More

  ಟ್ರೇಲರ್ ಮೂಲಕ ‘ಬ್ಲಿಂಕ್’ ಮಾಡಿದ ಕನ್ನಡದ ಸೈ-ಫೈ ಸಿನಿಮಾ! ಇಲ್ಲಿದೆ ನೋಡಿ ಹೊಸ ಅಪ್ಡೇಟ್​

  ಬೆಂಗಳೂರು: ‘ದಿಯಾ’ ಖ್ಯಾತಿಯ ನಟ ದೀಕ್ಷಿತ್​ ಶೆಟ್ಟಿ ಮತ್ತು ನಟಿ ಚೈತ್ರಾ ಜೆ.ಆಚಾರ್​ ಅಭಿನಯದ ಸೈನ್ಸ್​ ಫಿಕ್ಷನ್ ‘ಬ್ಲಿಂಕ್’ ಚಿತ್ರದ ಮೊದಲ ಸಾಂಗ್​ ‘ಆಗಂತುಕ’ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ರ್‍ಯಾಪ್ ವರ್ಶನ್​ ಜತೆಗೆ ಚಿತ್ರದ ಕೆಲ ಸೀನ್​ಗಳನ್ನು ಚಿತ್ರ ತಯಾರಕರು ಹಾಡಿನಲ್ಲಿ ತೋರಿಸಿದ್ದು, ಸೈ-​ಫೈ ಫಿಲಂ ಬಗ್ಗೆ ಇದೀಗ ಈ ಹಿಂದೆಯಿದ್ದ ನಿರೀಕ್ಷೆಗಳು ಈಗ ಮತ್ತಷ್ಟು ಹೆಚ್ಚಿದೆ.

  ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಪ್ರವೇಶ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್

  ಇಂದು ಬ್ಲಿಂಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸೈನ್ಸ್-ಫಿಕ್ಷನ್ ಆಧರಿತ ಕಥೆಯನ್ನು ಚಿತ್ರತಂಡ ಉತ್ತಮವಾಗಿ ಕಟ್ಟಿಕೊಟ್ಟಿರುವುದು ವಿಡಿಯೋದಲ್ಲಿ ಕಾಣಬಹುದು. ಬಹುನಿರೀಕ್ಷಿತ ಚಿತ್ರದಲ್ಲಿ ಬಹುಪಾಲು ರಂಗಭೂಮಿ ಕಲಾವಿದರೇ ಇದ್ದು, ಸದ್ಯ ಚಿತ್ರತಂಡದ ಮೇಲೆ ಸಾಕಷ್ಟು ಭರವಸೆ, ಕುತೂಹಲ ಮೂಡಿದೆ.

  ಶ್ರೀನಿಧಿ ಬೆಂಗಳೂರು ನಿರ್ದೇಶನದ ಬ್ಲಿಂಕ್​ ಚಿತ್ರವನ್ನು ರವಿಚಂದ್ರನ್​ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ವಿಶೇಷ ಕಥಾಹಂದರವನ್ನು ಹೊಂದಿದ್ದು, ಚಿತ್ರದಲ್ಲಿ ದೀಕ್ಷಿತ್​ ಶೆಟ್ಟಿ ರಂಗಭೂಮಿ ಹಿನ್ನಲೆಯುಳ್ಳ ಕಲಾವಿದನಾಗಿ ಅಭಿನಯಿಸಿದ್ದಾರೆ. ಚಿತ್ರವು ಇದೇ ಮಾರ್ಚ್​ 08ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ.

  ಇದನ್ನೂ ಓದಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಪುಟ ಅನುಮೋದನೆ..ಉಚಿತ ವಿದ್ಯುತ್​ಗಾಗಿ ಅರ್ಜಿ ಸಲ್ಲಿಸಿ

  ವಜ್ರಧೀರ್​ ಜೈನ್, ಸುರೇಶ ಆನಗಳ್ಳಿ, ಚೈತ್ರ ಜೆ.ಆಚಾರ್, ಮಂದಾರ ಬತ್ತಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಇತರ ಕಲಾವಿದರು ನಟಿಸಿದ್ದಾರೆ. ಅವಿನಾಶ ಶಾಸ್ತ್ರಿ ಮತ್ತು ಪ್ರಸನ್ನ ಕುಮಾರ್ ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಗೀತವನ್ನು ನಿರ್ವಹಿಸಿದ್ದಾರೆ.

  ‘ಗೊಂದಲ, ಹೋರಾಟ, ಪ್ರಯತ್ನ’….: ವಿಚ್ಛೇದನ ನೆನೆದು ಸಾನಿಯಾ ಭಾವುಕ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts