ್ತುಗಳ ವಿಷಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಮುಂತಾಗಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಬೇಕಾದ ನೂರೆಂಟು ವಿಷಯಗಳಿವೆ.

  LIVE| ನಟ ಚಿರು ವಿಧಿವಶ- ಅಭಿಮಾನಿಗಳಿಂದ ಅಂತಿಮ ನಮನ : ಅಪರಾಹ್ನ ನಡೆಯಲಿದೆ ಅಂತ್ಯಸಂಸ್ಕಾರ

  ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ(39) ನಿನ್ನೆ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದು, ಅವರ ಅಂತ್ಯ ಸಂಸ್ಕಾರ ಇಂದು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಫಾರ್ಮ್​ ಹೌಸ್​ನಲ್ಲಿ ನಡೆಯಲಿದೆ. ಈ ಸಂಬಂಧ ಸಿದ್ಧತೆಗಳು ನಡೆದಿದೆ.

  ಇದನ್ನೂ ಓದಿ: ‘ಚಿರಂಜೀವಿ’ ಎಂದು ಹೆಸರಿಟ್ಟುಕೊಂಡು ಅಕಾಲಿಕವಾಗಿ ಅಗಲಿದರು’; ಬಿಕ್ಕಿಬಿಕ್ಕಿ ಅತ್ತರು ನಟಿ ತಾರಾ…

  ಚಿರಂಜೀವಿ ಸರ್ಜಾ ಅವರ ಮೃತದೇಹ ಜಯನಗರದ ಸಾಗರ್​ ಅಪೋಲೋ ಆಸ್ಪತ್ರೆಯಿಂದ ಬಸವನಗುಡಿಯಲ್ಲಿರುವ ಅವರ ಸ್ವಗೃಹಕ್ಕೆ ತಂದ ಬಳಿಕ ಬೆಳಗಿನ ಜಾವದವರೆಗೂ ಸಾವಿರಾರು ಅಭಿಮಾನಿಗಳು ಚಿರು ಅಂತಿಮ ದರ್ಶನ ಪಡೆದರು. ನಟ ಅರ್ಜುನ್ ಸರ್ಜಾ ರಾತ್ರಿ ಇಡೀ ಅಳಿಯನ ಪಾರ್ಥಿವ ಶರೀರದ ಎದುರೇ ದುಃಖಿತರಾಗಿ ಕುಳಿತಿದ್ದರು. ಸಾಧುಕೋಕಿಲ ಅವರು ಅರ್ಜುನ್​ ಅವರ ಜತೆಗಿದ್ದರು. ಇಂದು ಮಧ್ಯಾಹ್ನ 12 ಗಂಟೆ ತನಕ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕುಟುಂಬದವರು ತೀರ್ಮಾನಿಸಿದ್ದಾರೆ.

  ಇದನ್ನೂ ಓದಿ:  ಮನೆಗೆ ತಲುಪಿದ ಚಿರು ಪಾರ್ಥಿವ ಶರೀರ; ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ ನಟ ದರ್ಶನ್​

  ಮಧ್ಯಾಹ್ನ 12 ಗಂಟೆ ನಂತರ ನೆಲಗುಳಿ ಗ್ರಾಮದ ಫಾರ್ಮ್​ ಹೌಸ್​ಗೆ ಅಂತಿಮ ಯಾತ್ರೆ ಮೆರವಣಿಗೆ ಮೂಲಕ ಸಾಗಲಿದೆ. ಅಲ್ಲಿ ಗೌಡ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಆಪ್ತಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

  ಅಳಿಯನ ಸಾವಿನ ಬೆನ್ನಲ್ಲೇ ಫೇಸ್​ಬುಕ್​ ಕವರ್​, ಪ್ರೊಫೈಲ್​ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್​ ಸರ್ಜಾ

  ಮಾವು ಪ್ರದರ್ಶನ & ಮಾರಾಟ ಮೇಳಕ್ಕೆ ಡಿಸಿ ಜಾನಕಿ ಚಾಲನೆ

  ಬಾಗಲಕೋಟೆ: ಬಾಗಲಕೋಟೆ ವಿದ್ಯಾಗಿರಿಯ ಕಾಳಿದಾಸ ಕಲ್ಯಾಣ ಮಂಟಪದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಶುಕ್ರವಾರ ಚಾಲನೆ ನೀಡಿದರು.

  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಾವು ಮೇಳಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ರೈತರಿಂದಲೇ ನೇರವಾಗಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಕೃತಕವಾಗಿ ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಿ ಬೇಗ ಮಾಗುವಂತೆ ಮಾಡಿ ಮಾರಾಟದಿಂದ ಆರೋಗ್ಯಕ್ಕೆ ಹಾನಿಯಾಗಿರುವ ಪ್ರಕರಣ ನಡೆದಿದೆ. ಆದರೆ ಈ ಮೇಳದಲ್ಲಿ ರೈತರೇ ತಾವು ಬೆಳೆದ ಮಾವಿನ ಹಣ್ಣನ್ನು ಮಾರುತ್ತಿರುವುದರಿಂದ ಉತ್ತಮ ಗುಣಮಟ್ಟದ ಹಣ್ಣುಗಳಾಗಿವೆ. ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದು, ಮಾವು ಪ್ರಿಯರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.

  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಇಲ್ಲಿ ವಿವಿಧ ಬಗೆಯ ಮಾವುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇನ್ನು ಕೆಲವು ಬಗೆಯ ಮಾವುಗಳನ್ನು ಜನರ ಅರಿವಿಗೆ ಪ್ರದರ್ಶನಕ್ಕೆ ಇಡಲಾಗಿದೆ. ಮೇಳದಲ್ಲಿ ಬೇರೆ ಜಿಲ್ಲೆಯ ಬೆಳಗಾವಿ, ದಾರವಾಡದಿಂದ ರೈತರು ಮಾರಾಟಕ್ಕೆ ಮಾವುಗಳನ್ನು ತಂದಿದ್ದಾರೆ. ಅಲ್ಲದೇ ಜಿಲ್ಲೆಯ ಮುಧೋಳ, ಜಮಖಂಡಿ, ಬೀಳಗಿ ಹಾಗೂ ಬಾಗಲಕೋಟೆಯ ರೈತರ ಬೆಳೆದ ಮಾವು ಮೇಳದಲ್ಲಿ ಸಿಗುತ್ತವೆ. ಶನಿವಾರ ಮತ್ತು ಭಾನುವಾರ ಕೂಡಾ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

  ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಬಸವರಾಜ ಗೌಡನ್ನವರ, ಗಣೇಶ ಪಟ್ಟಣಶೆಟ್ಟಿ, ಬಸವರಾಜ ಬೇನಾಳ ಸೇರಿದಂತೆ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

  ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಅವಧಿ ಮೀರಿದ ಆಹಾರ ಪದಾರ್ಥ, ನಿಯಮ ಉಲ್ಲಂಘನೆ ಪತ್ತೆ

  ಹೈದರಾಬಾದ್: ಕಳೆದ ಕೆಲ ತಿಂಗಳ ಹಿಂದೆ ಬಾಂಬ್​ ಸ್ಫೋಟದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ ದಿ ರಾಮೇಶ್ವರಂ ಕೆಫೆ ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ದಕ್ಷಿಣ ಭಾರತದ ಉಪಹಾರಕ್ಕೆ ಹೆಸರುವಾಸಿಯಾದ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ವಿಭಾಗವು ದಾಳಿ ನಡೆಸಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸೀಜ್​ ಮಾಡಿದ್ದಾರೆ.

  ತೆಲಂಗಾಣ ರಾಜಧಾನಿ ಹೈದರಾಬಾದ್ ಪ್ರತಿಷ್ಠಿತ ಹೋಟೆಲ್​ಗಳ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಹೈದರಾಬಾದ್ದ್​​ನ ಸಂಜೀವರೆಡ್ಡಿ ನಗರದಲ್ಲಿರುವ ಹೊಟೆಲ್ ಸಾಯಿ ಬೃಂದಾವನ್, ಉಪ್ಪಾಲ್​ನಲ್ಲಿರುವ ಮಾಸ್ಟರ್ ಚೆಫ್ ರೆಸ್ಟೋರೆಂಟ್, KFC, ಸೋಮಾಜಿಗೂಡದಲ್ಲಿರುವ ಕೃತುಂಗಾ ದಿ ಪಾಳೇಗಾರ್ಸ್ ಕ್ಯುಸಿನ್ ಹೋಟೆಲ್, ಬಂಜಾರ್ ಹಿಲ್ಸ್ ನಲ್ಲಿರುವ ಬಾಸ್ಕಿನ್ ರಾಬಿನ್ಸ್, ಮಾಧಾಪುರ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆ ಸೇರಿದಂತೆ ಹಲವು ಹೊಟೆಲ್​ಗಳ ಮೇಲೆ ದಾಳಿ ನಡೆಸಿದ್ದಾರೆ.

  ದಾಳಿಯ ವೇಳೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಹಲವಾರು ಆಹಾರ ಸುರಕ್ಷತಾ ಉಲ್ಲಂಘನೆಗಳನ್ನು ಪತ್ತೆ ಮಾಡಿದ್ದಾರೆ. ಈ ರೆಸ್ಟೋರೆಂಟ್‌ನಲ್ಲಿ ಅವಧಿ ಮುಗಿದ ಮತ್ತು ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಕೂಡಲೇ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

  ಇದನ್ನೂ ಓದಿ: ಪುತ್ರ ಯತೀಂದ್ರಗೆ MLC ಪೋಸ್ಟ್​; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

  ಆಹಾರ ಸುರಕ್ಷತಾ ಇಲಾಖೆ ಪ್ರಕಾರ, 16,000 ಮೌಲ್ಯದ 100 ಕೆಜಿ ಉದ್ದಿನ ಬೇಳೆ, 10 ಲೀಟರ್​ ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅವಧಿ ಮುಗಿದಿದ್ದು, ಈ ಎಲ್ಲಾ ವಸ್ತುಗಳು ಅಡುಗೆಮನೆಯಲ್ಲಿ ಕಂಡುಬಂದಿದೆ. ಇದಲ್ಲದೆ ಸರಿಯಾಗಿ ಲೇಬಲ್ ಮಾಡಿದ 450 ಕೆಜಿ ಅಕ್ಕಿ, 20 ಕೆಜಿ ಬಿಳಿ ಅಲಸಂದೆ ಮತ್ತು 300 ಕೆಜಿ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.

