ರಾಯ್ಪುರ: ಪೊಲೀಸ್ ವಾಹನದ ಮೇಲೆ ಮಾವೋವಾದಿಗಳು ನಡೆಸಿದ ಬಾಂಬ್ ದಾಳಿ ನಡೆಸಿದ್ದು ಇದರಲ್ಲಿ ಓರ್ವ ನಾಗರಿಕ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಛತ್ತೀಸ್ಗಢದ ಬಸ್ಥಾರ್ ಜಿಲ್ಲೆಯ ದಂತೇವಾಡದಲ್ಲಿ ಘಟನೆ ನಡೆದಿದ್ದು ಸುಧಾರಕ ಸ್ಪೋಟಕಗಳನ್ನು ಕೃತ್ಯಕ್ಕೆ ಬಳಸಲಾಗಿದೆ ಎಂದು ವರದಿಯಾಗಿದೆ.
ಹಿಂತಿರುಗುವ ವೇಳೆ ಘಟನೆ
ಛತ್ತೀಸ್ಗಢದ ರಾಜ್ಯ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧರಿಸಿ ಪೊಲೀಸರು ಆ್ಯಂಟಿ ಮಾವೋಈಸ್ಟ್ ಕಾರ್ಯಾಚರಣೆಯನ್ನು ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿ: ಬುಡಕಟ್ಟು ಬಾಲಕಿ ಹತ್ಯೆ ಪ್ರಕರಣ; ಪೊಲೀಸ್ ಠಾಣೆಗೆ ಬೆಂಕಿ
ಮೃತ ಪೊಲೀಸ್ ಅಧಿಕಾರಿಗಳು ಜಿಲ್ಲಾ ಸಶಸ್ತ್ರ ಮೀಸಲು ಪಡೆ(DRG)ಗೆ ಸೇರಿದ್ದವರು ಎಂದು ತಿಳಿದು ಬಂದಿದ್ದು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಹಿಂತಿರುಗುವ ವೇಳೆ ದಾಳಿ ಮಾಡಲಾಗಿದೆ.
ಮಾಹಿತಿ ಪಡೆದ ಅಮಿತ್ ಷಾ
ಇನ್ನು ಪೊಲೀಸರ ಮೇಲೆ ಮಾವೋವಾದಿಗಳ ದಾಳಿ ಕುರಿತು ಛತ್ತೀಗಢದ ಮುಖ್ಯಮಂತ್ರಿ ಬೂಪೇಶ್ ಬಘೇಲ್ರಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾಹಿತಿ ಪಡೆದಿದ್ದು ಶೀಘ್ರ ಕ್ರಮದ ಭರವಸೆಯನ್ನು ನೀಡಿದ್ದಾರೆ.
ಇದು ಅತ್ಯಂತ ದುಃಖಕರ ಸುದ್ದಿಯಾಗಿದ್ದು ಮೃತರ ಕುಟುಂಬಸ್ಥರ ನೋವಿನಲ್ಲಿ ನಾವು ಭಾಗಿಯಾಗುತ್ತೇವೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಭೂಪೇಶ್ ಭಘೇಲ್ ಟ್ವೀಟ್ ಮಾಡಿದ್ದಾರೆ.