ಬಿಎಲ್​ಡಿಇ ಕಾಲೇಜು ಚಾಂಪಿಯನ್

ಮಹಾಲಿಂಗಪುರ: ಪಟ್ಟಣದ ಕೆಎಲ್​ಇ ಸಂಸ್ಥೆಯ ಎಸ್​ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿವಿ ಏಕವಲಯದ ಪುರುಷ ಹಾಗೂ ಮಹಿಳೆಯರ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಮಖಂಡಿಯ ಬಿಎಲ್​ಡಿಇ ಕಾಲೇಜು ಚಾಂಪಿಯನ್ ಹಾಗೂ ವಿಜಯಪುರದ ಖೇಡ್ ಕಾಲೇಜು ರನ್ನರ್​ಅಪ್ ಸ್ಥಾನ ಪಡೆದುಕೊಂಡವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ ಗಸ್ತಿ, ಇಂತಹ ಸ್ಪರ್ಧೆ ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.

100 ಕಿ.ಮೀ. ಸೈಕ್ಲಿಂಗ್​ನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ತಂಡಕ್ಕೆ ವಿಜಯಪುರದ ಖೇಡ್ ಕಾಲೇಜಿನ ಬಸವರಾಜ ಮಡ್ಡಿ, ನಂದೆಪ್ಪ ಸೌದಿ, ಪ್ರಶಾಂತ ದೇವಕ್ಕಿ, ಎಚ್.ಎಂ. ತಿಡಗುಂದಿ ಕಾಲೇಜಿನ ನಾಗಪ್ಪ ಮರಡಿ, ವಿಎಸ್​ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಬಸವರಾಜ ಬಾಗಲಕೋಟ, ಜಿಎಫ್​ಜಿಸಿ ಮನಗುಳಿ ಕಾಲೇಜಿನ ಅನುಪ ರಜಪೂತ, ಎಂ.ಎ. ಖೇಡ, ಮುದ್ದೇಬಿಹಾಳದ ಎಂಜಿವಿಸಿ ಕಾಲೇಜಿನ ಕರಿಯಪ್ಪ ಜನಗಮವರ, ಮಹಾಲಿಂಗಪುರದ ಕೆಎಲ್​ಇ ಎಸ್​ಸಿಪಿ ಕಾಲೇಜಿನ ವಿದ್ಯಾರ್ಥಿ ಪಿ.ಬಿ. ದಡ್ಡಿನವರ, ಬಾಗಲಕೋಟೆಯ ಎಸ್​ಆರ್​ಎನ್ ಕಲಾ ಕಾಲೇಜಿನ ಮಂಜುನಾಥ ಕೆಂಗಲಗುತ್ತಿ ಆಯ್ಕೆಯಾಗಿದ್ದಾರೆ.

50 ಕೀ.ಮಿ. ಸೈಕ್ಲಿಂಗ್​ನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ತಂಡಕ್ಕೆ ಜಮಖಂಡಿ ಬಿಎಲ್​ಡಿಇ ಕಾಲೇಜಿನ ವಿದ್ಯಾರ್ಥಿನಿ ಮೇಘಾ ಗುಗಾಡ, ಕೆರೂರಿನ ಜಿಎಫ್​ಜಿಸಿ ಕಾಲೇಜಿನ ರೇಣುಕಾ ದಂಡಿನ, ವಿಜಯಪುರದ ಎಂ.ಎ.ಖೇಡ್ ಶೈರಾ ಬಾನು ಲೋದಿ, ಆರತಿ ಭಾಟಿ, ಶ್ರೀದೇವಿ ನಿಕ್ಕಂ, ಮಹಾಲಿಂಗಪುರದ ಕೆಎಲ್​ಇ ಎಸ್​ಸಿಪಿ ಕಾಲೇಜಿನ ದಾನಮ್ಮ ಹರಿಜನ, ಬಂದವ್ವ ಮಿರ್ಜಿ, ಬೆಳಗಾವಿ ಬಿ.ಪಿಇಡಿ ಕಾಲೇಜಿನ ಪೂಜಾ ಮುಚಂಡಿ, ಬಾಗಲಕೋಟೆ ಬಿವಿವಿಎಸ್ ಕಾಲೇಜಿನ ಮಂಜೇಶ್ವರಿ ಗಸ್ತಿ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕ ನೀಡಲಾಯಿತು. ಮಹಾಲಿಂಗಪುರದ ದ್ವಾರ ಬಾಗಿಲಿನಿಂದ ಮುಧೋಳ ದ್ವಾರ ಬಾಗಿಲದವರೆಗೆ ಸೈಕಲ್ ಸ್ಪರ್ಧೆ ನಡೆಯಿತು.

ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ಪಿಯು ಕಾಲೇಜಿನ ಪ್ರಾಚಾರ್ಯ ಡಿ.ಬಿ.ಕೋಳಿ, ಉಪ ಪ್ರಾಚಾರ್ಯ ಆರ್.ಎ. ಸೂರ್ಯವಂಶಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಕರ್ನಾಟಕ ರಾಜ್ಯ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಶೈಲ ಕುರಣ, ಸಿಪಿಐ ಕರಿಯಪ್ಪ ಬನ್ನಿ, ಪಿಎಸ್​ಐ ಶ್ರೀಶೈಲ ಬ್ಯಾಕೋಡ, ಸಂತೋಷ ಹುದ್ದಾರ, ಡಾ.ಕೆ.ಎಂ. ಅವರಾದಿ, ಎ.ಎಂ. ಉಗಾರೆ, ಚಂದ್ರಶೇಖರ ಮೋರೆ ಇದ್ದರು.

ಗೀತಾ ಕೋಲಕಾರ ಪ್ರಾರ್ಥಿಸಿದರು. ವಿ.ಎಸ್. ಅಂಗಡಿ ಸ್ವಾಗತಿಸಿದರು. ಆರ್.ಎಸ್. ಪೂಜಾರಿ ವಂದಿಸಿದರು. ಅಶೋಕ ಕೆ.ಎಸ್. ನಿರೂಪಿಸಿದರು. 37 ಕಾಲೇಜಿನಿಂದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.