  ಅಲ್ಲದೇ, ಕೆಫೆಯ ಆಹಾರ ಖಾದ್ಯ ನಿರ್ವಹಣೆ ಮಾಡುವವರು ತಮ್ಮ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಕೆಫೆಯಲ್ಲಿನ ಕಸದಬುಟ್ಟಿಗಳನ್ನು ಮುಚ್ಚಳದಿಂದ ಮುಚ್ಚಿರಲಿಲ್ಲ. ದಾಳಿ ನಡೆಸಿದ ಬಹುತೇಕ ಎಲ್ಲ ಹೊಟೆಲ್ ಗಳ ಪರಿಸ್ಥಿತಿ ಇದೇ ಆಗಿದ್ದು, ಅವಧಿ ಮೀರಿದ ಆಹಾರೋತ್ಪನ್ನಗಳು, ಶುಚಿತ್ವ ಕೊರತೆ, ಸಿಬ್ಬಂದಿಗಳ ಸಮಸ್ಯೆಗಳಿಂದ ಕೂಡಿವೆ ಎಂದು ಆಹಾರ ಇಲಾಖೆ ತನ್ನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

  ಮಳೆ, ಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರಕ್ಕೆ ಕ್ರಮ

  ಬಾಗಲಕೋಟೆ: ಜಿಲ್ಲೆಯಲ್ಲಿ ಗುರುವಾರ ಸುರಿದ ಬಾರಿ ಮಳೆ ಹಾಗೂ ಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಜಾನಕಿ ಕೆ.ಎಂ ತಿಳಿಸಿದ್ದಾರೆ.

  ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಹಾನಿಯಾದ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಭೇಟಿ ನೀಡಿ ಹಾನಿ ಸಂಪೂರ್ಣ ವರದಿಯಲ್ಲಿ ನೀಡಲು ಸೂಚಿಸಿದ್ದು, ವರದಿ ಆದಾರದ ಮೇಲೆ ಸೂಕ್ತ ಪರಿಹಾರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದ 17 ವರ್ಷದ ಕವಿತಾ ಬಸಪ್ಪ ಹರಳಿ ಸಿಡಿಲು ಬಡಿದು ಮಹಾಲಿಂಗಪೂರದ ಕನಕರೆಡ್ಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸಲು ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

  ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ಗ್ರಾಮದಲ್ಲಿ 2 ಎಮ್ಮೆಗಳು ಸಿಡಿಲಿಗೆ ಮೃತಪಟ್ಟಿದ್ದು, ತಲಾ 37500 ರೂ.ಗಳಂತೆ ಪರಿಹಾರ ಕೂಡಲೇ ಪಾವತಿಗೆ ತಹಶೀಲ್ದಾರ ಅಮರೇಶ ಪಮ್ಮಾರಗೆ ಸೂಚಿಸಲಾಗಿದೆ. ಬಾಗಲಕೋಟೆ ತಾಲೂಕಿನ 3, ರಬಕವಿ-ಬನಹಟ್ಟಿಯಲ್ಲಿ 6, ಬಾದಾಮಿ 1, ಜಮಖಂಡಿ 2 ಸೇರಿ ಒಟ್ಟು 12 ಮನೆಗಳು ಭಾಗಶಃ ಹಾನಿಯಾಗಿವೆ. ಅಲ್ಲದೇ ಬಾಗಲಕೋಟೆ ತಾಲೂಕಿನಲ್ಲಿ 16 ಪತ್ರಸ್ ಶೆಡ್‍ಗಳು ಸಹ ಹಾನಿಯಾಗಿರುವ ಬಗ್ಗೆ ಬಂದಿದ್ದು, ಕಂದಾಯ, ಪಂಚಾಯತ ರಾಜ್ ಇಂಜಿನೀಯರಗಳ ಕುರಿತು ಜಂಟಿ ಸಮೀಕ್ಷೆ ಕೈಗೊಂಡು ನಿಯಮಾನುಸಾರ ಪರಿಹಾರಕ್ಕೆ ತಹಶೀಲ್ದಾರರಿಗೆ ಸೂಚಿಸಲಾಗಿದೆ.

  ತಾಲೂಕಿನ ಕಲಾದಗಿ ಗ್ರಾಮದಲ್ಲಿ 2.24 ಎಕರೆ ಪ್ರದೇಶದಲ್ಲಿ ಬೆಳೆದ ದಾಳಿಂಬೆ ಬೆಳೆ ಹಾನಿಯಾಗಿದ್ದು, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲು ಸೂಚಿಸಲಾಗಿದೆ. ಹಾನಿಯಾದ ಬೆಳೆಗೆ ಸೂಕ್ತ ಪರಿಹಾರಕ್ಕೆ ಕ್ರಮವಹಿಸಲಾಗುವುದೆಂದು ತಿಳಿಸಿದ್ದಾರೆ. ಅಲ್ಲದೇ ಬಾಗಲಕೋಟೆ ತಾಲೂಕಿನ ತುಳಸಿಗೇರಿ, ದೇವನಾಳ, ಕೆರಕಲಮಟ್ಟಿ ಸೇರಿದಂತೆ ಇತರೆ ಭಾಗದಲ್ಲಿ ಹಾನಿ ಸಂಭವಿಸಿದ್ದು, ಅಧಿಕಾರಿಗಳು ಭೇಟಿ ನೀಡಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

  ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಿ

  ರಾಯಚೂರು: ಶೈಕ್ಷಣಿಕ ವರ್ಷದ ಆರಂಭಕ್ಕೆ ಮುಂಚೆಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಸೇವೆಯನ್ನು ವರ್ಷವೀಡಿ ಪರಿಗಣಿಸಬೇಕು ಎಂದು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಸಂಘ ಒತ್ತಾಯಿಸಿದೆ.
  ಸಂಘದ ನಿಯೋಗ ಕ್ಷೇತ್ರ ಶಿಕ್ಷಣಾಕಾರಿ ಚಂದ್ರಶೇಖರ ಭಂಡಾರಿಗೆ ಮನವಿ ಸಲ್ಲಿಸಿ, ಪ್ರತಿ ವರ್ಷ ಶೈಕ್ಷಣಿಕ ವರ್ಷ ಆರಂಭವಾದ ಬಹುದಿನಗಳ ನಂತರದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆರಂಭದಲ್ಲಿಯೇ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
  ತಾಲೂಕಿನಲ್ಲಿ ಸಾವಿರಾರೂ ಶಿಕ್ಷಕರ ಕೊರತೆಯಿದ್ದು, ಮಕ್ಕಳ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಲ್ಲಿ ಬೋಧನೆಗೆ ಅನುಕೂಲವಾಗಲಿದೆ. ಸೇವೆಯನ್ನು ವರ್ಷವೀಡಿ ಪರಿಗಣಿಸಿ ಸಮಯಕ್ಕೆ ಸರಿಯಾಗಿ ಗೌರವಧನ ಪಾವತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
  ನಿಯೋಗದಲ್ಲಿ ಸಂಘದ ಅಧ್ಯಕ್ಷ ನರಸಿಂಹ ಮಲಯಾಬಾದ್, ಗೌರವಾಧ್ಯಕ್ಷ ಲಕ್ಷ್ಮಿ ನಾಯಕ, ಪದಾಕಾರಿಗಳಾದ ಪ್ರಶಾಂತ, ಸಾಕ್, ರವಿ, ತಿಮ್ಮಪ್ಪ ಅನ್ವರ್, ಭೀಮಣ್ಣ, ಮಲ್ಲಿಕಾರ್ಜುನ ಇದ್ದರು.

  ಐಸಿಎಐ: ಜೂ.27ರಿಂದ ಬೆಂಗಳೂರಿನಲ್ಲಿ ನವೋದ್ಯಮ ಸಮಾವೇಶ

  ಬೆಂಗಳೂರು: ನವೋದ್ಯಮಗಳಿಗೆ ಉತ್ತೇಜನ ನೀಡುವುದು ಹಾಗೂ ಹೊಸದಾಗಿ ನವೋದ್ಯಮ ಆರಂಭಿಸುವವರಿಗಾಗಿ ಭಾರತೀಯ ಲೆಕ್ಕಪರಿಸೋಧಕರ ಸಂಸ್ಥೆ (ಐಸಿಎಐ) ಬೆಂಗಳೂರಿನಲ್ಲಿ ಜೂ.27ರಿಂದ 29ರವರೆಗೆ ‘ಸ್ಟಾರ್ಟಪ್ ಸಮಾವೇಶ – 2024’ ಆಯೋಜಿಸಿದೆ.

  ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸಿಎ ರಂಜೀತ್ ಕುಮಾರ್ ಅಗರವಾಲ್ ಈ ವಿಷಯ ತಿಳಿಸಿದರು. ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ, ನವೋದ್ಯಮ ಸಮಿತಿ ಜಂಟಿಯಾಗಿ ಅಂತಾರಾಷ್ಟೀಯ ವಾಣಿಜ್ಯ ಸೇವೆ ಹಾಗೂ ವಿಶ್ವ ವಾಣಿಜ್ಯ ಸಂಘಟನೆಯ ನಿರ್ದೇಶನಾಲಯ ಸಹಯೋಗದೊಂದಿಗೆ ‘ಐಸಿಎಐ ಸ್ಟಾರ್ಟಪ್ ಸ್ಪಿಯರ್ -2024’ಅನ್ನು 3 ದಿನಗಳ ಕಾಲ ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ. ಕರ್ನಾಟಕ ವ್ಯಾಪಾರ ಉತ್ತೇಜನ ಸಂಸ್ಥೆ (ಕೆಟಿಪಿಒ) ಕೂಡ ನೆರವಾಗುತ್ತಿದೆ ಎಂದರು.

  ಮೂರು ದಿನಗಳ ಸಮಾವೇಶದಲ್ಲಿ ನವೋದ್ಯಮಗಳನ್ನು ಈಗಾಗಲೆ ಆರಂಭಿಸಿದವರು ಹಾಗೂ ಹೊಸದಾಗಿ ಆರಂಭಿಸುವವರಿಗೆ ಕಾರ್ಯಗಾರ, ವಿಚಾರ ಸಂಕಿರಣ, ಅನುಭವ ಹಾಗೂ ಜ್ಞಾನದ ವಿನಿಮಯ, ಕೌಶಲ ಅಭಿವೃದ್ದಿ ಮತ್ತು ಉದ್ಯಮ ಆರಂಭಿಸಲು ಬೇಕಾದ ಪೂರ್ವತಯಾರಿ ಕುರಿತು ಪೂರ್ಣ ಮಾಹಿತಿ ನೀಡಲಾಗುವುದು. 200ಕ್ಕೂ ಅಧಿಕ ನವೋದ್ಯಮಗಳು ಹಾಗೂ 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು 200 ದಶಲಕ್ಷಕ್ಕೂ ಅಧಿಕ ಬಂಡವಾಳ ನವೋದ್ಯಮಗಳಿಗೆ ಹರಿದುಬರುವ ಸಾಧ್ಯತೆ ಇದೆ ಎಂದು ರಂಜಿತ್‌ಕುಮಾರ್ ತಿಳಿಸಿದರು.

  ಸಮಸ್ತ ಜೀವಿಗಳಿಗೂ ಸುಖ ಪ್ರಾಪ್ತಿಯಾಗಲಿ: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಾರ್ಥನೆ

  ಮೈಸೂರು: ಸಮಸ್ತ ಜೀವಿಗಳಿಗೂ ಸುಖ ಪ್ರಾಪ್ತಿಯಾಗಲಿ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಾರ್ಥಿಸಿದ್ದಾರೆ.

  ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವದ ಸಂದರ್ಭದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂಭಾಭಿಷೇಕ ಕಾರ್ಯಕ್ರಮದ ವೇಳೆ ಭಕ್ತರಿಗೆ ಅವರು ಆಶೀರ್ವಚನ ನೀಡಿದರು.

  ಕ್ರೋಧ, ಮತ್ಸರ, ಕಷ್ಟ ಕೋಟಲೆಗಳು ಜನರಿಂದ ದೂರವಾಗಲಿ. ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ನಾಡು ಸುಭಿಕ್ಷವಾಗಲಿ. ಜನರ ದುಃಖ ಕಡಿಮೆಯಾಗಲಿ. ರಾಜ್ಯ, ದೇಶ ಅಭಿವೃದ್ಧಿಯಾಗಲಿ. ಪ್ರಜೆಗಳು ಮತ್ತು ಪ್ರಜಾ ಪ್ರತಿನಿಧಿಗಳಿಗೆ ಶಾಂತಿ ಸಿಗಲಿ, ಜನರ ಕಷ್ಟವನ್ನು ನೋಡಿ, ಅವುಗಳನ್ನು ಪರಿಹರಿಸಲಿ ಎಂದು ಆ ವೆಂಕಟರಮಣನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸ್ವಾಮೀಜಿ ನುಡಿದರು.

  ಜನರಲ್ಲಿ ಇತ್ತೀಚೆಗೆ ಕ್ರೋಧ ಹೆಚ್ಚಾಗುತ್ತಿದೆ. ಶಾಂತಿ ಇಲ್ಲದಂತಾಗಿದೆ. ಕಲಿಯುಗದ ದೇವರು ವೆಂಕಟರಮಣ. ಅವನನ್ನು ಪ್ರಾರ್ಥಿಸಿದರೆ ಸುಖ, ಐಶ್ವರ್ಯ, ಶಾಂತಿ ಸಿಗಲಿದೆ. ಕಡು ಬಡವರೂ ಶ್ರೀಮಂತರಾಗುತ್ತಾರೆ ಆದರೆ. ಆ ದೇವನಿಗೆ ನೆಮ್ಮದಿಯಿಂದ ಪ್ರಾರ್ಥನೆ ಮಾಡಿ, ಅವನ ಸ್ಮರಣೆ ಮಾಡಿ ಎಂದು ಸ್ವಾಮೀಜಿ ತಿಳಿಹೇಳಿದರು.

  ಇನ್ನಾದರೂ ಜಾಗೃತರಾಗಿ, ಎದ್ದೇಳಿ, ದೇವರ ಸ್ಮರಣೆ ಮಾಡಿ ಆಯಸ್ಸು,ಆರೋಗ್ಯ, ಸಂಪತ್ತು ಕರುಣಿಸುತ್ತಾನೆ ಕಲಿಯುಗದ ದೈವ ವೆಂಕಟರಮಣ ಅವನನ್ನು ನೆನೆಯಿರಿ,ನಾನೂ ಕೂಡಾ ಅವನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.

  ಕುಂಭಾಭಿಷೇಕ: ಅವಧೂತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೆಂಕಟೇಶ್ವರ ಸನ್ನಿಧಿಯಲ್ಲಿ ಕುಂಭಾಭಿಷೇಕ ವಿಜೃಂಭಣೆಯಿಂದ ನೆರವೇರಿಸಲಾಯಿತು.

  ಇದಕ್ಕೂ ಮೊದಲು ವಜ್ರೋತ್ಸವ ಯಾಗಮಂಟಪದಲ್ಲಿ ಪ್ರಧಾನಯಾಗವನ್ನು ನೆರವೇರಿಸಲಾಯಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೋಮ ಕಾರ್ಯದಲ್ಲಿ ಪಾಲ್ಗೊಂಡು ಪೂರ್ಣಾಹುತಿ ಸಮರ್ಪಿಸಿದರು. ನಂತರ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ದತ್ತ ವೆಂಕಟೇಶ್ವರ ದೇವಾಲಯದ ಮೇಲ್ಬಾಗಕ್ಕೆ ತೆರಳಿ ಆಗಮ ಪಂಡಿತರ ಸಮ್ಮುಖದಲ್ಲಿ ವಿವಿಧ ನದಿಗಳಿಂದ ತರಲಾಗಿದ್ದ ಶುದ್ಧ ಜಲದಿಂದ ದೇವಾಲಯಗಳ ಶಿಖರಗಳಿಗೆ ಮಹಾ ಕುಂಭಾಭಿಷೇಕ ನೆರವೇರಿಸಿದರು. ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೂಡಾ ಕುಂಭಾಭಿಷೇಕ ನೆರವೇರಿಸಿದರು.

  ನಂತರ ಗಣಪತಿ ಶ್ರೀಗಳು ದೇವತಾ ಮೂರ್ತಿಗಳಿಗೆ ಬ್ರಹ್ಮಕಲಶ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.

