ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್​ ಸ್ಫೋಟ?: ಪುಗೋಡಾ ಬಳಿ ಸ್ಫೋಟದ ಭಾರಿ ಸದ್ದು, ಸ್ಥಳಕ್ಕೆ ಪೊಲೀಸರ ದೌಡು

ಕೊಲಂಬೋ: ಇಲ್ಲಿಗೆ ಸಮೀಪದ ಪುಗೋಡಾ ನಗರದ ಮ್ಯಾಜಿಸ್ಟ್ರೇಟ್​ ಕೋರ್ಟ್​ ಬಳಿಯ ಬಯಲಿನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಬಹುಶಃ ಇದು ಬಾಂಬ್​ ಸ್ಫೋಟ ಇರಬೇಕು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಧಾವಿಸಿರುವ ಶ್ರೀಲಂಕಾ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಕೆಲದಿನಗಳ ಹಿಂದಷ್ಟೇ ಐಸಿಸ್​ ಉಗ್ರರು ನಡೆಸಿದ ಸರಣಿ ಬಾಂಬ್​ ಸ್ಫೋಟದಲ್ಲಿ 350ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ಘಟನೆ ಮರೆಯುವ ಮುನ್ನವೇ ಮತ್ತೊಂದು ಸ್ಫೋಟ ನಡೆದಿರುವುದರಿಂದ, ಸಹಜವಾಗಿ ಜನರು ಭಯಭೀತರಾಗಿದ್ದಾರೆ.

ಮ್ಯಾಜಿಸ್ಟ್ರೇಟ್​ ಕೋರ್ಟ್​ ಬಳಿ ಕಸದಗುಂಡಿಯಲ್ಲಿ ಯಾವುದೋ ವಸ್ತು ಸ್ಫೋಟಿಸಿದೆ. ಆ ವಸ್ತು ಯಾವುದೆಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *