ಅಹಮದಾಬಾದ್: ಆಂಧ್ರಪ್ರದೇಶ ವಿಶಾಖಪಟ್ಟಣದ ಎಲ್ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ಸಂಭವಿಸಿದ ವಿಷಾನಿಲ ದುರಂತದ ನೆನಪು ಮಾಸುವ ಮುನ್ನವೇ, ಗುಜರಾತ್ನ ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ.
ಸ್ಫೋಟದಿಂದಾಗಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಲ್ವತ್ತಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ; ಕರೊನಾ ಹರಡುವುದರಲ್ಲಷ್ಟೇ ಅಲ್ಲ, ದೆಹಲಿ ಗಲಭೆಯಲ್ಲೂ ತಬ್ಲಿಘಿಗಳ ಕೈವಾಡ…!
ದಹೇಜ್ನ ಕೈಗಾರಿಕಾ ಪ್ರದೇಶದಲ್ಲಿರುವ ಯಶಸ್ವಿ ರಾಸಾಯನ ಪ್ರೈವೇಟ್ ಲಿಮಿಟೆಡ್ನ ಕಾರ್ಖಾನೆಯ ಬಾಯ್ಲರ್ ಸ್ಫೋಟದಿಂದಾಗಿ ಈ ದುರಂತ ಸಂಭವಿಸಿದೆ.
ಕೃಷಿ ರಾಸಾಯನಿಕಗಳ ಕಾರ್ಖಾನೆ ಇದಾಗಿದ್ದು, ಮಧ್ಯಾಹ್ನದ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 40 ಜನರಿಗೆ ಸುಟ್ಟಗಾಯಗಳಾಗಿದ್ದು, ಭರೂಚ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ; ‘ಯಾವುದಕ್ಕೂ ಜತೆಗೊಂದು ಸುತ್ತಿಗೆಯಿರಲಿ…’ ಜನರಿಗೆ ಮುಂಬೈ ಪಾಲಿಕೆ ಸಲಹೆ…..!
ರಾಸಾಯನಿಕ ಸ್ಫೋಟದಿಂದಾಗಿ ಸುತ್ತಲಿನ ಪ್ರದೇಶದಲ್ಲಿ ಅಸಹನೀಯ ವಾಸನೆ ಹರಡಿದೆ. ಈ ರಾಸಾಯನಿಕಗಳು ವಿಷಕಾರಿಯಾಗಿದ್ದು, ಲಖಿ ಮತತ್ಉ ಲುವಾರಾ ಗ್ರಾಮಗಳ ಜನರನ್ನು ದೂರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಡಿ. ಮೋದಿಯಾ ತಿಳಿಸಿದ್ದಾರೆ.
ವಿಲೀನ ಕಾಲವೂ ಮುಗೀತು… ಶುರುವಾಗಿದೆ ಖಾಸಗೀಕರಣ ಪ್ರಕ್ರಿಯೆ; ಮಾರಾಟಕ್ಕಿವೆ ಮೂರು ಸರ್ಕಾರಿ ಬ್ಯಾಂಕ್ಗಳು…!