  ಪಡ್ಡು ಮಾರಿ ಜೀವನ ಕಟ್ಟಿಕೊಂಡಿದ್ದರು; ಮುಗಿಲು ಮುಟ್ಟಿದ ಆಕ್ರಂದನ

  ಹಾವೇರಿ: ರಾಣೆಬೆನ್ನೂರ ಹೊರವಲಯ ಹಲಗೇರಿ ಕ್ರಾಸ್ ಬ್ರಿಡ್ಜ್ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟ ಸುರೇಶ ಜಾಡಿ ಕುಟುಂಬಸ್ಥರು ಹಾವೇರಿ ಬಸ್ ನಿಲ್ದಾಣದ ಬಳಿ ಪಡ್ಡು ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದರು.
  ಕಳೆದ 20 ವರ್ಷಗಳ ಹಿಂದೆ ಹಾವೇರಿ ನಗರಕ್ಕೆ ಆಗಮಿಸಿದ ಸುರೇಶ ಅವರು ಶ್ರದ್ಧೆಯಿಂದ ಬೀದಿಬದಿ ವ್ಯಾಪಾರ ಮಾಡುತ್ತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಂತರ ಪರಿಶ್ರಮದಿಂದ ಅಶ್ವಿನಿ ನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ಇತರರಿಗೆ ಮಾದರಿ ಎನಿಸಿದ್ದರು. ಎಲ್ಲರೊಂದಿಗೆ ಅತ್ಯಂತ ಸ್ನೇಹಮಯವಾಗಿ ಇರುತ್ತಿದ್ದರು. ಹಿಂದಿನ ದಿನ ಸುರೇಶ ಅವರ ಮೊಮ್ಮಗಳು ಚೇತನಾಳ ಆಟ, ನಗು ಕಂಡಿದ್ದ ಸ್ಥಳೀಯರು ಆಕೆಯ ಸಾವು ಕಂಡು ಕಣ್ಣೀರಾದರು. ಇಂತಹ ದುರಂತ ನಡೆದಿದ್ದು ಅತೀವ ದುಖಃ ತಂದಿದೆ ಎನ್ನುತ್ತಾರೆ ಸ್ಥಳೀಯರು ಹಾಗೂ ಸಂಬಂಧಿಕರು.
  ಮುಗಿಲು ಮುಟ್ಟಿದ ಆಕ್ರಂದನ
  ಅಪಘಾತದಲ್ಲಿ ಮೃತಪಟ್ಟ ಸುರೇಶ ಜಾಡಿ, ಪವಿತ್ರಾ ಸಮಗೊಂಡಿ, ಚೇತನಾ ಸಮಗೊಂಡಿ ಮೃತದೇಹ ಹಾವೇರಿಯ ನಿವಾಸಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂತಸದಿಂದ ಕ್ರಿಯಾಶೀಲವಾಗಿದ್ದ ಕುಟುಂಬದ ಮೂವರ ಸಾವು ಕಂಡು ಅಕ್ಕಪಕ್ಕದವರು ಮಮ್ಮಲಮರುಗಿದರು.

  ಪ್ರತಿಯೊಬ್ಬ ವಿದ್ಯಾರ್ಥಿಯು ಪದವಿಯನ್ನು ಪಡೆದು ಸಮಾಜದ ಏಳಿಗೆಗೆ ಶ್ರಮಿಸಬೇಕು

  ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯು ಪದವಿಯನ್ನು ಪಡೆದು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ದಿ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಹೇಳಿದರು.

  ನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪದವಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಸಮಾಜ ನಿರ್ಮಾಣದಲ್ಲಿ ಪದವೀಧರರ ಪಾತ್ರ ಅತೀ ಮುಖ್ಯವಾದುದಾಗಿದೆ ಎಂದರು.

  ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಈ ನಿಟ್ಟಿಲ್ಲಿ ಎಲ್ಲರೂ ಶ್ರಮ ವಹಿಸಿ ಪ್ರಯತ್ನ ಪಡಬೇಕು ಎಂದರು.

  ಟ್ರಸ್ಟ್‌ನ ಕಾರ್ಯದರ್ಶಿ ಕುಬೇರ್ ಪಿ. ಗೌಡ ಮಾತನಾಡಿ, ಇಂದಿನ ಯುವ ಸಮೂಹ ಸ್ನಾತಕೋತ್ತರ ಪದವಿಗೆ ಮಾತ್ರ ಶಿಕ್ಷಣ ಕೊನೆಗಳಿಸಬಾರದು. ಸಂಶೋಧನೆಯನ್ನು ಮಾಡಿ ಈ ದೇಶದ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಬೇಕು. ಜೊತೆಗೆ ನಿಮ್ಮ ತಂದೆ ತಾಯಿ ಹಾಗೂ ನಿಮ್ಮ ಊರಿಗೆ ಒಳ್ಳೆಯ ಕೀರ್ತಿಯನ್ನು ತರಬೇಕೆಂದು ತಿಳಿಸಿದರು.

  ಸೊಳ್ಳೆ ಉತ್ಪತ್ತಿ ತಾಣಗಳ ಮೇಲೆ ನಿಗಾವಹಿಸಿ; ಡೆಂಘೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ * ಅಧಿಕಾರಿಗಳಿಗೆ ಡಿಸಿ ರಘುನಂದನ ಮೂರ್ತಿ ಸೂಚನೆ

  ಹಾವೇರಿ: ಮಳೆಗಾಲ ಆರಂಭವಾಗಿರುವ ಕಾರಣ ಅಲ್ಲಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದರಿಂದ ಡೆಂಘೆ, ಮತ್ತಿತರ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಸೊಳ್ಳೆ ಉತ್ಪತ್ತಿ ತಾಣಗಳ ಮೇಲೆ ತೀವ್ರ ನಿಗಾವಹಿಸಿ ನಾಶಪಡಿಸಬೇಕು ಹಾಗೂ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಡೆಂೆ ನಿಯಂತ್ರಣ ಮಾಡಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಜಿಲ್ಲಾ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಸ್ಪತ್ರೆಗಳು, ಸರ್ಕಾರಿ ಕಟ್ಟಡಗಳ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಲಾ- ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳ ಮೇಲ್ಛಾವಣಿಗಳನ್ನು ಸ್ವಚ್ಛಗೊಳಿಸಿ ಎಂದು ಸೂಚಿಸಿದರು.
  ಆರೋಗ್ಯ ಇಲಾಖೆ ಅಧಿಕಾರಿಗಳು ಸಾರಿಗೆ ಡಿಪೋಗಳಿಗೆ ಭೇಟಿ ನೀಡಿ ಟಯರ್‌ಗಳಲ್ಲಿ ನೀರು ನಿಲ್ಲದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು. ಟಯರ್‌ನಲ್ಲಿ ನೀರು ನಿಲ್ಲಂತೆ ಸೂಕ್ತ ಕ್ರಮಕೈಗೊಳ್ಳಿ ಎಂದರು. ಸ್ಥಳೀಯ ನಗರ ಸಂಸ್ಥೆಗಳ ಅಧಿಕಾರಿಗಳು ನಗರ ಪಟ್ಟಣಗಳ ಗಟಾರ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ತಹಸೀಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಡೆಂಘೆ ನಿಯಂತ್ರಣ ಮಾಡಬೇಕು. ಸ್ವಚ್ಛತಾ ಕಾರ್ಯವನ್ನು ತಮ್ಮ ಕಚೇರಿಂದಲೇ ಆರಂಭಿಸಿ. ಫಾಗಿಂಗ್ ಮಷಿನ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ, ಜಾಗೃತಿ ಕಾರ್ಯಕ್ರಮಕ್ಕೆ ಆಶಾ ಹಾಗೂ ಇತರೆ ಸಿಬ್ಬಂದಿ ಬಳಸಿಕೊಂಡು ನರೇಗಾ ಕಾಮಗಾರಿ ಸೇರಿದಂತೆ ಜನದಟ್ಟಣೆ ಇರುವ ಕಡೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
  ಸಭೆಯಲ್ಲಿ ಸವಣೂರ ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಹೊಸಗೌಡ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್,ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಎಂ.ಜಯಾನಂದ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಲೇಶ ಎಂ.ಎನ್, ತಹಸೀಲ್ದಾರ ನಗಾರಾಜ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಇತರರು ಉಪಸ್ಥಿತರಿದ್ದರು.
  ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸೀಲ್ದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
  ನಿರ್ದಿಷ್ಟ ಔಷಧವಿಲ್ಲ
  ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ ಮಾತನಾಡಿ, ಡೆಂಘೆ ಈಡೀಸ್ ಈಜಿಪ್ತಿ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ವಿಪರೀತ ಜ್ವರ, ದೇಹದ ಮೇಲೆ ಸಣ್ಣ ಸಣ್ಣ ಗಂದೆಗಳು, ಕಣ್ಣುಗಳ ಹಿಂಭಾಗ, ಮಾಂಸ-ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ತಲೆನೋವು ಹಾಗೂ ಬಾಯಿ, ಮೂಗು, ಒಸಡುಗಳಿದ ರಕ್ತಸ್ರಾವವಾಗುವುದು ಡೆಂಘೆ ಲಕ್ಷಣಗಳಾಗಿವೆ. ರಕ್ತ ಪರೀಕ್ಷೆ ಮೂಲಕ ಜ್ವರ ಪತ್ತೆ ಹಚ್ಚಲಾಗುವುದು. ಡೆಂಗಿ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಸಾರ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.
  ಪ್ರತ್ಯೇಕ ವಾರ್ಡ್
  ಜಿಲ್ಲಾಸ್ಪತ್ರೆಯಲ್ಲಿ ಡೆಂಘೆ ಮತ್ತು ಚಿಕುನ್ ಗುನ್ಯಾ ಜ್ವರದ ಪ್ರಕರಣಗಳಿಗೆ ಪ್ರತ್ಯೇಕ ವಾರ್ಡ್ ನಿರ್ವಹಣೆ ಮಾಡಲಾಗುತ್ತಿದೆ. ಸಂಶಯಾತ್ಮಕ ಎಲ್ಲ ರೋಗಿಗಳ ರಕ್ತ ತಪಾಸಣೆ ಮಾಡಲಾಗುತ್ತಿದೆ. ಸ್ವಚ್ಛ ವಾತಾವರಣ ನಿರ್ಮಾಣ, ಸೊಳ್ಳೆಯಿಂದ ಕಚ್ಚಿಸಿಕೊಳ್ಳುವಿಕೆಯಿಂದ ರಕ್ಷಣೆ ಪಡೆಯಲು ಸೊಳ್ಳೆಪರದೆ ಬಳಕೆ, ಸೊಳ್ಳೆಬ್ಯಾಟ್, ಸೊಳ್ಳೆಬತ್ತಿ, ಸೊಳ್ಳೆ ನಿರೋಧಕ ಮಲಾಮ, ಮೈತುಂಬ ಬಟ್ಟೆ ಧರಿಸಿ ರಕ್ಷಣೆ ಪಡೆಯುವುದು, ಡೆಂಘೆ ನಿಯಂತ್ರಣ ಕ್ರಮಗಳಾಗಿವೆ. ಪ್ರಸಕ್ತ ಸಾಲಿನ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 97 ಡೆಂಘೆ ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ಸಾವು ಸಂಭವಿಲ್ಲ ಎಂದು ಡಾ.ಸರಿತಾ ಮಾಹಿತಿ ನೀಡಿದರು.

  ಬಸ್ ಪಾಸ್, ಮಾಸಾಶನ ಮತ್ತಿತರ ಬೇಡಿಕೆಗಳ ಬಗ್ಗೆ ವಾರ್ತಾ ಇಲಾಖೆ ಆಯುಕ್ತ ಸೂರಳ್‌ಕರ್ ಜೊತೆ ಚರ್ಚೆ; ಶೀಘ್ರ ಕ್ರಮದ ಭರವಸೆ

  ಬೆಂಗಳೂರು:
  ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯೂಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು, ವಾರ್ತಾ ಇಲಾಖೆಯ ಆಯುಕ್ತ ಸೂರಳ್‌ಕರ್ ವಿಕಾಸ್ ಕಿಶೋರ್ ಅವರನ್ನು ಭೇಟಿ ಮಾಡಿ ಪತ್ರಕರ್ತರ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿತು.
  ನಿವೃತ್ತರಾಗಿರುವ ಹಿರಿಯ ಪತ್ರಕರ್ತರುಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಬರಬೇಕಾಗಿರುವ ಮಾಸಾಶನ ಹಣ 2-3 ತಿಂಗಳಾದರೂ ಬರುತ್ತಿಲ್ಲ. ಇದರಿಂದಾಗಿ ಅನೇಕರಿಗೆ ಜೀವನ ನಿರ್ವಹಣೆ ಮಾಡಲು ಔಷಧಿ ಖರೀದಿಸಲು ಹಣವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ಆಗಿರುವ ಸಮಸ್ಯೆಯನ್ನು ಸರಿಪಡಿಸಿ ಪ್ರತಿ ತಿಂಗಳು ಸರಿಯಾಗಿ ಮಾಸಾಶನವನ್ನು ಅವರ ಅಕೌಂಟ್‌ಗೆ ಜಮೆ ಮಾಡಿಸಬೇಕು ಎಂದು ಆಯುಕ್ತರಿಗೆ ವಾಸ್ತವ ಸಮಸ್ಯೆ ಮನವರಿಕೆ ಮಾಡಿಕೊಡಲಾಯಿತು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು, ಮಾಸಾಶನ ಪ್ರತೀ ತಿಂಗಳು ದೊರೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.
  ಮಾಸಾಶನ ಸಮಿತಿಯಲ್ಲಿ ಅರ್ಹರನ್ನು ಆಯ್ಕೆ ಮಾಡಿ ನಾಲ್ಕೈದು ತಿಂಗಳಾದರೂ, ಅವರಿಗೆ ಇನ್ನೂ ಮಾಸಾಶನ ಮಂಜೂರಾಗಿಲ್ಲ. ಸಣ್ಣ ಪುಟ್ಟ ಕಾರಣಕ್ಕಾಗಿ ತಡೆ ಹಿಡಿದಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಮಾಸಾಶನ ಮಂಜೂರು ಮಾಡಬೇಕು ಮತ್ತು ಸಣ್ಣ ಪುಟ್ಟ ತೊಡಕುಗಳನ್ನು ನಿವಾರಣೆ ಮಾಡಿ ಅರ್ಹರೆಲ್ಲರಿಗೂ ಮಾಸಾಶನ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಬಗ್ಗೆ ಕಡತ ತರಿಸಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು. ಚುನಾವಣೆ ನೀತಿ ಸಂಹಿತೆ ಮುಗಿದ ಮೇಲೆ ಈ ಬಗ್ಗೆ ಸಭೆಯನ್ನು ಕರೆಯಲಾಗುವುದು ಎಂದರು.
  ಕೆಯುಡಬ್ಲೂೃಜೆ ಒತ್ತಾಯದ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಪ್ರಕಟಿಸಿದ್ದು, ಅದನ್ನು ಜಾರಿ ಮಾಡಲು ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ಮಾಧ್ಯಮ ಮಾನ್ಯತಾ ಕಾರ್ಡ್ ಹೊಂದಿರುವ ಪತ್ರಕರ್ತರು ಪ್ರಯಾಣಿಸುವ ಸಾರಿಗೆ ಸಂಸ್ಥೆಯ ಉಚಿತ ಬಸ್ ಪಾಸ್‌ನ ಅವಧಿ ಮುಗಿದಿದ್ದರೂ, ಇನ್ನೂ ಬಸ್ ಪಾಸ್ ನವೀಕರಣವಾಗದೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸಿಕೊಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷರು ಒತ್ತಾಯಿಸಿದರು. ಬಸ್ ಪಾಸ್ ವಿಳಂಬವಾಗುತ್ತಿರುವ ಬಗ್ಗೆ ಮತ್ತು ಪಾಸ್ ನವೀಕರಣ ಮಾಡುವಂತೆ ಈಗಾಗಲೇ ಕೆಎಸ್‌ಆರ್‌ಟಿಸಿಗೆ ಪತ್ರವನ್ನು ಬರೆಯಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಗಮನಹರಿಸುವುದಾಗಿ ಆಯುಕ್ತರು ತಿಳಿಸಿದರು.

  ಡಿವಿಜಿ ಸಂಸ್ಮರಣಾ ಕಾರ್ಯಕ್ರಮ
  ಮಂಕುತಿಮ್ಮನ ಕಗ್ಗದ ಖ್ಯಾತಿಯ ಸಾಹಿತಿ ಮತ್ತು ಪತ್ರಕರ್ತ ಹಾಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಹೆಸರಿನಲ್ಲಿ ರಾಜ್ಯದಾದ್ಯಂತ ವಾರ್ತಾ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಮಾಡಲು ಇತ್ತೀಚೆಗೆ ನಡೆದ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎನ್ನುವುದನ್ನು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ತಂದರು. ಈ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ವಾರ್ತಾ ಇಲಾಖೆಗೆ ಸಲ್ಲಿಸುವಂತೆ ಆಯುಕ್ತರು ಸೂಚಿಸಿದರು.
  ಸಂಘದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಘಟಕದ ಪ್ರದಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಕಾಸರಗೋಡು ಪತ್ರಕರ್ತರ ಸಂಘದ ಕಾರ್ಯದರ್ಶಿ ಪುರುಷೋತ್ತಮ ಪೆರ್ಲ ಮುಂತಾದವರು ನಿಯೋಗದಲ್ಲಿದ್ದರು.